ಆರ್ಥಿಕಾಭಿವೃದ್ಧಿಗೆ ಶ್ರೀಕಾರ
ಕೈಗಾರಿಕೆಗೆ ಉತ್ತೇಜನ, ಲ್ಯಾಂಡ್ ಬ್ಯಾಂಕ್ ಸ್ಥಾಪನೆ: ನೀತಿ ಆಯೋಗ ಉಪಾಧ್ಯಕ್ಷ
Team Udayavani, Jun 1, 2019, 6:00 AM IST
ನವದೆಹಲಿ: ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರ, ಮುಂದಿನ 100 ದಿನಗಳಲ್ಲಿ ದೇಶದ ಆರ್ಥಿಕತೆಯನ್ನು ಹೊಸ ದಿಕ್ಕಿನತ್ತ ಹೊರಳಿಸುವಂಥ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ತಿಳಿಸಿದ್ದಾರೆ. ತೀರಾ ಸಂಕೀರ್ಣವಾಗಿರುವ ಕಾರ್ಮಿಕ ಕಾನೂನುಗಳನ್ನು ಬದಲಾಯಿಸುವುದರಿಂದ ಹಿಡಿದು ವಿವಿಧ ಸರ್ಕಾರಿ ಸಂಸ್ಥೆಗಳ ಖಾಸಗೀಕರಣ, ಲ್ಯಾಂಡ್ ಬ್ಯಾಂಕ್ ಸ್ಥಾಪನೆ ಮುಂತಾದ ನಿರ್ಧಾರಗಳನ್ನು ಸರ್ಕಾರ ಅನುಷ್ಠಾನಕ್ಕೆ ತರಲಿದ್ದು, ಆ ಮೂಲಕ ದೇಶವನ್ನು ಪ್ರಗತಿ ಪಥದೆಡೆಗೆ ಕೊಂಡೊಯ್ಯಲು ತೀರ್ಮಾನಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕಾರ್ಮಿಕರಿಗಾಗಿ 44 ಕೇಂದ್ರೀಯ ಕಾನೂನುಗಳನ್ನು ವೇತನ, ಕೈಗಾರಿಕಾ ಸಂಬಂಧ, ಸಾಮಾಜಿಕ ಭದ್ರತೆ ಮತ್ತು ಅಭಿವೃದ್ಧಿ ಮತ್ತು ಔದ್ಯೋಗಿಕ ಭದ್ರತೆ ಎಂಬ ನಾಲ್ಕು ವಿಭಾಗಗಳಲ್ಲಿ ವಿಂಗಡಿಸಲಾಗುತ್ತದೆ. ಔದ್ಯೋಗಿಕ ಭದ್ರತೆಯಲ್ಲಿ ಆರೋಗ್ಯ, ವೃತ್ತಿಗೆ ಅನುಕೂಲವಾದ ವಾತಾವರಣ ಎಂಬ ವಿಷಯಗಳು ಸೇರಲ್ಪಡುತ್ತವೆ.
ಈ ನಾಲ್ಕೂ ವಿಭಾಗಗಳ ಅಡಿಯಲ್ಲಿ ಬರುವ ಎಲ್ಲಾ ಕಾನೂನುಗಳನ್ನು ಈಗಿನ ಪರಿಸ್ಥಿತಿಗಳಿಗೆ, ಸ್ಥಿತಿಗತಿಗಳಿಗೆ ಹೊಂದುವಂತೆ ಬದಲಾಯಿಸಿ, ಉದ್ಯೋಗಿಗಳು ಹಾಗೂ ಉದ್ಯೋಗದಾತರ ನಡುವಿನ ಸಂಘರ್ಷಗಳಿಗೆ ಎಡೆ ಮಾಡಿಕೊಡುವಂಥ ನಿಯಮಗಳನ್ನು ರದ್ದುಗೊಳಿಸಿ ಅಥವಾ ತಿದ್ದುಪಡಿ ಮಾಡಿ ಅನುಕೂಲಕರ ಔದ್ಯೋಗಿಕ ವಾತಾವರಣ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಕುಮಾರ್ ಹೇಳಿದ್ದಾರೆ.
ಲ್ಯಾಂಡ್ ಬ್ಯಾಂಕ್: ಸಾರ್ವಜನಿಕ ಸಂಸ್ಥೆಗಳ ಉಸ್ತುವಾರಿಯಲ್ಲಿರುವ ಈವರೆಗೆ ಬಳಕೆಯಾಗದ ಭೂಮಿಯನ್ನು ವಿದೇಶಿ ಬಂಡವಾಳದಾರರಿಗೆ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಲ್ಯಾಂಡ್ ಬ್ಯಾಂಕ್‌ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇಂಥ ಭೂಭಾಗಗಳನ್ನು ಕ್ಲಸ್ಟರ್‌ಗಳ (ಸಮೂಹ) ಮಾದರಿಯಲ್ಲಿ ಅಭಿವೃದ್ಧಿಗೊಳಿಸಿ ಒಂದೇ ತೆರನಾದ ಕೈಗಾರಿಕೆಗಳು ಒಂದು ನಿರ್ದಿಷ್ಟ ಪ್ರಾಂತ್ಯದಲ್ಲಿರುವಂಥ ಯೋಜನೆಯನ್ನು ರೂಪಿಸಲಾಗುತ್ತದೆ.
ಮಹಾ ಸುಧಾರಣೆಗೆ ಒತ್ತು: ಬ್ಯಾಂಕುಗಳು ಹಾಗೂ ಇನ್ನಿತರ ಸಾಲ ವಿತರಣಾ ಸಂಸ್ಥೆಗಳಿಗೆ ಸಾಲ ಮರುಪಾವತಿಯಾಗದ ಪರಿಣಾಮ, 2018ರ ಕೊನೆಯ ಮೂರು ತಿಂಗಳುಗಳಲ್ಲಿ ಭಾರತದ ಆರ್ಥಿಕತೆ ಇಳಿಕೆ ಕಂಡಿದ್ದು ಶೇ. 6.6ಕ್ಕೆ ಬಂದು ಮುಟ್ಟಿದೆ.
ಪ್ರಸಕ್ತ ವರ್ಷದ ಜನವರಿ-ಮಾರ್ಚ್ ಅವಧಿಯಲ್ಲೂ ಇದು ಮುಂದುವರಿದಿದೆ. ಹಾಗಾಗಿ, ಸರ್ಕಾರವು ತನ್ನ ಅಧೀನದ ಬ್ಯಾಂಕಿಂಗ್ ವಲಯವನ್ನು ಪುನಶ್ಚೇತನಗೊಳಿಸುವುದಲ್ಲದೆ, ಮೂಲಸೌಕರ್ಯ, ವಸತಿ ಸೌಕರ್ಯಗಳನ್ನು ದೇಶದ ಎಲ್ಲಾ ನಾಗರಿಕರಿಗೂ ನೀಡುವ ಮೂಲಕ ತೆರಿಗೆ ಮತ್ತಿತರ ರೂಪದಲ್ಲಿ ಹಣ ಸಂಗ್ರಹವಾಗುವುದರ ಕಡೆಗೆ ಗಮನ ನೀಡಬೇಕು. ಮೂಲ ಸೌಕರ್ಯಗಳು, ವಸತಿ ಯೋಜನೆಗಳು ವೇಗವಾಗಿ ಜಾರಿಗೊಳಿಸಲು ಆ ಯೋಜನೆಗಳನ್ನು ಖಾಸಗಿ ವಲಯಕ್ಕೆ ವಹಿಸಬೇಕೆಂದು ಕುಮಾರ್ ತಿಳಿಸಿದ್ದಾರೆ.
ಜಲಶಕ್ತಿ ಅಸ್ತಿತ್ವಕ್ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ
Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Kota: ರಾಷ್ಟ್ರೀಯ ಹೆದ್ದಾರಿಯಲ್ಲಿ ಸೌಲಭ್ಯ ಕೊರತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.