Politics ನಲ್ಲಿ ನೂಬ್ ಯಾರು ಎಂದ ಪ್ರಧಾನಿ ನರೇಂದ್ರ ಮೋದಿ
Team Udayavani, Apr 14, 2024, 1:22 AM IST
ಹೊಸದಿಲ್ಲಿ: ದೇಶದ ಪ್ರಖ್ಯಾತ ಗೇಮರ್ಗಳ ಜತೆಗೆ ಸಂವಾದ ನಡೆಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಗೇಮರ್ ಭಾಷೆಯಲ್ಲೇ ವಿಪಕ್ಷಗಳ ನಾಯಕರನ್ನು “ನೂಬ್’ಗಳೆಂದು ಪರೋಕ್ಷವಾಗಿ ವ್ಯಂಗ್ಯ ಮಾಡಿದ್ದಾರೆ.
ಇತ್ತೀಚೆಗಷ್ಟೇ ಗೇಮಿಂಗ್ ಕ್ಷೇತ್ರದ ಬೆಳವಣಿಗೆ ಮತ್ತು ಅದರಲ್ಲಿನ ಸಮಸ್ಯೆಗಳ ಕುರಿತಂತೆ ಕೆಲವು ಪ್ರಖ್ಯಾತ ಗೇಮರ್‌ಗಳೊಂದಿಗೆ ಮೋದಿ ಸಂವಾದ ನಡೆಸಿದ್ದರು.
ಆ ಕುರಿತ ವೀಡಿಯೋವನ್ನು ಶನಿವಾರ ಜಾಲತಾಣಗಳಲ್ಲೂ ಹಂಚಿಕೊಂಡಿದ್ದಾರೆ. ಅದರಲ್ಲಿ “ಗೇಮರ್ಗಳು ಬಳಸುವ “ನೂಬ್’ ಪದವನ್ನು ನಾನೇನಾದಾರೂ ಚುನಾವಣೆಗಳಲ್ಲಿ ಬಳಸಿದರೆ ಜನರಿಗೆ ನಾನು ಯಾರ ಬಗ್ಗೆ ಹೇಳುತ್ತಿದ್ದೇನೆ ಎಂದು ಅಚ್ಚರಿಯಾಗಬಹುದು! ಆದರೆ ನಿಮಗೆ ನಾನು ಹೇಳಿದ ಕೂಡಲೇ ಖಚಿತವಾಗಿ ನಾನು ಹೇಳುತ್ತಿರುವ ವ್ಯಕ್ತಿಯ ಬಗ್ಗೆ ತಿಳಿಯಲಿದೆ’ ಎಂದಿದ್ದಾರೆ.
ಸಾಮಾನ್ಯವಾಗಿ ಗೇಮರ್ಗಳು ಆಟವಾಡಲು ಬಾರದ ಪ್ಲೇಯರ್‌ಗಳನ್ನು ಅಥವಾ ಹೊಸದಾಗಿ ಗೇಮಿಂಗ್‌ಗೆ ಬಂದವರನ್ನು “ನೂಬ್’ ಗಳೆಂದು ಸಂಬೋಧಿಸುತ್ತಾರೆ.
Had a wonderful interaction with youngsters from the gaming community… You would love to watch this! https://t.co/TdfdRWNG8q
— Narendra Modi (@narendramodi) April 13, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.