ED Raids: ಭಾರಿ ಭದ್ರತೆಯೊಂದಿಗೆ ಟಿಎಂಸಿ ನಾಯಕನ ಮನೆ ಮೇಲೆ ದಾಳಿ ನಡೆಸಿದ ಇಡಿ
Team Udayavani, Jan 24, 2024, 8:28 AM IST
ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಪಡಿತರ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಶಹಜಹಾನ್ ಶೇಖ್ ಅವರ ಮನೆಗೆ ಜಾರಿ ನಿರ್ದೇಶನಾಲಯ (ಇಡಿ) ತಂಡ ಮತ್ತೊಮ್ಮೆ ದಾಳಿ ನಡೆಸಿದೆ.
ಈ ಹಿಂದೆ ಜನವರಿ 5 ರಂದು ಇಡಿ ತಂಡವು ಶಹಜಹಾನ್ ಶೇಖ್ ಅವರ ಮನೆಯ ಮೇಲೆ ದಾಳಿ ನಡೆಸಿದ ಸಂದರ್ಭ ಶಹಜಹಾನ್ ಶೇಖ್ ಅವರ ಆಪ್ತರು ಸೇರಿ ಗುಂಪು ದಾಳಿ ನಡೆಸಿದ್ದರು. ಅದಕ್ಕಾಗಿ ಇದೀಗ ಸ್ಥಳೀಯ ಪೋಲೀಸರ ಜೊತೆ ಕೇಂದ್ರ ಭದ್ರತಾ ಪಡೆ ಸಿಬ್ಬಂದಿಗಳು ಸೇರಿದಂತೆ ಒಟ್ಟು ಇಪ್ಪತ್ತನಾಲ್ಕು ವಾಹನಗಳಲ್ಲಿ ಬಂದ ಅಧಿಕಾರಿಗಳು ನಿವಾಸಕ್ಕೆ ದಾಳಿ ನಡೆಸಿ ಅಗತ್ಯ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ.
ಜನವರಿ 5 ರಂದು, ಇಡಿ ತಂಡವು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಶಹಜಹಾನ್ ಶೇಖ್ ಅವರ ನಿವಾಸ ತಲುಪುತ್ತಿದ್ದಂತೆ ಶೇಖ್ ಬೆಂಬಲಿಗರು ಇಡಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದರು. ಈ ದಾಳಿಯಲ್ಲಿ ಇಡಿ ಜೊತೆಗೆ ಕೇಂದ್ರ ಭದ್ರತಾ ಪಡೆಗಳ ವಾಹನಗಳನ್ನೂ ಧ್ವಂಸಗೊಳಿಸಲಾಗಿತ್ತು. ಅಲ್ಲದೆ ಈ ವೇಳೆ 3 ಅಧಿಕಾರಿಗಳು ಗಾಯಗೊಂಡಿದ್ದರು.
ಷಹಜಹಾನ್ ಶೇಖ್ ಅಥವಾ ಎಸ್‌ಕೆ ಷಹಜಹಾನ್ ಅವರು ಉತ್ತರ 24 ಪರಗಣ ಜಿಲ್ಲೆಯ ಸಂದೇಶಖಾಲಿ ಪ್ರದೇಶದ ಅತ್ಯಂತ ಪ್ರಭಾವಿ ಟಿಎಂಸಿ ನಾಯಕರಾಗಿದ್ದಾರೆ. ಅವರು ಉತ್ತರ 24 ಪರಗಣ ಜಿಲ್ಲಾ ಕೌನ್ಸಿಲ್‌ನ ಸದಸ್ಯರೂ ಆಗಿದ್ದಾರೆ. ಪಶ್ಚಿಮ ಬಂಗಾಳದ ಎಡಪಂಥೀಯ ಸರ್ಕಾರದ ಅವಧಿಯಲ್ಲಿ ಶೇಖ್ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಷಹಜಹಾನ್ ಶೇಖ್ ಆರಂಭದಲ್ಲಿ ಸಿಪಿಐಎಂನಲ್ಲಿದ್ದರು. ಇದರ ನಂತರ, ಅವರು 2009-2010 ರ ಸುಮಾರಿಗೆ ಟಿಎಂಸಿ ನಾಯಕ ಜ್ಯೋತಿಪ್ರಿಯೊ ಮಲ್ಲಿಕ್ ಅವರ ಸಹಾಯದಿಂದ ತೃಣಮೂಲ ಕಾಂಗ್ರೆಸ್‌ಗೆ ಸೇರಿದರು. ಶೇಖ್ ಹಲವಾರು ಬಾರಿ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಸ್ಥಳೀಯ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದರು.
ಶಹಜಹಾನ್ ಶೇಖ್ ಸ್ಥಳೀಯ ಪ್ರದೇಶದಲ್ಲಿ ಕುಖ್ಯಾತಿ ಪಡೆದಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಈತ ಕೊಲೆ ಪ್ರಕರಣದಲ್ಲಿ ಎಫ್‌ಐಆರ್‌ನಲ್ಲಿ ಆರೋಪಿಯಾಗಿದ್ದ. ಆದರೆ, ಬಂಗಾಳ ಪೊಲೀಸರು ಶೇಖ್‌ಗೆ ಸಂಪೂರ್ಣ ಕ್ಲೀನ್ ಚಿಟ್ ನೀಡಿದ್ದಾರೆ. ಕೊಲೆ ಪ್ರಕರಣದ ಅಂತಿಮ ಆರೋಪ ಪಟ್ಟಿಯಿಂದ ಶೇಖ್ ಹೆಸರನ್ನು ತೆಗೆದುಹಾಕಲಾಗಿದೆ. 2021 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಟಿಎಂಸಿ ನಾಯಕನ ವಿರುದ್ಧ ರಾಜಕೀಯ ಹಿಂಸಾಚಾರ ಮತ್ತು ಅಭ್ಯರ್ಥಿಗಳು ಮತ್ತು ವಿರೋಧ ಪಕ್ಷಗಳ ಮತದಾರರಿಗೆ ಬೆದರಿಕೆಯ ಆರೋಪಗಳಿವೆ. ಶೇಖ್ 2022 ರಲ್ಲಿ ಕಳೆದ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದರು ಮತ್ತು ಉತ್ತರ 24 ಪರಗಣ ಜಿಲ್ಲೆಯ ಜಿಲ್ಲಾ ಪರಿಷತ್ ಸದಸ್ಯರಾಗಿ 34,000 ಕ್ಕೂ ಹೆಚ್ಚು ಮತಗಳಿಂದ ಆಯ್ಕೆಯಾದರು.
ಇದನ್ನೂ ಓದಿ: Drone Pratap: ಫಿನಾಲೆ ದಿನಗಣನೆ ಇರುವಾಗಲೇ ಮನೆಯಿಂದ ಡ್ರೋನ್ ಪ್ರತಾಪ್ ಔಟ್?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.