ಪ್ರಧಾನ ಮಂತ್ರಿ ಹೊಸ ಧ್ಯೇಯವಾಕ್ಯ

"ಔಷಧವೂ ಇರಲಿ; ಎಚ್ಚರಿಕೆಯೂ ಇರಲಿ' ಎಂದು ದೇಶವಾಸಿಗಳಿಗೆ ನರೇಂದ್ರ ಮೋದಿ ಸಲಹೆ

Team Udayavani, Jan 1, 2021, 6:15 AM IST

ಪ್ರಧಾನ ಮಂತ್ರಿ ಹೊಸ ಧ್ಯೇಯವಾಕ್ಯ

ಹೊಸದಿಲ್ಲಿಯ ಲಸಿಕೆ ಕೇಂದ್ರವೊಂದರಲ್ಲಿ ವಿತರಣೆಗೆ ಅಂತಿಮ ಹಂತದ ಸಿದ್ಧತೆ.

ಅಹ್ಮದಾಬಾದ್‌/ಹೊಸದಿಲ್ಲಿ: “ಔಷಧವೂ ಇರಲಿ; ಎಚ್ಚರಿ ಕೆಯೂ ಇರಲಿ’ ಇದು ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ವಿರುದ್ಧ ನೀಡಿದ ಹೊಸ ಸಂದೇಶ.

ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಿರ್ಮಿಸಲು ಉದ್ದೇಶಿಸಲಾ ಗಿರುವ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಭೂಮಿ ಪೂಜೆಯನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಗುರುವಾರ ನಡೆಸಿದ ಸಂದರ್ಭದಲ್ಲಿ ಅವರು ಆಡಿದ ಮಾತುಗಳು.

ಕೊರೊನಾ ಸೋಂಕು ಶುರುವಾಗಿದ್ದ ಸಂದರ್ಭದಲ್ಲಿ ಎಲ್ಲಿಯ ವರೆಗೆ ಔಷಧ ಸಿಗುವುದಿಲ್ಲವೋ ಅಲ್ಲಿಯ ವರೆಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದೆ. 2021ರಲ್ಲಿ ಔಷಧವೂ ಇರಲಿ; ಎಚ್ಚರಿಚ ಕೆಯೂ ಇರಲಿ ಎಂಬುದೇ ನಮ್ಮ ಗುರಿಯಾಗಬೇಕು ಎಂದ್ದಾರೆ.

ದೇಶದಲ್ಲಿ ಜ.2ರಿಂದ ಲಸಿಕೆ ನೀಡಿಕೆ ಪ್ರಾತ್ಯಕ್ಷಿಕೆ ನಡೆಯಲಿರು ವಂತೆಯೇ ಅದರ ಬಗ್ಗೆಯೂ ಮಾತನಾಡಿದ ಮೋದಿ ದೇಶದ ಜನರು ಲಸಿಕೆ ನೀಡಿಕೆ ಬಗ್ಗೆ ಸುಳ್ಳು ಮಾಹಿತಿಗಳನ್ನು ನಂಬಬಾರದು. ಕೆಲವರು ಈಗಾಗಲೇ ಸುಳ್ಳು ಗಳನ್ನು ಹರಡಲು ಶುರು ಮಾಡಿದ್ದಾರೆ ಎಂದು ಹೇಳಿದ್ದಾರೆ. ದೇಶದಲ್ಲಿ ಹೊಸ ಸೋಂಕುಗಳು ಕಡಿಮೆಯಾಗುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

2020ರಲ್ಲಿ ಎಲ್ಲರಲ್ಲಿಯೂ ಆತಂಕದ ಛಾಯೆ ಕಾಣಿಸುತ್ತಿತ್ತು. ಜತೆಗೆ ಹಲವು ರೀತಿಯ ಸಂಶಯವೂ ಕಾಡುತ್ತಿತ್ತು, ಆದರೆ 2021 ಜನರಲ್ಲಿ ಸೋಂಕಿಗೆ ಚಿಕಿತ್ಸೆ ಲಭಿಸಲಿದೆ ಎಂಬ ಆಶಾ ಭಾವನೆ ಉಂಟಾ ಗುತ್ತಿದೆ ಎಂದರು.

ಸಿದ್ಧತೆ ನಡೆದಿದೆ: ದೇಶಾದ್ಯಂತ ಲಸಿಕೆ ನೀಡುವ ಬಗ್ಗೆ ಹಲವು ರೀತಿಯ ಸಿದ್ಧತೆಗಳು ನಡೆದಿವೆ. ದೇಶದಲ್ಲಿಯೇ ಸಂಶೋಧನೆ ನಡೆಸಿ, ತಯಾರಿಕೆ ಮಾಡಲಾಗಿರುವ ಲಸಿಕೆಯನ್ನೇ ಜನರಿಗೆ ನೀಡಲು ಪ್ರಯತ್ನಗಳು ನಡೆದಿವೆ ಎಂದರು ಪ್ರಧಾನಿ. ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಜನರಿಗೆ ಲಸಿಕೆ ನೀಡುವ ಸಿದ್ಧತೆಯತ್ತ ಗಮನ ಹರಿಸಲಾಗಿದೆ ಎಂದರು. ಕೊರೊನಾ ವಿರುದ್ಧ ಸಾವಿರಾರು ಮಂದಿ ಆರೋಗ್ಯ ಕಾರ್ಯಕರ್ತರು ಜೀವದ ಹಂಗು ತೊರೆದು ಕೆಲಸ ಮಾಡಿ ದ್ದಾರೆ. ಅವರಿಗೆ ನಮನಗಳನ್ನು ಸಲ್ಲಿಸಲೇಬೇಕಾಗಿದೆ ಎಂದರು. ನಮ್ಮದೇ ಉತ್ತಮ: ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮ ದೇಶದಲ್ಲಿ ಸೋಂಕಿನ ಪರಿಸ್ಥಿತಿ ಉತ್ತಮವಾಗಿಯೇ ಇದೆ. ಸಾವಿನ ಸಂಖ್ಯೆ, ಸೋಂಕಿನ ಸಂಖ್ಯೆಯಲ್ಲಿ ನಮ್ಮ ಸ್ಥಿತಿ ಉತ್ತಮವಾಗಿದೆ ಎಂದರು.

ಚೇತರಿಕೆ ಪ್ರಮಾಣ ಶೇ.96: ದೇಶದಲ್ಲಿ ಸೋಂಕಿನಿಂದ ಚೇತರಿಕೆ ಪ್ರಮಾಣ ಶೇ.96.04 ಎಂದು ಸರಕಾರ ಹೇಳಿದೆ. ಬುಧವಾರದಿಂದ ಗುರುವಾರದ ಅವಧಿಯಲ್ಲಿ ಹೊಸತಾಗಿ 21,822 ಹೊಸ ಪ್ರಕರಣ ಗಳು ಮತ್ತು 299 ಮಂದಿ ಸಾವಿಗೀಡಾಗಿದ್ದಾರೆ. ಸದ್ಯ ದೇಶದಲ್ಲಿ 2,57, 656 ಸಕ್ರಿಯ ಪ್ರಕರಣಗಳು ಇವೆ ಎಂದು ದೈನಂದಿನ ವರದಿಯಲ್ಲಿ ಉಲ್ಲೇಖೀಸಿದೆ.

ಮತ್ತೆ ಐದು ಕೇಸು: ದೇಶದಲ್ಲಿ ರೂಪಾಂತರ ವೈರಸ್‌ನ ಐದು ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ಹೊಸ ಪ್ರಕರಣಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

ಆಸ್ಪತ್ರೆಗಳಿಗೆ “ಮೇಕ್‌ ಇನ್‌ ಇಂಡಿಯಾ’ ವೆಂಟಿಲೇಟರ್‌: ದೇಶದ ವಿವಿಧ ಆಸ್ಪತ್ರೆಗಳಿಗೆ 36, 433 ವೆಂಟಿಲೇಟರ್‌ಗಳನ್ನು ನೀಡಲಾಗಿದೆ. ಅವುಗಳನ್ನು “ಮೇಕ್‌ ಇನ್‌ ಇಂಡಿಯಾ’ ಅಡಿಯಲ್ಲಿ ತಯಾರಿಸಲಾಗಿದೆ. ಅವುಗಳ ಬೆಲೆ 2 ಲಕ್ಷ ರೂ.ಗಳಿಂದ 10 ಲಕ್ಷ ರೂ. ವರೆಗೆ ಎಂದು ಸರಕಾರ ತಿಳಿಸಿದೆ. ಕೊರೊನಾ ಪೂರ್ವ ಅವಧಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ 16 ಸಾವಿರ ವೆಂಟಿಲೇಟರ್‌ಗಳು ಇದ್ದವು. ಆದರೆ ಕೇವಲ 12 ತಿಂಗಳ ಅವಧಿಯಲ್ಲಿ ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ ವೆಂಟಿಲೇಟರ್‌ಗಳನ್ನು ಪೂರೈಕೆ ಮಾಡಿದ್ದು ಸಾಧನೆಯೇ ಸರಿ ಎಂದು ಅದು ಹೇಳಿಕೊಂಡಿದೆ. ಸದ್ಯ ಅವುಗಳನ್ನು ರಫ್ತು ಮಾಡುವ ನಿಯಮ ಹಿಂಪಡೆಯಲಾಗಿದೆ. ಹೀಗಾಗಿ, ದೇಶಿಯವಾಗಿ ಸಿದ್ಧಗೊಂಡಿರುವ ಅವುಗಳು ವಿದೇಶಗಳಿಗೂ ಕಳುಹಿಸಲಾಗುತ್ತದೆ ಎಂದು ಸರಕಾರ ಹೇಳಿಕೊಂಡಿದೆ.

ಡ್ರೈ ರನ್‌ಗೆ ಸಿದ್ಧರಾಗಿ
ದೇಶದ ಎಲ್ಲ ರಾಜ್ಯಗಳಲ್ಲಿ ಶನಿವಾರ ವಿರಣೆ ಪ್ರಾತ್ಯಕ್ಷಿಕೆ ನಡೆಯಲಿದೆ. ಕೇಂದ್ರ ಸರಕಾರ ಶುಕ್ರವಾರವೇ ಅಗತ್ಯ ಸಿಬಂದಿಗೆ ತರಬೇತಿ ನೀಡಲಿದೆ. ಶನಿವಾರ ರಾಜ್ಯಗಳ ರಾಜಧಾನಿ ಸೇರಿದಂತೆ ಮೂರು ಸ್ಥಳಗಳಲ್ಲಿ ಡ್ರೈ ರನ್‌ ನಡೆಯಲಿದೆ. ಈ ಸಂದರ್ಭದಲ್ಲಿ ವಿತರಣೆ ಸಂದರ್ಭದಲ್ಲಿ ಆಗುವಂಥ ಲೋಪಗಳು, ಸಮಸ್ಯೆಗಳು, ಅಡ್ಡಿ, ಆತಂಕಗಳನ್ನು ಗುರುತಿಸಿ ಇವುಗಳನ್ನು ನಿವಾರಿಸಿಕೊಳ್ಳಲಾಗುತ್ತದೆ. ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಮಾತ್ರ ರಾಜಧಾನಿಗಳನ್ನು ಹೊರತುಪಡಿಸಿ ಉಳಿದ ಕಡೆ ಡ್ರೈ ರನ್‌ ನಡೆಯಲಿದೆ. ಕೇಂದ್ರ ಆರೋಗ್ಯ ಇಲಾಖೆ ಗುರುವಾರವೇ ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳ ಜತೆ ವೀಡಿಯೋ ಕಾನ್ಫೆರೆನ್ಸ್‌ ಸಭೆ ನಡೆಸಿ, ಸಿದ್ಧತೆಗಳ ಪರಿಶೀಲನೆ ಮಾಡಿದೆ.

ಕೊರೊನಾ ಲಸಿಕೆ ಹಾಳು ಮಾಡಿದ ಅಮೆರಿಕ ಆರೋಗ್ಯ ಕಾರ್ಯಕರ್ತ
ವಿಸ್ಕಾನ್ಸಿನ್‌ (ಅಮೆರಿಕ): ಇಡೀ ಜಗತ್ತೇ ಕೊರೊನಾ ಔಷಧಕ್ಕಾಗಿ ಹಪಹಪಿಸುತ್ತಿರುವಾಗ ಅಮೆರಿಕ ವಿಸ್ಕಾನ್ಸಿನ್‌ ರಾಜ್ಯದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಅಲ್ಲಿನ ಗ್ರಾಫ್ಟನ್‌ ನಗರದ ಅರೊರಾ ಮೆಡಿಕಲ್‌ ಸೆಂಟರ್‌ನಲ್ಲಿದ್ದ 500 ಡೋಸ್‌ ಕೊರೊನಾ ಲಸಿಕೆಗಳನ್ನು ಆರೋಗ್ಯಕಾರ್ಯಕರ್ತನೊಬ್ಬ ಉದ್ದೇಶಪೂರ್ವಕವಾಗಿ ಹಾಳುಗೆಡವಿದ್ದಾನೆ. ಈ ಬಗ್ಗೆ ಎಫ್ಬಿಐ ತನಿಖೆ ನಡೆಸುತ್ತಿದೆ. ಇನ್ನೂ ಕಾರಣ ತಿಳಿದುಬಂದಿಲ್ಲ.

ಶೇ.94ರಷ್ಟು ಪ್ರಭಾವಶಾಲಿ
ಅಮೆರಿಕದ ಮೊಡೆರ್ನಾ ಕಂಪನಿಯ ಲಸಿಕೆ ಶೇ.94.1ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಮೂರನೇ ಹಂತದ ಪ್ರಯೋಗದ ವರದಿಗಳು ದೃಢಪಡಿಸಿವೆ. ಈ ಬಗ್ಗೆ “ನ್ಯೂ ಇಂಗ್ಲೆಂಡ್‌ ಜರ್ನಲ್‌ ಆಫ್ ಮೆಡಿಸಿನ್‌’ನಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಉಲ್ಲೇಖೀ ಸಲಾಗಿದೆ. ಒಟ್ಟು 30 ಸಾವಿರ ಮಂದಿಯ ಮೇಲೆ ಅದನ್ನು ಪ್ರಯೋಗಿಸಲಾಗಿತ್ತು.

ಟಾಪ್ ನ್ಯೂಸ್

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

Loksabha:ಕಾಂಗ್ರೆಸ್‌ ಅಂಬೇಡ್ಕರ್‌ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು

Loksabha:ಕಾಂಗ್ರೆಸ್‌ ಅಂಬೇಡ್ಕರ್‌ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು

Yasin Malik

SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ

ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ

ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

sagara

Sagara: ಕಾಡಾನೆಗಳ ಹಾವಳಿ; ಲಕ್ಷಾಂತರ ರೂ. ಬೆಳೆ ನಷ್ಟ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.