Wayanad; ಪ್ರಿಯಾಂಕಾ ಬಿರುಸಿನ ಪ್ರಚಾರ: ತಿರುನೆಲ್ಲಿ ಮಹಾವಿಷ್ಣು ದೇವಸ್ಥಾನಕ್ಕೆ ಭೇಟಿ
ಭಾವನಾತ್ಮಕ ನಂಟು... ರಾಜೀವ್ ಗಾಂಧಿ ಚಿತಾಭಸ್ಮ ವಿಸರ್ಜಿಸಲಾಗಿತ್ತು...
Team Udayavani, Nov 10, 2024, 8:37 PM IST
ವಯನಾಡ್ : ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಯುಡಿಎಫ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರವಿವಾರ(ನ10) ಪ್ರಸಿದ್ಧ ತಿರುನೆಲ್ಲಿ ಮಹಾವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ವಯನಾಡ್ ನಲ್ಲಿ ತಮ್ಮ ಅಂತಿಮ ಹಂತದ ಭರ್ಜರಿ ಪ್ರಚಾರವನ್ನು ನಡೆಸುತ್ತಿದ್ದಾರೆ. ನವೆಂಬರ್ 13 ರಂದು ಉಪಚುನಾವಣೆ ನಡೆಯಲಿದ್ದು, ಸೋಮವಾರ ಪ್ರಚಾರ ಕೊನೆಗೊಳ್ಳಲಿದೆ.
ತಿರುನೆಲ್ಲಿ ಮಹಾವಿಷ್ಣುವಿನ ದೇವಸ್ಥಾನವು ಪಾಪನಾಶಿನಿ ನದಿಯ ದಡದಲ್ಲಿದ್ದು, ಇದರಲ್ಲಿ ಪ್ರಿಯಾಂಕಾ ಅವರ ತಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಚಿತಾಭಸ್ಮವನ್ನು 1991 ರಲ್ಲಿ ವಿಸರ್ಜನೆ ಮಾಡಲಾಗಿತ್ತು.
‘ದಕ್ಷಿಣದ ಕಾಶಿ’ ಎಂದು ಕರೆಯಲ್ಪಡುವ ಪ್ರಾಚೀನ ದೇವಾಲಯದ ಇತಿಹಾಸದ ಬಗ್ಗೆ ಪ್ರಿಯಾಂಕಾ ದೇವಸ್ಥಾನದ ಅಧಿಕಾರಿಗಳನ್ನು ಕೇಳಿದರು. ನಂತರ, ಅವರು ಮನಂತವಾಡಿಯ ಎಡವಕಕ್ಕೆ ತೆರಳಿದರು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕಾರ್ಯಕರ್ತರು ಆತ್ಮೀಯ ಸ್ವಾಗತವನ್ನು ನೀಡಿದರು. ಅವರೊಂದಿಗೆ ಸಂವಾದ ನಡೆಸಿದರು.
ಎಡವಕ ನಂತರ ಇನ್ನೂ ಆರು ಸ್ವಾಗತ ಸಭೆಗಳಲ್ಲಿ ಪ್ರಿಯಾಂಕಾ ಭಾಗವಹಿಸಿದರು. ನಾಯ್ಕಟ್ಟಿ, ಸುಲ್ತಾನ್ ಬತ್ತೇರಿಯಲ್ಲಿ ಕಾರ್ನರ್ ಮೀಟಿಂಗ್‌ನಲ್ಲಿ ಪ್ರಚಾರವು ಮುಕ್ತಾಯಗೋಡಿತು. ಚುಲ್ಲಿಯೊಡೆ ಮತ್ತು ವಡುವಾಂಚಲ್ ಎಂಬಲ್ಲಿಯೂ ಕಾಂಗ್ರೆಸ್ ಸಭೆ ನಡೆಯಲಿದೆ.
ನಾಳೆ (ಸೋಮವಾರ) ರಾಹುಲ್ ಗಾಂಧಿ ಅವರು ಸುಲ್ತಾನ್ ಬತ್ತೇರಿ ಮತ್ತು ತಿರುವಂಬಾಡಿಯಲ್ಲಿ ಸಹೋದರಿಯೊಂದಿಗೆ ಜಂಟಿ ರೋಡ್ ಶೋ ನಡೆಸಲಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ರಾಯ್‌ಬರೇಲಿ ಮತ್ತು ವಯನಾಡ್ ಎರಡೂ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ವಾಯನಾಡ್ ಸ್ಥಾನವನ್ನು ತೆರವು ಮಾಡಿದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಾ ಕುಂಭ ಭಕ್ತರಿಗಾಗಿ ಪ್ರಯಾಗ್‌ರಾಜ್ ನಿಂದ ತ್ರಿವೇಣಿ ಸಂಗಮಕ್ಕೆ ಹೆಲಿಕಾಪ್ಟರ್ ಸೇವೆ
Denied Leave: ಸಿಗದ ರಜೆ… ಕೋಪದಿಂದ ನಾಲ್ವರು ಸಹೋದ್ಯೋಗಿಗಳಿಗೆ ಚಾಕು ಇರಿದ ಸರಕಾರಿ ನೌಕರ
Maha Kumbh Melaದಲ್ಲಿ ಮತ್ತೆ ಅಗ್ನಿ ಅವಘಡ: ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ
Tragedy: ಗರ್ಭಿಣಿಗೆ ಲೈಂಗಿಕ ಕಿರುಕುಳ ನೀಡಿ ಚಲಿಸುತ್ತಿರುವ ರೈಲಿನಿಂದ ಹೊರ ದಬ್ಬಿದ ಕಾಮುಕರು
Bomb Threat: ದೆಹಲಿ, ನೋಯ್ಡಾದ ಶಾಲೆಗಳಿಗೆ ಬಾಂಬ್ ಬೆದರಿಕೆ, ಶಾಲೆಗೆ ರಜೆ, ಪೋಷಕರಲ್ಲಿ ಆತಂಕ
MUST WATCH
ಹೊಸ ಸೇರ್ಪಡೆ
Uppinangady: ಜಾಗ ಮಂಜೂರಾದರೂ ಆರಂಭವಾಗದ ಅಂಬೇಡ್ಕರ್ ವಸತಿ ಶಾಲೆ
Govt: ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ಸಹಿ ಹಾಕದೆ ವಾಪಾಸ್ ಕಳುಹಿಸಿದ ರಾಜ್ಯಪಾಲರು
America: ಹತ್ತು ಜನರಿದ್ದ ವಿಮಾನ ಅಲಾಸ್ಕಾ ಬಳಿ ಕಣ್ಮರೆ-ತೀವ್ರ ಶೋಧ ಕಾರ್ಯಾಚರಣೆ!
ಮಹಾ ಕುಂಭ ಭಕ್ತರಿಗಾಗಿ ಪ್ರಯಾಗ್‌ರಾಜ್ ನಿಂದ ತ್ರಿವೇಣಿ ಸಂಗಮಕ್ಕೆ ಹೆಲಿಕಾಪ್ಟರ್ ಸೇವೆ
Belagavi: ಮಹಾ ಕುಂಭಮೇಳಕ್ಕೆ ಹೊರಟಿದ್ದ ಬೆಳಗಾವಿಯ ನಾಲ್ವರು ಸೇರಿ ಆರು ಮಂದಿ ದುರ್ಮರಣ