ಪರಿಹಾರ ನೀಡುವ ಬದಲು ಆತ್ಮಹತ್ಯೆ ತಡೆಯಿರಿ: ಸುಪ್ರೀಂ
Team Udayavani, Jul 8, 2017, 8:36 AM IST
ಹೊಸದಿಲ್ಲಿ: “ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯುವುದು ಸರಕಾರದ ಕೆಲಸವೇ ಹೊರತು, ಅವರು ಆತ್ಮಹತ್ಯೆ ಮಾಡಿಕೊಂಡ ನಂತರ ಪರಿಹಾರ ನೀಡುವುದಲ್ಲ.’ ಇದು ತಮಿಳುನಾಡು ಸರಕಾರದ ವಿರುದ್ಧ ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿರುವ ಪರಿ. ಅಷ್ಟೇ ಅಲ್ಲ, “ಬೆಳೆ ಹಾನಿಯಾದ ಸಂದರ್ಭಗಳಲ್ಲಿ ಬ್ಯಾಂಕ್‌ಗಳು ಸುಸ್ತಿದಾರ ರೈತರ ಕೃಷಿ ಉಪಕರಣಗಳನ್ನು ಜಪ್ತಿ ಮಾಡಬಾರದು,’ ಎಂದೂ ತಾಕೀತು ಮಾಡಿದೆ.
ಸಾವಿರಾರು ಕೋಟಿ ರೂ. ಸಾಲ ಮಾಡಿ ವಂಚಿಸಿದ ವಿಜಯ್ ಮಲ್ಯ ವಿದೇಶದಲ್ಲಿ ಅವಿತುಕೊಳ್ಳಲು ಬಿಟ್ಟಿರುವ ಬ್ಯಾಂಕ್ ಗಳು, ಅಮಾಯಕ ರೈತರ ಟ್ರ್ಯಾಕ್ಟರ್ ಮತ್ತಿತರ ಕೃಷಿ ಸಾಧನಗಳನ್ನು ಜಪ್ತಿ ಮಾಡಿ ಅಮಾನವೀಯವಾಗಿ ವರ್ತಿಸು ತ್ತಿವೆ. ಇದರಿಂದ ರೈತರು ಆತ್ಮಹತ್ಯೆಗೆ ಶರಣಾ ಗುತ್ತಿದ್ದು, ಅವರನ್ನು ಈ ಸ್ಥಿತಿಯಿಂದ ಪಾರುಮಾಡಬೇಕೆಂದು ಕೋರಿ ಎನ್‌ಜಿಒವೊಂದು ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಸುಪ್ರೀಂ “ಮರಣೋತ್ತರ ಪರಿಹಾರದ ಬದಲು ಆತ್ಮಹತ್ಯೆ ತಡೆಯಿರಿ. ರೈತರಿಗೆ ಕಿರುಕುಳ ನೀಡುವ ಬ್ಯಾಂಕ್‌ಗಳಿಗೆ ಕಡಿವಾಣ ಹಾಕಿ’ ಎಂದು ತಮಿಳುನಾಡು ಸರಕಾರಕ್ಕೆ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್ ಶೆಫರ್ಡ್ ನಾಯಿ ಕೊಂದ!
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.