ಮೋದಿಗೆ ಬಂದ ತರಹೇವಾರಿ ಗಿಫ್ಟ್ ಗಳ ಹರಾಜು ಆರಂಭ
Team Udayavani, Jan 28, 2019, 12:30 AM IST
ನವದೆಹಲಿ: ದೇಶ ವಿದೇಶಗಳ ಪ್ರವಾಸದ ವೇಳೆ ತಮಗೆ ಬಂದ ಉಡುಗೊರೆಗಳನ್ನು ಹರಾಜಿಗೆ ಹಾಕಿ, ಅದರಿಂದ ಬಂದ ಹಣವನ್ನು “ಗಂಗಾ ಶುದ್ಧೀಕರಣ’ಕ್ಕೆ ಬಳಸುವ ಮಹದೋದ್ದೇಶಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.
ಇದರನ್ವಯ, ದೆಹಲಿಯ “ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್’ನಲ್ಲಿ (ಎನ್‌ಜಿಎಂಎ) ಈ ಉಡುಗೊರೆಗಳ ಹರಾಜು ಭಾನುವಾರದಿಂದ ಆರಂಭಗೊಂಡಿದೆ. 31ರವರೆಗೆ ನಡೆಯಲಿರುವ ಈ ಹರಾಜಿನಲ್ಲಿ ಮೊದಲೆರಡು ದಿನ (ಜ. 27 ಮತ್ತು 28) ಬಹಿರಂಗ ಹರಾಜು ನಡೆಯಲಿದ್ದರೆ, ಜ. 29ರಿಂದ 31ರವರೆಗೆ ಆನ್‌ಲೈನ್ ಹರಾಜು ನಡೆಯಲಿದೆ.
ಇದು 2ನೇ ಹರಾಜು
ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ ನಡೆಯುತ್ತಿರುವ 2ನೇ ಹರಾಜು ಇದು. 2014ರಲ್ಲಿ ತಾವು ಪ್ರಧಾನಿಯಾದಾಗಿನಿಂದ ಬಂದಿದ್ದ ಉಡುಗೊರೆಗಳನ್ನು ಮೊದಲು 2015ರಲ್ಲಿ ಹರಾಜು ಹಾಕಿದ್ದರು. ಅದರಿಂದ 8.3 ಕೋಟಿ ರೂ. ಬಂದಿತ್ತು. ಅದರಲ್ಲಿ ಅವರ ಹೆಸರು ಅಡಕವಾಗಿದ್ದ ಸೂಟ್ ಸಹ ಸೇರಿತ್ತು.
ಏನೇನಿದೆ ಹರಾಜಿನಲ್ಲಿ?
ವಿವಿಧ ಕಲಾಕೃತಿಗಳು, ಪಗಡಿ-ಪೇಟಾಗಳು, ಪಂಚೆ-ಶಲ್ಯಗಳು, ಮೋದಿ ಭಾವಚಿತ್ರದ ಕಲಾಕೃತಿಗಳು, ಮರದಿಂದ ತಯಾರಿಸಲಾದ ಬೈಕ್, ಸ್ವಾಮಿ ವಿವೇಕಾನಂದರಂತೆ ಧ್ಯಾನಸ್ಥರಾಗಿರುವ ಮೋದಿಯವರ ಕಲಾಕೃತಿ, ಒಂದು ಸ್ವರ್ಣ ಲೇಪಿತ ರಾಧಾ-ಕೃಷ್ಣ ಮೂರ್ತಿ (ಮೂಲ ಬೆಲೆ- 20,000 ರೂ.), ಬೆಳ್ಳಿ ಲೇಪಿತ ಸ್ಮರಣಿಕೆ (ಮೂಲ ಬೆಲೆ- 30,000 ರೂ.) ಮುಂತಾದವು.
ಆನ್‌ಲೈನ್ ಹರಾಜು ಹೇಗೆ?
http://pmmementos.gov.in ವೆಬ್‌ಸೈಟ್‌ನ ಮೂಲಕ ಪ್ರಧಾನಿ ಉಡುಗೊರೆಗಳ ಹರಾಜಿನಲ್ಲಿ ಪಾಲ್ಗೊಳ್ಳಬಹುದು. ಹರಾಜಿನಲ್ಲಿ ಭಾಗವಹಿಸಲಿಚ್ಛಿಸುವರು ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.
ಸುಲಭ, ಸರಳ
ವೆಬ್‌ಸೈಟ್‌ನ ಕ್ಯಾಟಗರಿ ವಿಭಾಗದಲ್ಲಿ ಬ್ರಾಸ್ (ಹಿತ್ತಾಳೆ), ಗೋಲ್ಡ್, ಫೋಟೋ ಫ್ರೆàಮ್, ಸೆರಾಮಿಕ್, ಮೆಟಾಲಿಕ್, ಪಾಪ್, ಕ್ಲಾತ್, ಸಿಲ್ವರ್, ಗ್ಲಾಸ್, ಫೋಟೋ, ವುಡನ್ ಐಟಂ (ಮರದಿಂದ ಮಾಡಿದ ಉಡುಗೊರೆ) ಹಾಗೂ “ಇತರೆ’ ಉಪವಿಭಾಗಗಳಿವೆ. ಹರಾಜಿನಲ್ಲಿ ಪಾಲ್ಗೊಳ್ಳುವವರು ಇವುಗಳ ಮೂಲಕ, ತಮಗೆ ಯಾವ ಬಗೆಯ ಉಡುಗೊರೆಗಳು ಬೇಕೆಂದು ಆಯ್ಕೆ ಮಾಡಿಕೊಳ್ಳಬಹುದು. ಜತೆಗೆ, ಹರಾಜುನಲ್ಲಿ ಭಾಗವಹಿಸುವವರ ಅನುಕೂಲಕ್ಕಾಗಿ “ಬಳಕೆದಾರರ ಮಾರ್ಗಸೂಚಿ’ ಸಹ ಉಂಟು.
ಅಂಕಿ-ಅಂಶ:
1900 – ಹರಾಜಿಗಿಡಲಾಗಿರುವ ಒಟ್ಟು ಉಡುಗೊರೆಗಳು
ರೂ. 30,000 – ಗರಿಷ್ಠ ಮೂಲ ಬೆಲೆ
ರೂ. 200 – ಕನಿಷ್ಠ ಮೂಲ ಬೆಲೆ
4.76 ಕೆಜಿ – ಏಕೈಕ ಸ್ವರ್ಣ ಲೇಪಿತ ರಾಧಾ ಕೃಷ್ಣ ಮೂರ್ತಿಯ ತೂಕ
2.22 ಕೆಜಿ – ಹರಾಜಿನಲ್ಲಿರುವ ಏಕೈಕ ಬೆಳ್ಳಿ ಲೇಪಿತ ಸ್ಮರಣಿಕೆಯ ತೂಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Wikipedia: ಪಕ್ಷಪಾತ, ತಪ್ಪು ಮಾಹಿತಿ ದೂರು: ವಿಕಿಪೀಡಿಯಾಗೆ ಕೇಂದ್ರದಿಂದ ನೋಟಿಸ್
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
MUST WATCH
ಹೊಸ ಸೇರ್ಪಡೆ
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.