ಜಮ್ಮು ಕಾಶ್ಮೀರದಲ್ಲಿ ಒಂಟಿ ತೋಳ ಉಗ್ರ ದಾಳಿಗೆ ಐಸಿಸ್ ಯತ್ನ
Team Udayavani, Jan 18, 2018, 6:58 PM IST
ಹೊಸದಿಲ್ಲಿ : ಜಮ್ಮು ಕಾಶ್ಮೀರದಲ್ಲಿ ಒಂಟಿ ತೋಳ ಉಗ್ರ ದಾಳಿ ನಡೆಸುವುದಕ್ಕಾಗಿ ಐಸಿಸ್ ಉಗ್ರ ಸಂಘಟನೆಗೆ ಸಹಾನುಭೂತಿ ಹೊಂದಿರುವ ಸಮೂಹಗಳು ಅರ್ಹ ಯುವಕರನ್ನು ನೇಮಕ ಮಾಡುವ ಕೆಲಸದಲ್ಲಿ ಸಕ್ರಿಯವಾಗಿವೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ಐಸಿಸ್ ಉಗ್ರ ಸಂಘಟನೆಗೆ ಸಹಾನುಭೂತಿ ಹೊಂದಿರುವ ಹಾಗೂ ಜಮ್ಮು ಕಾಶ್ಮೀರದಲ್ಲಿ ಶರೀಯತ್ ಕಾನೂನು ಮತ್ತು ಖಲೀಫ ಆದಿಪತ್ಯವನ್ನು ಜಾರಿಗೆ ತರುವ ಬಯಕೆ ಹೊಂದಿರುವ ಈ ಸಮೂಹಗಳು ರಾಜ್ಯದಲ್ಲಿನ ಉಗ್ರ ಸ್ವಭಾವದ ಯುವಕರ ಬುದ್ಧಿಪಲ್ಲಟಿಸುವ ದಿಶೆಯಲ್ಲಿ ಕಾರ್ಯವೆಸಗುತ್ತಿವೆ ಎಂದು ಮೂಲಗಳು ಹೇಳಿವೆ.
ಗೃಹ ಸಚಿವಾಲಯದ ಸೈಬರ್ ದಳವು ಜಮ್ಮು ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಟೆಲಿಗ್ರಾಮ್ ಚ್ಯಾನಲ್‌ಗಳನ್ನು ಪತ್ತೆ ಹಚ್ಚಿದ್ದು ಅವುಗಳಲ್ಲಿ ಒಂಟಿ ತೋಳ ಉಗ್ರ ದಾಳಿ ಕೈಗೊಳ್ಳಬಯಸುವ ಯುವಕರ ಬುದ್ದಿ ಪಲ್ಲಟಿಸುವ ಫೋಟೋಗಳು, ಮಾಹಿತಿಗಳು, ಲೇಖನಗಳು ಮುಂತಾಗಿ ಹಲವು ಬಗ್ಗೆ ಉಗ್ರ ಕಾರ್ಯಚಟುವಟಿಕೆಗಳ ಮಾಹಿತಿ ಇರುವುದನ್ನು ಗಮನಿಸಿದೆ.
ಈ ರೀತಿಯ ಟೆಲಿಗ್ರಾಂ ಚ್ಯಾನಲ್ ಒಂದನ್ನು 2017ರ ಸೆ.23 ರಂದು ಸೃಷ್ಟಿಸಲಾಗಿತ್ತು. ಅನಂತರ ಅದೇ ವರ್ಷ ಇದನ್ನು ಅಕ್ಟೋಬರ್ 3ರಂದು ಪುನರ್ ನಾಮಕರಣ ಮಾಡಲಾಗಿತ್ತು. ಈ ಚ್ಯಾನಲ್‌ಗೆ 223 ಸದಸ್ಯರಿದ್ದಾರೆ.
ಕಡತ ಮತ್ತು ಡಿಸ್ಕ್ ಗಳನ್ನು ಎನ್‌ಕ್ರಿಪ್ಟ್ ಮಾಡಲು ಬಳಸುವ “ವೆರಾಕ್ರಿಪ್ಟ್’ ತಂತ್ರಾಂಶವನ್ನು ಕೂಡ ಈ ಚ್ಯಾನಲ್ ಪೋಸ್ಟ್ ಮಾಡಿದೆ. ಹಾಗೆಯೇ ಒಂಟಿ ತೋಳ ಉಗ್ರ ದಾಳಿಯನ್ನು ಸಂಘಟಿಸುವ ಕಾರ್ಯತಂತ್ರದ ವಿವರಗಳನ್ನು ಕೂಡ ಈ ಚ್ಯಾನಲ್ ನಲ್ಲಿ ಹಾಕಿರುವುದು ಕಂಡು ಬಂದಿದೆ.
ಈ ರೀತಿಯ ಸಮೂಹಗಳ ಎಡ್ಮಿನ್ ಯಾರೆಂಬುದನ್ನು ಪತ್ತೆ ಹಚ್ಚುವಂತೆ ಗೃಹ ಸಚಿವಾಲಯ ತನ್ನ ಸೈಬರ್ ದಳಕ್ಕೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Garlic: ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್ ಬೆಳ್ಳುಳ್ಳಿ ವಶಕ್ಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.