ಹವಾಯಿ ಚಪ್ಪಲಿ ಧರಿಸಿದವರೂ ವಿಮಾನ ಏರಬೇಕು
Team Udayavani, Apr 28, 2017, 2:37 AM IST
ಶಿಮ್ಲಾ: ಒಂದು ಗಂಟೆಗೆ ಕೇವಲ 2500 ರೂ.ಗಳಲ್ಲಿ ವಿಮಾನ ಯಾನ ಕಲ್ಪಿಸುವ ‘ಉಡಾನ್’ ವಿಮಾನ ಯಾನ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ಹವಾಯಿ ಚಪ್ಪಲಿ ಧರಿಸಿದವರೂ ವಿಮಾನದಲ್ಲಿ ಸಂಚರಿಸುವಂತಾಗಬೇಕು ಎಂಬ ದೃಷ್ಟಿಯಿಂದ ಯೋಜನೆಗೆ ಚಾಲನೆ ನೀಡಲಾಗಿದೆ. ವಿಮಾನ ಯಾನ ಎಂದರೆ ರಾಜ ಮಹಾರಾಜರಿಗೆ, ದೊಡ್ಡವರಿಗೆ ಮಾತ್ರ ಎಂದಿತ್ತು. ದಿಲ್ಲಿ – ಶಿಮ್ಲಾ ಮಧ್ಯೆ ಕಿ.ಮೀ.ಗೆ ಕೇವಲ 10 ರೂ. ವೆಚ್ಚದಲ್ಲಿ ವಿಮಾನಯಾನ ಇರಲಿದೆ ಎಂದರು. ಆರಂಭಿಕ ಹಂತದಲ್ಲಿ ಕಡಪಾ – ಹೈದರಾಬಾದ್, ನಾಂದೆಡ್ -ಹೈದರಾಬಾದ್ ಮಧ್ಯೆ ಯೋಜನೆ ಜಾರಿಯಾಗಿದೆ.
ಏನಿದು ಉಡಾನ್?
ಕೈಗೆಟಕುವ ಬೆಲೆಯಲ್ಲಿ ಪ್ರಾದೇಶಿಕ ವಿಮಾನ ಯಾನ ಸೌಲಭ್ಯ ಕಲ್ಪಿಸುವ ‘ಉಡಾನ್’ ಯೋಜನಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದ್ದಾರೆ.
ಎಷ್ಟು ಕಂಪೆನಿಗಳು?
ಉಡಾನ್(ಉಡೇ ದೇಶ್ ಕಾ ಆಮ್ ನಾಗರಿಕ್= ದೇಶದ ಸಾಮಾನ್ಯ ನಾಗರಿಕರಿಗೂ ಹಾರಾಡುವ ಅವಕಾಶ ಸಿಗಲಿ) ಹೆಸರಿನ ಯೋಜನೆ. ದೇಶದಲ್ಲಿ ಬಳಕೆಯಾಗುತ್ತಿರುವ ಮತ್ತು ಹೆಚ್ಚು ಬಳಕೆಯಾಗದ ವಿಮಾನ ನಿಲ್ದಾಣಗಳನ್ನು ಸಂಪರ್ಕಿ ಸುವ ಉದ್ದೇಶವನ್ನು ಹೊಂದಿದೆ. ಉಡಾನ್ ಅಡಿ 4 ವಿಮಾನ ಯಾನ ಕಂಪೆನಿಗಳು 70 ವಿಮಾನ ನಿಲ್ದಾಣ ಮಧ್ಯೆ ಇರುವ 128 ಮಾರ್ಗಗಳಲ್ಲಿ ಹಾರಾಟ ಕೈಗೊಳ್ಳಲು ಗುತ್ತಿಗೆ ಪಡೆದುಕೊಂಡಿವೆ.
ಯಾವೆಲ್ಲ ನಿಲ್ದಾಣಗಳ ಮಧ್ಯೆ?
ದೇಶದ 70 ವಿಮಾನ ನಿಲ್ದಾಣಗಳಲ್ಲಿ 31 ವಿಮಾನ ನಿಲ್ದಾಣಗಳು ಅಷ್ಟಾಗಿ ಬಳಕೆಯಾಗದ ನಿಲ್ದಾಣಗಳಾ ಗಿದ್ದು, 12 ಬಳಕೆಯಲ್ಲಿ ರುವಂಥವು ಎಂದು ಗುರುತಿಸಿ ಅವುಗಳನ್ನು ಉಡಾನ್‌ಗೆ ಸೇರ್ಪಡೆ ಮಾಡಲಾಗಿದೆ. ಇವುಗಳಲ್ಲಿ ನಿಲ್ದಾಣಗಳು ಪರ್ವತ ಪ್ರದೇಶ, ನಿರ್ಜನ ಪ್ರದೇಶ, ದ್ವೀಪಗಳಲ್ಲಿ ಇರುವವುಗಳು ಎಂದು ವಿಭಾಗಿಸಲಾಗಿದೆ. ಆಯ್ಕೆ ಮಾಡಿದ ನಿಲ್ದಾಣಗಳ ಪೈಕಿ 70ರಲ್ಲಿ 24 ಪಶ್ಚಿಮ ವಲಯ, 17 ಉತ್ತರ, 11 ದಕ್ಷಿಣ, 12 ಪೂರ್ವ 6 ವಲಯ ಈಶಾನ್ಯದ್ದಾಗಿದೆ.
ಯಾವೆಲ್ಲ ಏರ್‌ವೇಸ್‌ಗಳು
ಉಡಾನ್ ಯೋಜನೆಯಲ್ಲಿ ವೈಮಾನಿಕ ಕಂಪೆನಿಗಳ ಸಮೂಹ ಪಾಲ್ಗೊಳ್ಳುತ್ತಿದೆ. ಇದರಲ್ಲಿ ಸ್ಪೈಸ್‌ಜೆಟ್, ಟರ್ಬೋ ಮೇಘಾ ಏರ್‌ವೇಸ್, ಏರ್ ಡೆಕ್ಕನ್, ಏರ್ ಒಡಿಶಾಗಳು ಇವೆ.
ಕಡಿಮೆ ದರದ ಯಾನ
ಅತಿ ಕಡಿಮೆ ದರದಲ್ಲಿ ವಿಮಾನಯಾನ ಯೋಜನೆ ಯಡಿ ಸಾಧ್ಯ. 19ರಿಂದ 78 ಸೀಟುಗಳ ವಿಮಾನಗಳು ಮತ್ತು ಹೆಲಿಕಾಪ್ಟರುಗಳು ಇರುತ್ತವೆ. ಶೇ.50 ರಷ್ಟು ಸೀಟುಗಳಿಗೆ 1 ಗಂಟೆಗೆ 2,500 ರೂ. ಇರಲಿದೆ.
ಎಷ್ಟು ರಾಜ್ಯಗಳಿಗೆ ಸಂಪರ್ಕ
ಹೊಸ ಯೋಜನೆಯಲ್ಲಿ ದೇಶದ 22 ರಾಜ್ಯಗಳಿಗೆ ಮತ್ತು 2 ಕೇಂದ್ರಾಡಳಿತ ಪ್ರದೇಶಗಳಿಗೆ ಸಂಪರ್ಕ ಇರಲಿದೆ.
ಕರ್ನಾಟಕದಲ್ಲಿ ಎಷ್ಟು?
ಬೀದರ್, ಹುಬ್ಬಳ್ಳಿ, ಮೈಸೂರು, ವಿದ್ಯಾನಗರ ಏರ್‌ಪೋರ್ಟ್‌ಗಳಿಗೆ ಸಿಗಲಿದೆ ಸೌಲಭ್ಯ
2500ರೂ.: 1 ಗಂಟೆಗೆ (ಶೇ.50ರಷ್ಟು ಸೀಟುಗಳಿಗೆ ಈ ದರ)
22: ರಾಜ್ಯ, 2 ಕೇಂದ್ರಾಡಳಿತ ಪ್ರದೇಶಕ್ಕೆ ಸಂಪರ್ಕ
70: ಮಾರ್ಗಗಳಲ್ಲಿ ಸಂಚಾರ
128: ನಿಲ್ದಾಣಗಳಿಗೆ ಸಂಪರ್ಕ
4: ಕಂಪನಿಗಳಿಂದ ವಿಮಾನಯಾನ
4,500: ಕೋಟಿ ರೂ. ಕೇಂದ್ರದ ಯೋಜನೆಯ ವೆಚ್ಚ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.