ರಟ್ಟಾಯ್ತು ಮೋದಿ ಸೋಷಿಯಲ್ ಮೀಡಿಯಾ ತ್ಯಜಿಸುವ ನಿರ್ಧಾರದ ಹಿಂದಿನ ಗುಟ್ಟು!
#SheInspiresUs ಹ್ಯಾಷ್ ಟ್ಯಾಗ್ ನಡಿಯಲ್ಲಿ ಈ ಅಭಿಯಾನ ನಡೆಯುತ್ತದೆ
Team Udayavani, Mar 3, 2020, 5:25 PM IST
ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಮತ್ತು ಅತೀ ಹೆಚ್ಚಿನ ಫಾಲೋವರ್ಸ್ ಗಳನ್ನು ಹೊಂದಿರುವ ವಿಶ್ವದ ಕೆಲವೇ ಕೆಲವು ರಾಜಕೀಯ ನಾಯಕರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಪ್ರಮುಖ ಸ್ಥಾನವಿದೆ.
ಆದರೆ ಸೋಮವಾರದಂದು ಪ್ರಧಾನಿ ಮೋದಿ ಮಾಡಿದ್ದ ಟ್ವೀಟ್ ಒಂದು ಅವರ ಅಭಿಮಾನಿಗಳ ಸಹಿತ ಎಲ್ಲರನ್ನೂ ಒಮ್ಮೆ ಅಚ್ಚರಿಯಲ್ಲಿ ಕೆಡವಿತ್ತು. ‘ಈ ಭಾನುವಾರದಂದು ನಾನು ಫೇಸ್ಬುಕ್, ಟ್ವಿಟ್ಟರ್, ಇನ್ ಸ್ಟಾಗ್ರಾಂ ಮತ್ತು ಯೂ-ಟ್ಯೂಬ್ ನಲ್ಲಿರುವ ನನ್ನ ಅಕೌಂಟ್ ಗಳನ್ನು ತ್ಯಜಿಸುವ ಕುರಿತಾಗಿ ಯೋಚಿಸುತ್ತಿದ್ದೇನೆ’ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ್ದ ನೆಟ್ಟಿಗರು ಪ್ರಧಾನಿ ನಿರ್ದಾರದಿಂದ ಆಶ್ಚರ್ಯಕ್ಕೊಳಗಾಗಿದ್ದು ಮಾತ್ರವಲ್ಲದೇ #NoSir ಹ್ಯಾಷ್ ಟ್ಯಾಗ್ ನಲ್ಲಿ ತಮ್ಮ ನಿರ್ಧಾರವನ್ನು ವಾಪಾಸು ತೆಗೆದುಕೊಳ್ಳುವಂತೆ ಒತ್ತಾಯಿಸತೊಡಗಿದರು.
This Sunday, thinking of giving up my social media accounts on Facebook, Twitter, Instagram & YouTube. Will keep you all posted.
— Narendra Modi (@narendramodi) March 2, 2020
ಆದರೆ ಪ್ರಧಾನಿ ಮೋದಿ ಅವರ ನಿನ್ನೆಯ ಟ್ವೀಟ್ ನ ಅಸಲಿಯತ್ತು ಇಂದು ಬಯಲಾಗಿದೆ. ಮಾರ್ಚ್ 8 ಭಾನುವಾರ ಮಹಿಳಾ ದಿನ, ಈ ದಿನದಂದು ಮೋದಿ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳ ನಿರ್ವಹಣೆಯನ್ನು ಒಂದು ದಿನದ ಮಟ್ಟಿಗೆ ಮಹಿಳೆಯರ ಸುಪರ್ದಿಗೆ ನೀಡುತ್ತಿದ್ದಾರೆ.
ಆದರೆ ತನ್ನ ಖಾತೆಯನ್ನು ನಿಭಾಯಿಸುವ ಮಹಿಳೆಯನ್ನು ಸೂಚಿಸುವ ಜವಾಬ್ದಾರಿಯನ್ನು ಅವರು ದೇಶವಾಸಿಗಳಿಗೆ ನೀಡಿದ್ದಾರೆ. ಅದು ಹೇಗೆನ್ನುವ ಮಾಹಿತಿ ಇಲ್ಲಿದೆ.
This Women’s Day, I will give away my social media accounts to women whose life & work inspire us. This will help them ignite motivation in millions.
Are you such a woman or do you know such inspiring women? Share such stories using #SheInspiresUs. pic.twitter.com/CnuvmFAKEu
— Narendra Modi (@narendramodi) March 3, 2020
ಪ್ರಧಾನಿ ಮೋದಿ ಅವರು ನಡೆಸಲು ಉದ್ದೇಶಿಸಿರುವ ಒಂದು ಅಭಿಯಾನದ ಭಾಗ ಇದಾಗಿದ್ದು #SheInspiresUs ಎಂಬ ಹ್ಯಾಷ್ ಟ್ಯಾಗ್ ನಡಿಯಲ್ಲಿ ಈ ಅಭಿಯಾನ ನಡೆಯುತ್ತದೆ. ನಮ್ಮ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುವ ಮಹಿಳೆಯರನ್ನು ಗೌರವಿಸುವ ಉದ್ದೇಶವನ್ನು ಈ ಅಭಿಯಾನವು ಹೊಂದಿದೆ.
ನಿಮ್ಮ ಜೀವನ ಮತ್ತು ಕೆಲಸ ಸಮಾಜಕ್ಕೆ ಪ್ರೇರಣದಾಯಕವಾಗಿದ್ದಲ್ಲಿ ನೀವು ಒಂದು ದಿನದ ಮಟ್ಟಿಗೆ ಪ್ರಧಾನಮಂತ್ರಿಯವರ ಯಾವುದಾದರೊಂದು ಸಾಮಾಜಿಕ ಜಾಲತಾಣ ಖಾತೆಯನ್ನು ನಿಭಾಯಿಸಬಹುದು. ಅದಿಲ್ಲವಾದಲ್ಲಿ ನಿಮ್ಮ ಸುತ್ತ ಮುತ್ತಲ ಪರಿಸರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಮಹಿಳೆಯರಿದ್ದಲ್ಲಿ ಅವರ ಹೆಸರನ್ನೂ ನೀವು ಈ ಆಭಿಯಾನದಲ್ಲಿ ಸೇರಿಸಬಹದು. ಅದು ಹೇಗೆಂದರೆ…?
ನಿಮಗೆ ತಿಳಿದಿರುವ ಪ್ರೇರಣಾದಾಯಕ ಮಹಿಳೆಯರ ಕುರಿತಾಗಿ ಮಾಹಿತಿ/ಫೊಟೋ/ವಿಡಿಯೋವನ್ನು #SheInspiresUs ಹ್ಯಾಷ್ ಟ್ಯಾಗ್ ನಡಿಯಲ್ಲಿ ಟ್ವಿಟ್ಟರ್/ಫೇಸ್ ಬುಕ್/ಇನ್ ಸ್ಟಾ ಗ್ರಾಂಗಳಲ್ಲಿ ಪೋಸ್ಟ್ ಮಾಡಿ. ಇನ್ನು ಅವರ ಕುರಿತಾದ ಕಿರು ವಿಡಿಯೋ ಇದ್ದಲ್ಲಿ ಅದನ್ನು ಇದೇ ಹ್ಯಾಷ್ ಟ್ಯಾಗ್ ಬಳಸಿ ಯೂ-ಟ್ಯೂಬ್ ನಲ್ಲಿ ಪೋಸ್ಟ್ ಮಾಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.