ಮಗಳಿಗೆ ಅಪ್ಪ ಸೆಲ್ಯೂಟ್
Team Udayavani, Sep 4, 2018, 6:00 AM IST
ಹೈದರಾಬಾದ್: ಅಪ್ಪ ಮತ್ತು ಮಗಳು ಪೊಲೀಸ್ ಇಲಾಖೆಯಲ್ಲಿ ಕಿರಿಯ ಮತ್ತು ಹಿರಿಯ ಅಧಿಕಾರಿಗಳಾಗಿ ಮುಖಾಮುಖಿ ಆದರೆ ಹೇಗಿರುತ್ತದೆ? ಹೈದರಾಬಾದ್ನಲ್ಲಿ ಭಾನುವಾರ ನಡೆದ ಟಿಆರ್ಎಸ್ ಸಮಾವೇಶದಲ್ಲಿ ಹೃದಯ ತುಂಬುವ ಸನ್ನಿವೇಶ ನಡೆದಿದೆ. ತೆಲಂಗಾಣ ಪೊಲೀಸ್ ಇಲಾಖೆಯಲ್ಲಿ ಡಿಸಿಪಿಯಾಗಿರುವ ಉಮಾ ಮಹೇಶ್ವರ ಶರ್ಮಾ ಮತ್ತು ಅವರ ಐಪಿಎಸ್ ಅಧಿಕಾರಿ ಪುತ್ರಿ ಸಿಂಧೂ ಶರ್ಮಾ ನಡುವಿನ ಕತೆ ಇದು. ಜತೆಗೆ ತಂದೆ ಪುತ್ರಿಗೆ ಸೆಲ್ಯೂಟ್ ಹೊಡೆದು ಸುದ್ದಿಯಾಗಿದ್ದಾರೆ. ಶರ್ಮಾ ಸಮಾವೇಶದ ಭದ್ರತೆಗಾಗಿ ನಿಯೋಜನೆಗೊಂಡಿದ್ದರು.
ಜಗಿತ್ಯಾಲ ಜಿಲ್ಲೆಯ ಎಸ್ಪಿಯಾಗಿರುವ ಸಿಂಧೂ ಶರ್ಮಾ ಪರಿಶೀಲನೆಗೆ ತೆರಳಿದ್ದಾಗ ಈ ಘಟನೆ ನಡೆದಿದ್ದು, ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉಮಾಮಹೇಶ್ವರ, “ಕರ್ತವ್ಯದ ವಿಚಾರದಲ್ಲಿ ಮಗಳು ನನ್ನ ಹಿರಿಯ ಅಧಿಕಾರಿಯಾದ್ದರಿಂದ ಮುಖಾಮುಖಿಯಾದಾಗ ಸಹಜವಾಗಿ ಸೆಲ್ಯೂಟ್ ಹೊಡೆದೆ. ಇದೇ ಮೊದಲ ಬಾರಿಗೆ ನಾನು, ಮಗಳು ಮುಖಾಮುಖಿಯಾಗಿದ್ದೇವೆ’ ಎಂದಿದ್ದಾರೆ.
ಚಲಿಸುವ ಬಾರ್ !
ಕೊಂಗರ ಕಲಾನ್ನಲ್ಲಿ ಆಯೋಜಿಸಲಾಗಿದ್ದ “ಪ್ರಗತಿ ನಿವೇದನ ಸಭಾ’ಕ್ಕೆ ನಾನಾ ಪ್ರಾಂತ್ಯಗಳಿಂದ ಟಿಆರ್ಎಸ್ ಪಕ್ಷದ ಕಾರ್ಯಕರ್ತರನ್ನು ಹೊತ್ತು ತಂದಿದ್ದ ಸರ್ಕಾರಿ ಬಸ್ಗಳು, ಟ್ರಾಕ್ಟರ್ಗಳು “ಚಲಿಸುವ ಬಾರ್’ಗಳಾಗಿದ್ದವು ಎಂಬ ಟೀಕೆ ವ್ಯಕ್ತವಾಗಿದೆ. ಸರ್ಕಾರಿ ಬಸ್ಗಳಲ್ಲೇ ಮದ್ಯದ ಬಾಟಲಿಗಳನ್ನು ಸ್ಟಾಕ್ ಮಾಡಲಾಗಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವಿಪಕ್ಷಗಳಿಂದ ಭಾರೀ ಟೀಕೆಗೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.