ಉಜ್ವಲ ಭಾರತವೇ ಧ್ಯೇಯ
ಜನರ ನಿರೀಕ್ಷೆಗಳೇ ನವಭಾರತದ ಖಾತ್ರಿ ನೀಡಿದೆ ; ಆಂಧ್ರದಲ್ಲಿ ಮೋದಿ
Team Udayavani, Jun 10, 2019, 6:00 AM IST
ತಿರುಪತಿ: “ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯ ಫಲಿತಾಂಶವು ದೇಶದ ಜನರಲ್ಲಿ ವೃದ್ಧಿಸಿರುವ ಇಚ್ಛೆಗಳು ಹಾಗೂ ನಿರೀಕ್ಷೆಗಳನ್ನು ಪ್ರತಿಬಿಂಬಿಸಿದ್ದು, ಇವುಗಳು ಭಾರತವನ್ನು ಇನ್ನಷ್ಟು ಉಜ್ವಲಗೊಳಿಸುವ ಖಾತ್ರಿಯನ್ನು ನೀಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಾಲ್ಡೀವ್ಸ್ ಹಾಗೂ ಶ್ರೀಲಂಕಾ ಪ್ರವಾಸ ಮುಗಿಸಿ ರವಿವಾರ ಸಂಜೆ ಆಂಧ್ರಪ್ರದೇಶದ ತಿರುಪತಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ, ರೇಣಿಗುಂಟದಲ್ಲಿ ಬಿಜೆಪಿ ಆಯೋಜಿಸಿದ್ದ ಅಭಿನಂದನ ಸಮಾರಂಭದಲ್ಲಿ ಮಾತನಾಡಿದ್ದಾರೆ.
ಹೊಸ ದಿಕ್ಕು: “ಚುನಾವಣೆಯ ಭರ್ಜರಿ ಫಲಿತಾಂಶವನ್ನು ನೋಡಿದ ಕೆಲವರು, ಇದು ಸರಕಾರದ ಮೇಲೆ ಜನರ ನಿರೀಕ್ಷೆ ಹೆಚ್ಚಾಗಿರುವುದಕ್ಕೆ ಸಾಕ್ಷಿ. ಈಗ ಮೋದಿ ಏನು ಮಾಡುತ್ತಾರೆ ಎಂದು ಕೇಳತೊಡಗಿದ್ದಾರೆ. ಆದರೆ, ನಾನು ಇದನ್ನು ಒಂದು ಉತ್ತಮ ಅವಕಾಶವೆಂದು ಭಾವಿಸುತ್ತೇನೆ. ಉಜ್ವಲ ಭಾರತದ ಖಾತ್ರಿ ಎಂದು ಭಾವಿಸುತ್ತೇನೆ. ಜನತೆಯ ಬೆಂಬಲ ಹಾಗೂ ಕೊಡುಗೆಯನ್ನು ನೋಡಿದ ಮೇಲೆ, ದೇಶಕ್ಕೆ ಹೊಸ ದಿಕ್ಕನ್ನು ನಾವು ಕಲ್ಪಿಸುತ್ತೇವೆ ಎಂಬ ವಿಶ್ವಾಸ ನನಗೆ ಮೂಡಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
“130 ಕೋಟಿ ಭಾರತೀಯರಲ್ಲಿ ಪ್ರತಿಯೊಬ್ಬರೂ ಒಂದು ಹೆಜ್ಜೆ ಮುಂದೆ ಇಟ್ಟರೆ, ಅಷ್ಟು ಹೆಜ್ಜೆಗಳಷ್ಟು ಮುಂದಕ್ಕೆ ದೇಶವು ಸಾಗುತ್ತದೆ. ರಾಜ್ಯಗಳು ಹಾಗೂ ಕೇಂದ್ರ ಸರಕಾರವು ಒಗ್ಗಟ್ಟಾಗಿ ಕೆಲಸ ಮಾಡಿದರೆ, ನಾವು ಈ ಗುರಿಯನ್ನು ಸಾಧಿಸಬಲ್ಲೆವು ಹಾಗೂ ನವ ಭಾರತವನ್ನು ನಿರ್ಮಿಸಬಲ್ಲೆವು’ ಎಂದಿದ್ದಾರೆ ಮೋದಿ.
ರಾಹುಲ್ ವಿರುದ್ಧ ವಾಗ್ಧಾಳಿ: ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದ ಮೋದಿ, “ಕೆಲವರು ಇನ್ನು ಕೂಡ ಚುನಾವಣೆಯ ಹ್ಯಾಂಗ್ ಓವರ್‌ನಿಂದ ಹೊರಬಂದಿಲ್ಲ. ಆದರೆ, ನಮಗೆ ಚುನಾವಣೆ ಮುಗಿಯಿತು. ಈಗೇನಿದ್ದರೂ ಸಂಪೂರ್ಣವಾಗಿ ನಾವು ಜನರ ಅಭಿವೃದ್ಧಿ ಮತ್ತು ಕಲ್ಯಾಣದತ್ತ ಗಮನ ಕೇಂದ್ರೀಕರಿಸಿದ್ದೇವೆ’ ಎಂದಿದ್ದಾರೆ.
ಜಗನ್‌ಗೆ ಅಭಯ: ಕೇಂದ್ರದಲ್ಲಿ ಹಾಗೂ ಆಂಧ್ರದಲ್ಲಿ ಬಲಿಷ್ಠ ಸರಕಾರಗಳು ರೂಪುಗೊಂಡಿವೆ. ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ನೇತೃತ್ವದಲ್ಲಿ ರಾಜ್ಯವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲಿ ಎಂದು ನಾನು ಹಾರೈಸುತ್ತೇನೆ. ಆಂಧ್ರದಲ್ಲಿ ಪ್ರಗತಿಗೆ ಅಪರಿಮಿತ ಅವಕಾಶಗಳಿವೆ. ರಾಜ್ಯದ ಅಭಿವೃದ್ಧಿಗೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದೂ ಮೋದಿ ಅಭಯ ನೀಡಿದ್ದಾರೆ.
ತಿಮ್ಮಪ್ಪನ ದರ್ಶನ ಪಡೆದ ಮೋದಿ
ರವಿವಾರ ಆಂಧ್ರಪ್ರದೇಶದಲ್ಲಿ ವಿಜಯೋತ್ಸವ ಸಭೆ ನಡೆಸಿದ ಬಳಿಕ ತಿರುಮಲದ ವೆಂಕಟೇಶ್ವರ ದೇಗುಲಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ, ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು. ಅವರಿಗೆ ಇಲ್ಲಿನ ಅರ್ಚಕರು ಸಾಂಪ್ರದಾಯಿಕ ಸ್ವಾಗತ ಕೋರಿದರು. ಈ ವೇಳೆ ಆಂಧ್ರಪ್ರದೇಶದ ರಾಜ್ಯಪಾಲರಾದ ಇಎಸ್‌ಎಲ್ ನರಸಿಂಹನ್, ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ, ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಜಿ.ಕಿಶನ್ ರೆಡ್ಡಿ ಕೂಡ ಮೋದಿ ಜತೆಗಿದ್ದರು. ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಮೋದಿ ಅವರು ಸುಮಾರು 30ರಿಂದ 45 ನಿಮಿಷಗಳ ಕಾಲ ಬಾಲಾಜಿ ಮಂದಿರದಲ್ಲಿದ್ದು, ಪೂಜೆ ಸಲ್ಲಿಸಿದರು.
ನಾಯ್ಡುಗೆ ಟಾಂಗ್
ತಮ್ಮ ಭಾಷಣದಲ್ಲಿ ಮೋದಿ ಆಂಧ್ರದ ಮಾಜಿ ಸಿಎಂ, ಟಿಡಿಪಿ ನಾಯಕ ಚಂದ್ರ ಬಾಬು ನಾಯ್ಡು ಅವರ ಹೆಸರೆತ್ತದೆ ಅವರಿಗೆ ಟಾಂಗ್ ನೀಡಿದ್ದು ಕಂಡು ಬಂತು. ಕೆಲವರು ಚುನಾವಣೆಯಲ್ಲಿ ಸೋಲುಂಡ ಬಳಿಕ ಜನರ ಮುಂದೆ ಬರುವುದೇ ಇಲ್ಲ. ಆದರೆ, ನಾವು ಹಾಗಲ್ಲ. ಬಿಜೆಪಿಯು ಯಾವತ್ತೂ ಜನರ ಜತೆಗಿರುತ್ತದೆ ಎಂದು ಹೇಳುವ ಮೂಲಕ ನಾಯ್ಡುಗೆ ತಿವಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.