Prevention of air pollution; ಪಟಾಕಿ ಬಳಕೆ ಆದೇಶ ಇಡೀ ದೇಶಕ್ಕೆ ಅನ್ವಯ
Team Udayavani, Nov 8, 2023, 12:45 AM IST
ಹೊಸದಿಲ್ಲಿ: ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪಟಾಕಿ ತಯಾರಿಕೆಯಲ್ಲಿ ನಿಷೇಧಿತ ರಾಸಾಯನಿಕಗಳನ್ನು ಬಳಸದಂತೆ ನೀಡಿರುವ ಆದೇಶ ಬರೀ ದಿಲ್ಲಿ-ಎನ್ಸಿಆರ್ಗೆ ಸೀಮಿತವಾದದ್ದಲ್ಲ, ಇಡೀ ದೇಶಕ್ಕೆ ಅನ್ವಯವಾ ಗು ವಂಥದ್ದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ರಾಜಸ್ಥಾನದಲ್ಲೂ ಕೋರ್ಟ್ನ ಆದೇಶ ಪಾಲಿಸಿ ಅಂಥ ಪಟಾಕಿಗಳ ಬಳಕೆಯನ್ನು ತಡೆಯುವಂತೆ ನಿರ್ದೇಶನ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಎಂ.ಸುಂದ್ರೇಶ್ ಅವರ ನ್ಯಾಯಪೀಠ ಆಲಿಸಿದೆ. ಈ ವೇಳೆ ನ್ಯಾಯಾ ಲಯದ ಆದೇಶ ಕೇವಲ ದಿಲ್ಲಿ ಮತ್ತದರ ಸುತ್ತ ಲಿನ ರಾಜ್ಯಗಳಿಗೆ ಮಾತ್ರ ಸೀಮಿತವಾದದ್ದು ಎನ್ನುವ ತಪ್ಪು ಕಲ್ಪನೆ ಇದೆ. ಆದರೆ ಇದು ಇಡೀ ದೇಶಕ್ಕೆ ನೀಡಿರುವ ಆದೇಶ ಎಲ್ಲ ರಾಜ್ಯಗಳೂ ಇದನ್ನು ಪಾಲಿಸಬೇಕು ಎಂದಿದೆ. ಇದಲ್ಲದೇ, ನ್ಯಾಯಪೀಠ ಕಳೆ ಸುಡುವಿಕೆ ವಿಚಾರವನ್ನು ಕೈಗೆತ್ತಿ ಕೊಂಡು ಪಂಜಾಬ್, ಹರಿಯಾಣ, ಉತ್ತರಪ್ರದೇಶ, ರಾಜ ಸ್ಥಾನ ಸರಕಾರವನ್ನು ತರಾಟೆ ತೆಗೆದುಕೊಂಡಿದೆ. ಈ ರಾಜ್ಯ ಗಳಲ್ಲಿ ಕಳೆಸುಡುವ ಪ್ರಮಾಣ ಮಿತಿ ಮೀರುತ್ತಿದೆ ನೀವು ಹೇಗೆ ಮಾಡುತ್ತಿರೋ ಗೊತ್ತಿಲ್ಲ, ಒಟ್ಟಾರೆ ಕಳೆ ಸುಡುವಿಕೆ ನಿಲ್ಲ ಬೇಕು ಎಂದಿದೆ. ಇದೇ ವೇಳೆ ದಿಲ್ಲಿ ಸರಕಾರದ ಸರಿ-ಬೆಸ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.