ಏಕಭಾರತ ಶ್ರೇಷ್ಠ ಭಾರತ, ಪ್ಲಾಸ್ಟಿಕ್‌ ಮುಕ್ತಿಗೆ ಪ್ರಧಾನಿ ಕರೆ

ಮನ್‌ ಕೀ ಬಾತ್‌ ಸಂವಾದದಲ್ಲಿ ನರೇಂದ್ರ ಮೋದಿ ಅಂತರಂಗದ ಮಾತು

Team Udayavani, Nov 24, 2019, 7:55 PM IST

man-ki-parvati

ನವದೆಹಲಿ: ಪ್ಲಾಸ್ಟಿಕ್‌ ಮುಕ್ತ ಭಾರತ, ಏಕ ಭಾರತ-ಶ್ರೇಷ್ಠ ಭಾರತ, ದೇಶೀಯ ಭಾಷೆಗಳನ್ನು ಉಳಿಸಿಕೊಳ್ಳುವುದು ಹೇಗೆ? ಗೂಗಲ್‌ನಿಂದ ಓದುವ ಅಭ್ಯಾಸ ಹೇಗೆ ಹಾಳಾಗುತ್ತಿದೆ? ನ.26ರ ಸಂವಿಧಾನ ದಿನಾಚರಣೆಗೆ ಸಿದ್ಧತೆ…ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್‌ ಕೀ ಬಾತ್‌ನಲ್ಲಿ ಆದ್ಯತೆ ನೀಡಿರುವ ಸಂಗತಿಗಳಿವು.

ಟೀವಿ ನೋಡಲ್ಲ:
ಮನ್‌ ಕೀ ಬಾತ್‌ ವೇಳೆ ಪ್ರಧಾನಿ ಜೊತೆ ನಾಲ್ಕು ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು. ಅವರೊಂದಿಗೆ ನಡೆಸಿದ ಸಂವಾದದಲ್ಲಿ ಕೆಲವು ಪ್ರಮುಖ ಚರ್ಚೆಗಳು ನಡೆದವು. ಈ ವೇಳೆ ಪ್ರಧಾನಿ, ತಾನು ಟೀವಿ, ಸಿನಿಮಾ ನೋಡುವುದಿಲ್ಲ. ಅದಕ್ಕೆ ಸಮಯವೂ ಸಿಗುವುದಿಲ್ಲ ಎಂದರು. ನನಗೆ ಓದುವುದೆಂದರೆ ಬಹಳ ಇಷ್ಟ. ಪುಸ್ತಕವನ್ನು ಎಲ್ಲಿಗೆ ಬೇಕಾದರೂ ಒಯ್ಯಬಹುದು. ಆದರೆ ಈಗೀಗ ಅಡ್ಡದಾರಿಗಳು ಬಂದಿವೆ. ಏನೇ ಬೇಕಾದರೂ ಗೂಗಲ್‌ನಲ್ಲಿ ಹುಡುಕುವ ಅಭ್ಯಾಸವಾಗಿರುವುದರಿಂದ ನನ್ನ ಓದುವ ಅಭ್ಯಾಸ ಕುಗ್ಗಿದೆ.

ಮುಂದಿನ ವರ್ಷ ತುಂಗಭದ್ರಾ ನದಿ ಪುಷ್ಕರ:
ಏಕಭಾರತ, ಶ್ರೇಷ್ಠಭಾರತ ಎನ್ನುವುದು ನಮ್ಮ ಕಲ್ಪನೆ. ಭಾರತ ಒಂದು ವಿಶಾಲ, ವೈವಿಧ್ಯಮಯವಾದ ಸಂಸ್ಕೃತಿಯಿರುವ ದೇಶ. ನಮ್ಮ ದೇಶದ ಪ್ರಾಚೀನರು ದೇಶವನ್ನು ಹಲವುಮಾರ್ಗದ ಮೂಲಕ ಬೆಸೆದಿದ್ದರು. ನಿಮಗೆ ಗೊತ್ತಿರಲಿ ದೇಶದ 12 ನದಿಗಳ ಪೈಕಿ ಒಂದು ನದಿಯಲ್ಲಿ ಪ್ರತೀವರ್ಷ ಪುಷ್ಕರ ಎಂಬ ಉತ್ಸವ ನಡೆಯುತ್ತದೆ. ಅದಕ್ಕೆ ದೇಶದ ಮೂಲೆಮೂಲೆಗಳಿಂದ ಜನರು ಬರುತ್ತಾರೆ. ಈ ವರ್ಷ ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ ಹಾಗೆ ನಡೆದಿತ್ತು. ಕಳೆದವರ್ಷ ತಮಿಳುನಾಡಿನ ತಾಮ್ರಪರ್ಣ ನದಿಯಲ್ಲಿ ನಡೆದಿತ್ತು. ಮುಂದಿನವರ್ಷ ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ ರಾಜ್ಯಗಳಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಪುಷ್ಕರ ನಡೆಯಲಿದೆ.

ಪ್ಲಾಸ್ಟಿಕ್‌ ಮುಕ್ತ ಭಾರತಕ್ಕೆ ಪಣ:
ಇತ್ತೀಚೆಗೆ ವಿಶಾಖಪಟ್ಟಣದ ಸಮುದ್ರದಾಳದಿಂದ ಸ್ಕೂಬಾ ಡೈವರ್‌ಗಳು 4000 ಕೆಜಿ ಪ್ಲಾಸ್ಟಿಕ್ಕನ್ನು ಹೊರತೆಗೆದಿದ್ದಾರೆ. ಈಗ ಅದೊಂದು ಅಭಿಯಾನವಾಗಿದೆ. ಬರೀ 13 ದಿನದಲ್ಲಿ ಕ್ರಾಂತಿ ಮಾಡಿದ್ದಾರೆ. ನಾವು ಪ್ಲಾಸ್ಟಿಕ್‌ ಮುಕ್ತ ಭಾರತಕ್ಕೆ ಪಣತೊಡಬೇಕು.

ನಾಳೆ 71ನೇ ಸಂವಿಧಾನ ದಿನ:
ಭಾರತ ಸಂವಿಧಾನ ಅಳವಡಿಸಿಕೊಂಡು ನ.26ಕ್ಕೆ 70 ವರ್ಷ ಮುಗಿಯುತ್ತದೆ. 71ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಇದು ಬಹಳ ಮಹತ್ವದ ದಿನ. ಇದಕ್ಕಾಗಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದಿದ್ದಾರೆ ಮೋದಿ.

ಸಂವಾದದಲ್ಲಿ ಬೆಂಗಳೂರಿನ ಎನ್‌ಸಿಸಿ ಕೆಡೆಟ್‌ ಜಿ.ವಿ.ಹರಿ
ಎನ್‌ಸಿಸಿ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಆಯ್ದ ನಾಲ್ಕು ಎನ್‌ಸಿಸಿ ಕೆಡೆಟ್‌ಗಳೊಂದಿಗೆ ಮನ್‌ ಕೀ ಬಾತ್‌ ವೇಳೆ ಸಂವಾದ ನಡೆಸಿದರು. ಇದರಲ್ಲಿ ಕರ್ನಾಟಕದ ಜಿ.ವಿ.ಹರಿ ಕೂಡ ಸೇರಿದ್ದರು. ಹರಿ ಬೆಂಗಳೂರಿನ ಕ್ರಿಸ್ತುಜಯಂತಿ ಕಾಲೇಜಿನಲ್ಲಿ ಓದುತ್ತಿದ್ದಾರೆ. ಶನಿವಾರವಷ್ಟೇ ಸಿಂಗಾಪುರದಲ್ಲಿ ಮುಗಿದ 6 ದೇಶಗಳ ಯುವ ವಿನಿಮಯ ಕಾರ್ಯಕ್ರಮವನ್ನು ಮುಗಿಸಿ ದೇಶಕ್ಕೆ ಹಿಂತಿರುಗಿದ್ದರು. ಭಾನುವಾರ ಪ್ರಧಾನಿಯೊಂದಿಗೆ ನೇರವಾಗಿ ಸಂವಾದ ನಡೆಸುವ ಅವಕಾಶ ಅವರಿಗೆ ಲಭಿಸಿತ್ತು. ಈ ವೇಳೆ ಅವರು ಕೇಳಿದ ಪ್ರಶ್ನೆ ಬಹಳ ಪ್ರಮುಖವಾಗಿತ್ತು. ಒಂದು ವೇಳೆ ನೀವು ರಾಜಕೀಯ ಪ್ರವೇಶಿಸಿರದಿದ್ದರೆ ಏನಾಗಿರುತ್ತಿದ್ದಿರಿ ಎಂಬ ಅವರ ಪ್ರಶ್ನೆಗೆ ಪ್ರಧಾನಿಗಳು ಗಂಭೀರವಾಗಿಯೇ ಉತ್ತರಿಸಿದರು. ಈ ಪ್ರಶ್ನೆಗೆ ಉತ್ತರಿಸುವುದು ಬಹಳ ಕಷ್ಟ. ಕೆಲವು ಮಕ್ಕಳು ತಾವು ಏನಾಗಬೇಕೆಂದು ಯೋಚಿಸುತ್ತಾರೆ. ಆದರೆ ನಾನು ಹಾಗೆ ಯೋಚಿಸಿಯೇ ಇರಲಿಲ್ಲ. ಒಂದಂತೂ ಸತ್ಯ, ನನಗೆ ರಾಜಕೀಯಕ್ಕೆ ಬರಬೇಕೆಂಬ ಯಾವುದೇ ಆಸಕ್ತಿಯೂ ಇರಲಿಲ್ಲ. ಈಗ ಬಂದಮೇಲೆ ಹಗಲೂ ಇರುಳು ಈ ದೇಶದ ಉನ್ನತೀಕರಣಕ್ಕಾಗಿ ಚಿಂತಿಸುತ್ತೇನೆ. ಪ್ರಾಮಾಣಿಕವಾಗಿ ನನ್ನನ್ನು ಅರ್ಪಿಸಿಕೊಂಡಿದ್ದೇನೆ ಎಂದು ಪ್ರಧಾನಿ ಉತ್ತರಿಸಿದ್ದಾರೆ.

ಮಾತೃಭಾಷೆ ನಿರ್ಲಕ್ಷಿಸಿ ಮಾಡುವ ಅಭಿವೃದ್ಧಿ ಅರ್ಥಹೀನ
2019ನ್ನು ವಿಶ್ವಸಂಸ್ಥೆ ದೇಶೀಯ ಭಾಷೆಗಳ ವರ್ಷ ಎಂದು ಘೋಷಿಸಿದೆ. ಬರೀ 10,000 ಮಂದಿಯಿರುವ ಉತ್ತರಾಖಂಡದ ರಂಗ ಸಮುದಾಯ ಲಿಪಿಯಿಲ್ಲದ ತಮ್ಮ ಭಾಷೆಯನ್ನು ಭಾರೀ ಹೋರಾಟದ ಮೂಲಕ ಉಳಿಸಿಕೊಂಡಿದ್ದಾರೆ. ಅದು ಎಲ್ಲರಿಗೂ ಸ್ಫೂರ್ತಿಯಾಗಬೇಕು. 150 ವರ್ಷದ ಹಿಂದೆ ಭರತೇಂದು ಹರಿಶ್ಚಂದ್ರ, ಒಬ್ಬನ ಭಾಷಾ ಬೆಳವಣಿಗೆ, ಅವನ ಸರ್ವಾಂಗೀಣ ಬೆಳವಣಿಗೆಯ ಮೂಲ. ಮಾತೃಭಾಷೆ ನಿರ್ಲಕ್ಷಿಸಲ್ಪಟ್ಟರೆ ಉಳಿದೆಲ್ಲ ಅಭಿವೃದ್ಧಿಯೂ ಅರ್ಥಹೀನ ಎಂದಿದ್ದರು. 19ನೇ ಶತಮಾನದಲ್ಲಿ ತಮಿಳುನಾಡಿನ ಕವಿ ಸುಬ್ರಹ್ಮಣ್ಯ ಭಾರತಿ-ಭಾರತಮಾತೆಗೆ 30 ಕೋಟಿ ಮುಖಗಳು, ಒಂದು ದೇಹ, 18 ಭಾಷೆ, ಒಂದೇ ಯೋಚನೆ ಎಂದಿದ್ದರು.

ಟಾಪ್ ನ್ಯೂಸ್

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.