ಉತ್ತರಪ್ರದೇಶ ರಾಮರಾಜ್ಯವಲ್ಲ, ಗೂಂಡಾ ರಾಜ್ಯ; ಪತ್ರಕರ್ತನ ಸಾವಿಗೆ ಸಂತಾಪ: ರಾಹುಲ್ ಗಾಂಧಿ
Team Udayavani, Jul 22, 2020, 3:17 PM IST
ನವದೆಹಲಿ: ಪತ್ರಕರ್ತ ವಿಕ್ರಂ ಜೋಶಿ ನಿಧನದ ಬೆನ್ನಲ್ಲೇ ಉತ್ತರಪ್ರದೇಶ ಸರ್ಕಾರದ ವಿರುದ್ಧ ಕಿಡಿಕಾರಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ‘ಸರ್ಕಾರವೂ ಜನರಿಗೆ ರಾಮ ರಾಜ್ಯದ ಭರವಸೆ ನೀಡಿತ್ತು. ಆದರೀಗ ಗೂಂಡಾ ರಾಜ್ಯವನ್ನು ನೀಡಿದೆ’ ಎಂದು ಕಿಡಿಕಾರಿದ್ದಾರೆ.
ಜುಲೈ 20ರ ಸೋಮವಾರದಂದು ಗಾಜಿಯಾಬಾದ್ ನಲ್ಲಿ ಪುತ್ರಿಯರ ಕಣ್ಣೇದುರಲ್ಲೇ ದುಷ್ಕರ್ಮಿಗಳಿಂದ ಗುಂಡಿನ ದಾಳಿಗೊಳಗಾಗಿದ್ದ ಪತ್ರಕರ್ತ ವಿಕ್ರಮ್ ಜೋಶಿ ಇಂದು ನಿಧನರಾಗಿದ್ದರು. ಘಟನೆಗೂ ನಾಲ್ಕು ದಿನ ಮೊದಲು ವಿಕ್ರಮ್ ಜೋಶಿ ಅವರು ತಮ್ಮ ಸೋದರ ಸೊಸೆಗೆ ಕೆಲವರು ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಕಾರಣಕ್ಕಾಗಿಯೇ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು ಎನ್ನಲಾಗಿದೆ.
ಘಟನೆಯನ್ನು ಖಂಡಿಸಿರುವ ರಾಹುಲ್ ಗಾಂಧಿ ‘ಕಿರುಕುಳದ ವಿರುದ್ಧ ದೂರು ನೀಡಿದ ಕಾರಣಕ್ಕೆ ವಿಕ್ರಂ ಜೋಶಿ ಪ್ರಾಣ ಬಿಟ್ಟಿದ್ದಾರೆ. ಇದು ಖಂಡನಾರ್ಹ. ಪತ್ರಕರ್ತನ ಕೊಲೆ ಮತ್ತು ಸಂಬಂಧಿಯ ಮೇಲಿನ ಹಲ್ಲೆ ಪ್ರಕರಣದ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ರಾಮರಾಜ್ಯದ ಮಾತುಕೊಟ್ಟಿದ್ದ ಉತ್ತರಪ್ರದೇಶ ಸರ್ಕಾರ ಗೂಂಡಾ ರಾಜ್ಯ ನಿರ್ಮಾಣ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
अपनी भांजी के साथ छेड़छाड़ का विरोध करने पर पत्रकार विक्रम जोशी की हत्या कर दी गयी। शोकग्रस्त परिवार को मेरी सांत्वना।
वादा था राम राज का, दे दिया गुंडाराज।
— Rahul Gandhi (@RahulGandhi) July 22, 2020
ರಂದೀಪ್ ಸುರ್ಜೇವಾಲಾ ಅವರು ಕೂಡ ಟ್ವೀಟ್ ಮಾಡಿ, ಇದು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಭರವಸೆ ನೀಡಿದ್ದ ಅದೇ ರಾಮ ರಾಜ್ಯವೇ? ಇದು ಸಂಪೂರ್ಣ ‘ಗೂಂಡಾರಾಜ್’. ಯುಪಿ ಪತ್ರಕರ್ತರಾಗಲೀ, ಕಾನೂನನ್ನು ರಕ್ಷಿಸುವವರಾಗಲೀ ಸುರಕ್ಷಿತವಲ್ಲ, ಇವರಿಂದ ಸಾಮಾನ್ಯ ಜನರು ನ್ಯಾಯವನ್ನು ಹೇಗೆ ನಿರೀಕ್ಷಿಸಬಹುದು ಎಂದು ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಭಯವೇಇಲ್ಲದಂತಾಗಿದೆ ಎಂದು ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದಕ್ಕೆ ಇದು ಇನ್ನೊಂದು ಉದಾಹರಣೆ . ಆರು ವರ್ಷಗಳಿಂದ ಮಾಧ್ಯಮವನ್ನು ಹೇಗೆ ವ್ಯವಸ್ಥಿತವಾಗಿ ಬೆದರಿಸಲಾಗುತ್ತಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ ಎಂದು ಕಾಂಗ್ರೆಸ್ ಮುಖಂಡ ಅಹಮದ್ ಪಟೇಲ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.