ಫೆ.13ರಂದು ಕರ್ನಾಟಕ ಬಂದ್ ಗೆ 700 ಸಂಘಟನೆಗಳ ಬೆಂಬಲ; ಸರೋಜಿನಿ ವರದಿ ಜಾರಿ ಮಾಡಿ
ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಮೆರವಣಿಗೆ ನಡೆಯಲಿದ್ದು, ಸುಮಾರು 40 ಮಂದಿ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ
Team Udayavani, Feb 11, 2020, 3:10 PM IST
ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಫೆಬ್ರುವರಿ 13ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಸುಮಾರು 700 ಕನ್ನಡಪರ ಸಂಘಟನೆಗಳು ಬೆಂಬಲ ನೀಡಿರುವುದಾಗಿ ಕನ್ನಡ ಒಕ್ಕೂಟ ಸಂಘಟನೆಗಳ ಅಧ್ಯಕ್ಷ ಎಚ್.ಬಿ.ನಾಗೇಶ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಮುಷ್ಕರ ನಡೆಸುತ್ತೇವೆ. ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಮೆರವಣಿಗೆ ನಡೆಯಲಿದ್ದು, ಸುಮಾರು 40 ಮಂದಿ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದರು.
ಬೇರೆ, ಬೇರೆ ಜಿಲ್ಲೆಗಳಿಂದ ಸುಮಾರು 30 ಸಾವಿರ ಮಂದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕಳೆದ ನೂರು ದಿನಗಳಿಂದ ಹೋರಾಟ ಮಾಡಿದ್ದೇವೆ. ರಾಜ್ಯ ಸರ್ಕಾರ ವರದಿ ಜಾರಿ ಬಗ್ಗೆ ಲಿಖಿತವಾಗಿ ಭರವಸೆ ನೀಡಿದರೆ ಬಂದ್ ವಾಪಸ್ ಪಡೆಯುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wedding: ಇದೇ ಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ಲಗ್ನ!
Bribery Case: ದಾವಣಗೆರೆ ಪ್ರೊಫೆಸರ್ ಸೇರಿ 10 ಮಂದಿ ಸಿಬಿಐ ಬಲೆಗೆ
Naxal Surrender: ಶರಣಾದ ತೊಂಬಟ್ಟು ಲಕ್ಷ್ಮೀಗೆ ವೈದ್ಯಕೀಯ ಪರೀಕ್ಷೆ, ನ್ಯಾಯಾಂಗ ಬಂಧನ
BJP Crisis: ರಾಜ್ಯ ಬಿಜೆಪಿ ಭಿನ್ನರು ಇಂದು ದಿಲ್ಲಿಗೆ ದೌಡು: ಜೆ.ಪಿ.ನಡ್ಡಾ ಭೇಟಿ ಸಾಧ್ಯತೆ
Congress Government: ಸಿಎಂ ಬದಲಾವಣೆ ಚರ್ಚೆಗೆ ಕಾಂಗ್ರೆಸ್ನಲ್ಲಿ ಮರು ಚಾಲನೆ!