ನರ್ಸಿಂಗ್ ಮಾಡುವವರಿಗೂ ವೈದ್ಯ ಶಿಕ್ಷಣಕ್ಕೆ ಅವಕಾಶ ಕೊಡಿ
Team Udayavani, Jun 6, 2019, 6:10 AM IST
ಹೊಸದಿಲ್ಲಿ: ಕೇಂದ್ರ ಸರಕಾರಕ್ಕೆ ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್ ನೇತೃತ್ವದ ಸಮಿತಿ ಸಲ್ಲಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವೈದ್ಯಕೀಯ ಶಿಕ್ಷಣದಲ್ಲೂ ಆಮೂಲಾಗ್ರ ಬದಲಾವಣೆಗೆ ಶಿಫಾರಸು ಮಾಡಲಾಗಿದೆ. ವೈದ್ಯ ಶಿಕ್ಷಣ ಕೋರ್ಸ್‌ಗೆ ದಂತ ವೈದ್ಯ, ನರ್ಸಿಂಗ್ ಕೋರ್ಸ್ ಮಾಡುವವ ರಿಗೆ ಲ್ಯಾಟರಲ್ ಎಂಟ್ರಿಗೆ (ನೇರಪ್ರವೇಶ)ಅವಕಾಶ ಮಾಡಿಕೊಡಬಹುದು ಎಂದು ಸಲಹೆ ಮಾಡಲಾಗಿದೆ.
ಶಿಕ್ಷಣ ನೀತಿಯ ಪ್ರಕಾರ ನರ್ಸಿಂಗ್, ದಂತ ವೈದ್ಯ, ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆವ ಮುನ್ನ ಮೊದಲ 2 ವರ್ಷಗಳಲ್ಲಿ ಸಮಾನವಾಗಿರುವ ಶಿಕ್ಷಣ ಇರಬೇಕು. ಅನಂತರ ಅವರಿಗೆ ಬೇಕಾದ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ.
ಇದರ ಜತೆಗೆ ಎಂಬಿಬಿಎಸ್ ಪದವಿ ಮುಕ್ತಾಯಕ್ಕಾಗಿ ಇರುವ ಪರೀಕ್ಷೆ (ಎಕ್ಸಿಟ್ ಎಕ್ಸಾಮ್), ಸ್ನಾತಕೋತ್ತರ ವೈದ್ಯ ಕೋರ್ಸ್‌ಗೆ ಪ್ರವೇಶ ಪಡೆಯಲು ಇರುವ ಪರೀಕ್ಷೆಯೂ ಆಗಬೇಕು ಎಂದು ಸಲಹೆ ಮಾಡಲಾಗಿದೆ. ನಾಲ್ಕನೇ ವರ್ಷದ ಮುಕ್ತಾಯದಲ್ಲಿ ಈ ಪರೀಕ್ಷೆ ನಡೆಸಬೇಕು. ಈ ಮೂಲಕ ಪ್ರತ್ಯೇಕವಾಗಿ ಪರೀಕ್ಷೆಗೆ ಸಿದ್ಧತೆ ನಡೆಸುವ ಹೊರೆ ತಪ್ಪಿಸಿದಂತಾಗುತ್ತದೆ. ಈ ಅವಧಿಯನ್ನು ಪ್ರಾಯೋಗಿಕ ತರಬೇತಿ ಪಡೆಯಲು ಬಳಕೆ ಮಾಡಬಹುದು. ದೇಶದಲ್ಲಿ ವೈದ್ಯರ ಕೊರತೆ ಹಿನ್ನೆಲೆಯಲ್ಲಿ ಈ ಅಂಶವನ್ನು ಸಮಿತಿ ಸಲಹೆ ಮಾಡಿದೆ. ಶಿಕ್ಷಣ ಸಂಸ್ಥೆಗಳು ಸರಕಾರ ಸಿದ್ಧಪಡಿಸಿದ ಸೂಚಿಗೆ ಅನುಗುಣವಾಗಿ ತಮ್ಮದೇ ಆಗಿರುವ ಪಠ್ಯಕ್ರಮ ಸಿದ್ಧಪಡಿಸಲೂ ಅನುಮತಿ ನೀಡಬಹುದಾಗಿದೆ ಎಂದು ‘ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.