ಖಾಸಗಿ ಶಾಲೆಗಳು ಪಬ್ಲಿಕ್ ಅಲ್ಲ!
ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಪ್ರತಿಯಲ್ಲಿ ಉಲ್ಲೇಖ
Team Udayavani, Jun 7, 2019, 6:10 AM IST
ನವದೆಹಲಿ: ಇಸ್ರೋ ಮಾಜಿ ಮುಖ್ಯಸ್ಥ ಕೆ.ಕಸ್ತೂರಿರಂಗನ್ ಸಮಿತಿಯು ಶಿಫಾರಸು ಮಾಡಿರುವ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದರೆ ದೇಶಾದ್ಯಂತ ಬಹುತೇಕ ಶಿಕ್ಷಣ ಸಂಸ್ಥೆಗಳು ತಮ್ಮ ಹೆಸರುಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಸಮಿತಿಯ ವರದಿಯ ಪ್ರಕಾರ ಕೇವಲ ಸರ್ಕಾರಿ ಶಾಲೆಗಳು ಮಾತ್ರ ‘ಪಬ್ಲಿಕ್’ ಎಂಬ ಹೆಸರನ್ನು ಬಳಸಬೇಕು. ಖಾಸಗಿ ಶಾಲೆಗಳು ಪಬ್ಲಿಕ್ ಎಂಬುದನ್ನು ತಮ್ಮ ಹೆಸರಿನಲ್ಲಿ ಯಾವುದೇ ಕಾರಣಕ್ಕೂ ಸೇರಿಸುವಂತಿಲ್ಲ. ಪಬ್ಲಿಕ್ ಸ್ಕೂಲ್ ಎಂದರೆ ಸಾರ್ವಜನಿಕರ ಹಣದಿಂದ ನಡೆಯುವಂಥದ್ದು ಎಂದು ಅರ್ಥ ವಾಗುತ್ತದೆ. ಹೀಗಾಗಿ ಸರ್ಕಾರಿ ಶಾಲೆಗಳು ಮತ್ತು ಸರ್ಕಾರದಿಂದ ಅನುದಾನ ಪಡೆಯುವ ಶಾಲೆಗಳು ಮಾತ್ರ ಈ ಪಬ್ಲಿಕ್ ಎಂದು ಹೆಸರು ಇಟ್ಟುಕೊಳ್ಳಬಹುದು.
ದೇಶಾದ್ಯಂತ ಲಕ್ಷಾಂತರ ಸಂಸ್ಥೆಗಳು ಪಬ್ಲಿಕ್ ಎಂಬುದಾಗಿ ತಮ್ಮ ಹೆಸರಿನಲ್ಲಿ ಸೇರಿಸಿಕೊಂಡಿವೆ. ಸಮಿತಿಯ ನಿರ್ಧಾರದಿಂದ ಜನರಿಗೆ ಶಾಲೆಯ ರೀತಿಯ ಬಗ್ಗೆ ಸ್ಪಷ್ಟತೆ ನೀಡಲಿದೆ. ಯಾವುದು ಸರ್ಕಾರಿ, ಯಾವುದು ಅನುದಾನಿತ ಮತ್ತು ಯಾವುದು ಖಾಸಗಿ ಶಾಲೆ ಎಂಬುದನ್ನು ಜನರು ಗುರುತಿಸಲು ನೆರವಾಗಲಿದೆ. ಅಲ್ಲದೆ, ಶಾಲೆಗಳ ಕಾರ್ಯನಿರ್ವಹಣೆಯ ರೀತಿಯೂ ಜನಸಾಮಾನ್ಯರಿಗೆ ಸ್ಪಷ್ಟವಾಗಲಿದ್ದು, ಇದರಿಂದ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ವ್ಯತ್ಯಾಸ ಸ್ಪಷ್ಟವಾಗಿ ಅರಿವಿಗೆ ಬರಲಿದೆ ಎಂದು ಸಮಿತಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ
GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.