ಕಣ್ಣು ಹೊಡೆದು ಮನಸ್ಸು ಗೆದ್ದಳು
Team Udayavani, Feb 13, 2018, 8:20 AM IST
ನವದೆಹಲಿ: ಆ ಚಿಗುರು ಮೀಸೆಯ ಹುಡುಗ ತನ್ನ ಸರಿಸಮಾನ ವಯಸ್ಸಿನ ಆ ಹುಡುಗಿಯನ್ನು ವಾರೆ ನೋಟದಲ್ಲಿ ನೋಡಿ, “ಏನು’ ಎಂಬಂತೆ ಒಂದು ಹುಬ್ಬೇರಿಸಿ ಕೇಳುತ್ತಾನೆ. ಅದಕ್ಕೆ ಪ್ರತ್ಯುತ್ತರವಾಗಿ ಆ ಚೆಲುವೆ ತನ್ನೆರಡೂ ಹುಬ್ಬುಗಳನ್ನು ಎಗರಿಸಿ ಸವಾಲೆಸೆಯುತ್ತಾಳೆ. ಹುಡುಗ, ತಾನೇನೂ ಕಮ್ಮಿಯಿಲ್ಲವೆಂದು ತಾನೂ ಎರಡು ಹುಬ್ಬು ಎಗರಿಸುತ್ತಾನೆ. ತಕ್ಷಣ ಪ್ರತಿಕ್ರಿಯಿಸುವ ಆಕೆ ತನ್ನ ಎಡ ಗಣ್ಣು ಹೊಡೆಯುತ್ತಾಳೆ… ಅಷ್ಟೆ. ಹುಡುಗ ಫುಲ್ ಫಿದಾ! ನಿಂತಲ್ಲೇ ಕಳೆದು ಹೋದಂತಾಗಿ, ಎದೆಯೊಳಗೆ ಬೆಚ್ಚನೆಯ ಅನುಭವ ಅವನಿಗೆ.
ಇಂಥ ಮೋಹಕ ಸಂದರ್ಭವಿರುವ ವಿಡಿಯೋವೊಂದು ವಾಟ್ಸಾಪ್, ಯೂಟ್ಯೂಬ್ಗಳಲ್ಲಿ ಸಂಚಲನ ಸೃಷ್ಟಿಸಿದ್ದು, ಇದರಲ್ಲಿ ಅಭಿನಯಿಸಿರುವ ಪ್ರಿಯಾ ಎಂಬ 18ರ ಪ್ರಾಯದ ಚೆಲುವೆಯೀಗ ಲಕ್ಷಾಂತರ ಹುಡುಗರ ಡ್ರೀಮ್ ಗರ್ಲ್ ಆಗಿದ್ದಾಳೆ. ಫೇಸ್ಬುಕ್ನಲ್ಲಿ ಆಕೆಗೆ 10 ಲಕ್ಷ ಫಾಲೋವರ್ಗಳು ಹುಟ್ಟಿಕೊಂಡಿದ್ದಾರೆ. ನಾಲ್ಕೇ ದಿನದಲ್ಲಿ ಯೂ ಟ್ಯೂಬ್ನಲ್ಲಿ ಅಗ್ರಸ್ಥಾನಕ್ಕೆ ಬಂದು ಕೂತಿದೆ ಈ ವಿಡಿಯೋ. ಅಂದಹಾಗೆ, ಈ ವಿಡಿಯೋ, ಮಲಯಾಳಂನ “ಒರು ಆಧಾರ್ ಲವ್’ ಚಿತ್ರದ ಹಾಡೊಂದರ ತುಣಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.