ಮೇ 3ರವರೆಗೆ ದೇಶಾದ್ಯಂತ ಲಾಕ್ ಡೌನ್ ಕಂಟಿನ್ಯೂ: ಪ್ರಧಾನಿ ಮೋದಿ
‘We the people of india’ ಮಾತನ್ನು ದೇಶವಾಸಿಗಳು ಇಂದು ನಿಜವಾಗಿಸಿದ್ದಾರೆ
Team Udayavani, Apr 14, 2020, 10:04 AM IST
ನವದೆಹಲಿ: ದೇಶಾದ್ಯಂತ ಕೋವಿಡ್ 19 ವೈರಸ್ ಹರಡುವುದಕ್ಕೆ ನಿರ್ಬಂಧ ಹೇರುವ ಸಲುವಾಗಿ ಮಾರ್ಚ್ 25ರಿಂದ 21 ದಿನಗಳ ಕಾಲ ದೇಶಾದ್ಯಂತ ಹೇರಿದ್ದ ಲಾಕ್ ಡೌನ್ ಅವಧಿ ಇಂದಿಗೆ ಮುಕ್ತಾಯಗೊಂಡಿದೆ. ಈ ನಿಟ್ಟಿನಲ್ಲಿ ದೇಶವನ್ನುದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಮಾತನಾಡಿದರು.
ಈಗಿರುವ ಲಾಕ್ ಡೌನ್ ಪರಿಸ್ಥಿತಿಯನ್ನು ಮೇ 3ರವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ. ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನಡೆಸಿದ ಮಾತುಕತೆಯಲ್ಲಿ ಹೆಚ್ಚಿನವರು ಲಾಕ್ ಡೌನ್ ಮುಂದುವರಿಸಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಮತ್ತು ಬಹಳಷ್ಟು ಜನರ ಅಪೇಕ್ಷೆಯೂ ಇದೇ ಆಗಿತ್ತು. ಹಾಗಾಗಿ ಇದೆಲ್ಲವನ್ನೂ ಪರಿಗಣಿಸಿ ಲಾಕ್ ಡೌನ್ ಪರಿಸ್ಥಿತಿಯನ್ನು ಮುಂದುವರಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.
ಅವರ ಭಾಷಣದ ಮುಖ್ಯಾಂಶಗಳು:
– ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ಈ ವೈರಸ್ ವಿರುದ್ಧ ದೇಶದ ಹೋರಾಟದಲ್ಲಿ ನೀವು ಕೈ ಜೋಡಿಸಿದ್ದೀರಿ.
– ಇಂದು ಯುಗಾದಿ ಹೊಸ ವರ್ಷದ ಸಂಭ್ರಮ. ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಗಳಿಂದ ಆಚರಿಸುತ್ತಿದ್ದಾರೆ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
– ಕೋವಿಡ್ ವೈರಸ್ ಭಾರತಕ್ಕೆ ಕಾಲಿಡುವ ಮುನ್ನವೇ ನಾವು ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದ್ದೆವು.
– ಈ ಮಹಾಮಾರಿಯ ವಿಷಯದಲ್ಲಿ ನಾವು ಬೇರೆ ದೇಶಗಳೊಂದಿಗೆ ಹೋಲಿಸಿಕೊಳ್ಳುವುದ ಸರಿಯಲ್ಲವಾದರೂ ಇಂದು ನಮ್ಮಲ್ಲಿ ಹೋಲಿಸಿದರೆ ಆ ದೇಶಗಳು ಕೋವಿಡ್ ವೈರಸ್ ಕಾಟಕ್ಕೆ ಬಹಳಷ್ಟು ನಲುಗಿ ಹೋಗಿವೆ.
– ನಮ್ಮಲ್ಲಿ ಈ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ನಕಾಲಿ ನಿರ್ಧಾರಗಳನ್ನು ಕೈಗೊಂಡ ಕಾರಣ ದೇಶದಲ್ಲಿ ಈ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ನಿಯಂತ್ರಣದಲ್ಲಿದೆ ಎಂದೇ ಹೇಳಬಹುದು.
– ಸೋಷಿಯಲ್ ಡಿಸ್ಟೆನ್ಸಿಂಗ್ ನಮ್ಮಲ್ಲಿ ಪರಿಣಾಮಕಾರಿ ಫಲಿತಾಂಶವನ್ನು ನೀಡಿದೆ. ಆರ್ಥಿಕ ದೃಷ್ಟಿಯಲ್ಲಿ ನೋಡಿದರೆ ಇದು ನಮಗೆ ಬಹಳ ದುಬಾರಿಯಾದದ್ದು ನಿಜವಾದರೂ, ದೇಶವಾಸಿಗಳ ಪ್ರಾಣದ ಮುಂದೆ ಇದೆಲ್ಲಾ ಲೆಕ್ಕಕ್ಕೇ ಬರುವುದಿಲ್ಲ.
– ಲಾಕ್ ಡೌನ್ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರಕಾರಗಳ ಪಾತ್ರವೂ ದೊಡ್ಡದು.
– ದೇಶದಲ್ಲಿ ಇನ್ನಷ್ಟು ಹೊಸ ವೈರಸ್ ಹಾಟ್ ಸ್ಪಾಟ್ ಗಳು ಕಾಣಿಸಿಕೊಳ್ಳದಂತೆ ನೋಡಿಕೊಳ್ಳುವುದು ನಮ್ಮ ಮುಂದಿರುವ ಸವಾಲು.
– ಈಗಿರುವ ಲಾಕ್ ಡೌನ್ ಪರಿಸ್ಥಿತಿಯನ್ನು ಮೇ 3ರವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ. ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನಡೆಸಿದ ಮಾತುಕತೆಯಲ್ಲಿ ಹೆಚ್ಚಿನವರು ಲಾಕ್ ಡೌನ್ ಮುಂದುವರಿಸಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಮತ್ತು ಬಹಳಷ್ಟು ಜನರ ಅಪೇಕ್ಷೆಯೂ ಇದೇ ಆಗಿತ್ತು. ಹಾಗಾಗಿ ಇದೆಲ್ಲವನ್ನೂ ಪರಿಗಣಿಸಿ ಲಾಕ್ ಡೌನ್ ಪರಿಸ್ಥಿತಿಯನ್ನು ಮುಂದುವರಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.
– ಎಪ್ರಿಲ್ 20ರವರೆಗೆ ಲಾಕ್ ಡೌನ್ ಕಠಿಣ ಅನುಷ್ಠಾನಗೊಳಿಸಲಾಗುತ್ತದೆ. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಆ ಬಳಿಕ ಕೆಲವೊಂದು ಅವಶ್ಯಕ ಸೇವೆಗಳಿಗೆ ಅನುಮತಿ ನೀಡುವ ಕುರಿತಾಗಿ ಯೋಚಿಸಲಾಗುವುದು.
– ಎಪ್ರಿಲ್ 20ರ ಬಳಿಕ ಲಾಕ್ ಡೌನ್ ಭಾಗಶಃ ತೆರವುಗೊಳಿಸುವ ಸ್ಥಳಗಳಲ್ಲಿ ಯಾವುದೇ ರೀತಿಯ ನಿಯಮ ಉಲ್ಲಂಘನೆಯಾಗುವಂತಿಲ್ಲ. ಈ ಕುರಿತಾಗಿ ವಿಸ್ತೃತ ಮಾರ್ಗಸೂಚಿಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು.
– ದೇಶದಲ್ಲಿ ಅವಶ್ಯಕ ಸಾಮಾಗ್ರಿಗಳು ಹಾಗೂ ಔಷಧಿಗಳ ದಾಸ್ತಾನು ಸಾಕಷ್ಟಿದೆ.
– ನಿಮ್ಮ ಕೈಲಾದಷ್ಟು ಬಡ ವರ್ಗದ ಜನರಿಗೆ ಸಹಾಯ ಮಾಡಿ.
– ನಿಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಕುರಿತಾಗಿಯೂ ಗಮನಹರಿಸಿ.
– ಆಯುಷ್ ಇಲಾಖೆ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.
– ನಮ್ಮಲ್ಲಿ ಆರೋಗ್ಯ ಪರಿಕರಗಳ ಕೊರತೆ ಇರಬಹುದು ಆದರೆ ನಮ್ಮ ದೇಶದ ಯುವ ವಿಜ್ಞಾನಿಗಳು, ವೈದ್ಯರು ಈ ಸಂದರ್ಭದಲ್ಲಿ ವೈರಸ್ ವಿರುದ್ಧದ ಯುದ್ದದಲ್ಲಿ ಕೈಜೋಡಿಸುವಂತೆ ಅವರಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.