ನೀರವ್ ಮೋದಿ ಜತೆಗಿನ ಗುತ್ತಿಗೆ ರದ್ದಿಗೆ ಪ್ರಿಯಾಂಕಾ ನಿರ್ಧಾರ ?
Team Udayavani, Feb 16, 2018, 3:14 PM IST
ಮುಂಬಯಿ : ಪಿಎನ್‌ಬಿ ಬಹುಕೋಟಿ ಹಗರಣ ಕಳಂಕಿತ ನೀರವ್ ಮೋದಿ ಅವರು ಕಳೆದ ವರ್ಷ ತನ್ನ ವಜ್ರಾಭರಣ ಉದ್ಯಮಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ ಅವರನ್ನು ನೇಮಿಸಿಕೊಂಡಿದ್ದರು.
ಪಿಎನ್‌ಬಿ ಹಗರಣ ಬೆಳಕಿಗೆ ಬರುತ್ತಲೇ ಪ್ರಿಯಾಂಕಾ ಚೋಪ್ರಾ ಅವರು ನೀರವ್ ಮೋದಿ ವಿರುದ್ಧ ದಾವೆ ದಾಖಲಿಸಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು. ಆದರೆ ಪ್ರಿಯಾಂಕಾ ಚೋಪ್ರಾ ದಾವೆ ದಾಖಲಸಿಲ್ಲ ಬದಲಾಗಿ ಮೋದಿ ಜತೆಗಿನ ತನ್ನ ಗುತ್ತಿಗೆ ವ್ಯವಹಾರವನ್ನು ರದ್ದು ಪಡಿಸುವ ಬಗ್ಗೆ ಕಾನೂನು ಅಭಿಪ್ರಾಯ ಕೇಳಿದ್ದಾರೆ ಎಂಬುದೀಗ ದೃಢಪಟ್ಟಿದೆ.
ಪ್ರಿಯಾಂಕಾ ಚೋಪ್ರಾ ಅವರ ವಕ್ತಾರ ಮಾಧ್ಯಮಕ್ಕೆ ಬಿಡುಗಡೆ ಗೊಳಿಸಿರುವ ಹೇಳಿಕೆಯಲ್ಲಿ “ನೀರವ್ ಮೋದಿ ವಿರುದ್ಧ ಪ್ರಿಯಾಂಕಾ ಚೋಪ್ರಾ ದಾವೆ ಹೂಡಿದ್ದಾರೆ ಎಂಬ ವದಂತಿಗಳು ಹರಡಿಕೊಂಡಿವೆ. ಆದರೆ ಅದು ಸರಿಯಲ್ಲ; ನೀರವ್ ಮೋದಿ ಅವರೀಗ ಪಿಎನ್‌ಬಿ ವಂಚನೆ ಹಗರಣದಲ್ಲಿ ಶಾಮೀಲಾಗಿರುವ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಅವರೊಂದಿಗೆ ತನ್ನ ಗುತ್ತಿಗೆ ಒಪ್ಪಂದವನ್ನು ಈ ಸಂದರ್ಭದಲ್ಲಿ ರದ್ದುಗೊಳಿಸಬಹುದೇ ಎಂಬ ಬಗ್ಗೆ ಆಕೆ ಕಾನೂನು ಅಭಿಪ್ರಾಯ ಕೇಳಿದ್ದಾರೆ’ ಎಂದು ಹೇಳಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಕ್ವಾಂಟಿಕೋ ಹಿಟ್ ಸೀರೀಸ್ ನಿಂದಾಗಿ ಹಾಲಿವುಡ್‌ನಲ್ಲಿ ಜನಪ್ರಿಯರಾಗಿದ್ದಾರೆ. 2017ರ ಜನವರಿಯಲ್ಲಿ ನೀರವ್ ಮೋದಿ ಅವರು ಪ್ರಿಯಾಂಕಾ ಅವರನ್ನು ತನ್ನ ವೈಭವೋಪೇತ ವಜ್ರಾಭರಣಗಳ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ
Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ
ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ
INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್: ಕೊನೆಯಲ್ಲಿ ಕಾಡಿದ ಲಿಯಾನ್- ಬೊಲ್ಯಾಂಡ್
Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.