ಶಿಕಾಗೊ ಹೈಟೆಕ್ ವೇಶ್ಯಾವಾಟಿಕೆಯಲ್ಲಿ ತೆಲುಗು ನಟಿಯರು?
Team Udayavani, Jun 16, 2018, 10:00 AM IST
ಹೈದರಾಬಾದ್ : ಶಿಕಾಗೋದಲ್ಲಿ ನಡೆಯುತ್ತಿತ್ತೆನ್ನಲಾದ ಹೈಟೆಕ್ ವೇಶ್ಯಾವಾಟಿಕೆ ಜಾಲವೊಂದನ್ನು ಅಮೆರಿಕದ FBI ಭೇದಿಸಿದ್ದು, ಇದರಲ್ಲಿ ತೆಲುಗು ಚಿತ್ರದ ನಟಿಯರೂ ಭಾಗಿಯಾಗಿದ್ದಾರೆಂದು ಹೇಳಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ, ತೆಲುಗು ಚಿತ್ರರಂಗದ ಪ್ರೊಡಕ್ಷನ್ ಮ್ಯಾನೇಜರ್ ಗಳಾಗಿರುವ ಕಿಶನ್ ಮೊದುಗು ಮುಡಿ ಅಲಿಯಾಸ್ ಶ್ರೀರಾಜ್ ಚೆನ್ನುಪತಿ, ಚಂದ್ರಕಲಾ ಪೂರ್ಣಿಮಾ ಮೊದುಗುಮುಡಿ ಅಲಿಯಾಸ್ ವೆಭಾ ಜಯಂ ಎಂಬ ದಂಪತಿಯನ್ನು ಮೇ 28ರಂದು 28ರಂದು ವಾಷಿಂಗ್ಟನ್ ಡಿ.ಸಿ.ಯಲ್ಲಿ ಬಂಧಿಸಲಾಗಿದೆ. ಬಂಧಿತರು ಹೈದರಾಬಾದ್ ನವರಾಗಿದ್ದು, ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವುದು ಪತ್ತೆಯಾಗಿದೆ.
ಅವಕಾಶಗಳಿಗಾಗಿ ಹಾತೊರೆಯುತ್ತಿರುವ ನಟಿಯನ್ನು ಅಮೆರಿಕಕ್ಕೆ ಕರೆಯಿಸಿಕೊಂಡು, ಅಮೆರಿಕದಲ್ಲಿ ನಡೆಯುವ ತೆಲುಗು ಭಾಷಿಗರ ಸಮಾರಂಭಗಳಿಗೆ ಕರೆದುಕೊಂಡು ಹೋಗಿ, ಅಲ್ಲಿಗೆ ಬರುತ್ತಿದ್ದ ಶ್ರೀಮಂತ ತೆಲುಗು ವ್ಯಕ್ತಿಗಳಿಗೆ ಈ ನಟಿಯರನ್ನು ತೋರಿಸಿ ವ್ಯಾಪಾರ ಕುದುರಿಸುತ್ತಿದ್ದರೆಂದು ಆರೋಪಿಸಲಾಗಿದೆ. 2017ರ ಮೇ 11 ರಿಂದ 2018ರ ಜ.22ರ ನಡುವಿನ ಪ್ರಕರಣ ಇದಾಗಿದೆ. ಯುಎಸ್ ಗಡಿ ಭದ್ರತಾ ಪಡೆಗಳ ಮಾಹಿತಿಯ ಮೇರೆಗೆ ಎಪ್ರಿಲ್ ನಲ್ಲಿ ಮೆರಿಟೋ ಹೊಟೆಲ್ ನ ಮೇಲೆ ದಾಳಿ ನಡೆಸಿದಾಗ ಕೊಠಡಿಯೊಂದರಲ್ಲಿ ಚಿಕ್ಕ ಪುಟ್ಟ ಕೈಬರಹದಲ್ಲಿ ಪ್ರಖ್ಯಾತ ತೆಲುಗು ನಟನೊಬ್ಬನ ಹೆಸರನ್ನು ಬರೆದು, ‘ರೂಂ. ನಂಬರ್ 2018 – ಎರಡು ಬಾರಿ’, ‘ರೂಂ. ನಂಬರ್ 404 – ಒಂದು ಬಾರಿ’ ಎಂದು ಬರೆದಿತ್ತು. ಇದರ ಜಾಡು ಹಿಡಿದು ಹೊರಟ ಅಧಿಕಾರಿಗಳು ಇಡೀ ಜಾಲವನ್ನೇ ಬಯಲುಗೊಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
Human Error: ಮಾನವ ಲೋಪದಿಂದಲೇ CDS ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ: ವರದಿ
Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ
Burhan Wani; ಬುರ್ಹಾನ್ ವಾನಿ ಅನುಚರ ಸೇರಿ 5 ಉಗ್ರರ ಎನ್‌ಕೌಂಟರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.