![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jun 19, 2024, 6:26 AM IST
ಹೊಸದಿಲ್ಲಿ: ಪ್ರಾಚೀನ ಕಾಲದ ಪ್ರಸಿದ್ಧ ವಿದ್ಯಾಕೇಂದ್ರವಾಗಿದ್ದ ನಳಂದಾ ವಿಶ್ವ ವಿದ್ಯಾನಿಲಯಕ್ಕೆ ಈಗ ಮತ್ತೆ ಜೀವ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಬುಧವಾರ ಬಿಹಾರದ ರಾಜ ಗೀರ್‌ನಲ್ಲಿ ನಳಂದಾ ವಿವಿಯ ನೂತನ ಕ್ಯಾಂಪಸ್ ಉದ್ಘಾಟಿಸಲಿದ್ದಾರೆ. 2010ರಲ್ಲಿ ಸ್ಥಾಪನೆ ಗೊಂಡ ಈ ವಿವಿ ಹೊಸ ರೂಪ ಪಡೆದು ಕೊಂಡಿದೆ. ಸಮಾರಂಭದಲ್ಲಿ ವಿದೇ ಶಾಂಗ ಸಚಿವ ಎಸ್. ಜೈಶಂಕರ್ ಜತೆಗೆ ಆಸ್ಟ್ರೇಲಿಯಾ ಸೇರಿ 17 ದೇಶಗಳ ರಾಯಭಾರಿಗಳು ಭಾಗಿಯಾಗಲಿದ್ದಾರೆ.
ನೂತನ ವಿವಿ ವಿಶೇಷತೆಗಳು: 1890 ಆಸನಗಳ 40 ಕೊಠಡಿಗಳು, 2 ಆಡಳಿತ ಕಟ್ಟಡ, 300 ಆಸನಗಳ 2 ಸಭಾಂಗಣ, 550 ವಿದ್ಯಾರ್ಥಿಗಳ ಸಾಮರ್ಥ್ಯದ ನಿಲಯ, 197 ಸಿಬಂದಿಗೆ ವಸತಿಗೃಹ, ಅತಿಥಿ ಗೃಹ, ಅಂತಾರಾಷ್ಟ್ರೀಯ ಕೇಂದ್ರ, ಭೋಜನಶಾಲೆ, ದೊಡ್ಡ ಹೊರಾಂಗಣ ಕ್ರೀಡಾ, ವೈದ್ಯಕೀಯ, ವಾಣಿಜ್ಯ ಕೇಂದ್ರ ಕ್ಯಾಂಪಸ್‌ನಲ್ಲಿವೆ. ಸೆಪ್ಟಂಬರ್ ವೇಳೆಗೆ 3 ಸಾವಿರ ಪುಸ್ತಕಗಳಿರುವ ಗ್ರಂಥಾಲಯ ನಿರ್ಮಾಣವಾಗಲಿದೆ.
ಪರಿಸರ ಸ್ನೇಹಿ ಕ್ಯಾಂಪಸ್: 6.5 ಮೆಗಾವ್ಯಾಟ್ ವಿದ್ಯುತ್ ಪೂರೈಸುವ ಸೋಲಾರ್ ಘಟಕ, 500 ಕೆಎಲ್‌ಡಿಯ ಕುಡಿಯುವ ನೀರಿನ ಘಟಕ, 400 ಕೆಎಲ್‌ಡಿಯ ನೀರು ಶುದ್ಧೀಕರಣ ಘಟಕ, ನೂತನ ಕ್ಯಾಂಪಸ್‌ನಲ್ಲಿವೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.