![Delhi-Stampede-Railway](https://www.udayavani.com/wp-content/uploads/2025/02/Delhi-Stampede-Railway-415x249.jpg)
![Delhi-Stampede-Railway](https://www.udayavani.com/wp-content/uploads/2025/02/Delhi-Stampede-Railway-415x249.jpg)
Team Udayavani, Jan 29, 2025, 6:44 AM IST
ನವದೆಹಲಿ: ಹರ್ಯಾಣ ಸರ್ಕಾರ ದೆಹಲಿಗೆ ಪೂರೈಸುವ ಯಮುನಾ ನದಿ ನೀರಿಗೆ ವಿಷ ಬೆರೆಸುತ್ತಿದೆ ಎಂದು ಆರೋಪಿಸಿದ್ದ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್‌ಗೆ ಚುನಾವಣಾ ಆಯೋಗ ಮಂಗಳವಾರ ಪತ್ರ ಬರೆದಿದೆ. ಆರೋಪಗಳ ಬಗ್ಗೆ ಬುಧವಾರ ರಾತ್ರಿ 8 ಗಂಟೆಯ ಒಳಗಾಗಿ ದಾಖಲೆ ಸಹಿತ ಉತ್ತರ ನೀಡುವಂತೆ ಸೂಚಿಸಿದೆ. ಹರ್ಯಾಣ ನದಿಗೆ ಮಿಶ್ರ ಮಾಡುತ್ತಿರುವ ವಿಷಕಾರಕ ಅಂಶಗಳು, ಅದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ದಾಖಲೆ ಸಹಿತ ಉತ್ತರ ನೀಡಬೇಕು ಎಂದು ಪತ್ರದಲ್ಲಿ ಸೂಚಿಸಿದೆ. ಜತೆಗೆ ದೆಹಲಿ ಜಲ ಮಂಡಳಿ ಅಧಿಕಾರಿಗಳ ವಿವರಣೆಯಲ್ಲೂ ಸಲ್ಲಿಸುವಂತೆ ಹೇಳಿದೆ.
ಇದಕ್ಕೂ ಮೊದಲು ನಡೆದಿದ್ದ ಬೆಳವಣಿಗೆಯಲ್ಲಿ ದೆಹಲಿ ಸಿಎಂ ಆತಿಶಿ ಮತ್ತು ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್ ಅವರು, ಯುಮುನಾ ನದಿಗೆ ವಿಷ ಬೆರೆಸಲಾಗುತ್ತಿದೆ ಎಂಬ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಬಳಿಕ ಮಾತನಾಡಿದ್ದ ಅವರು ಆಯೋಗ ನಮ್ಮ ಅಹವಾಲು ಆಲಿಸಿದೆ ಎಂದು ಹೇಳಿದ್ದರು. ಅದಕ್ಕೆ ಪೂರಕವಾಗಿಯೇ ವಿಷ ಬೆರೆಸುವ ಹೇಳಿಕೆ ಬಗ್ಗೆ ಸಾಕ್ಷ್ಯ ನೀಡುವಂತೆ ಕೇಜ್ರಿವಾಲ್‌ಗೆ ಆಯೋಗ ಸೂಚಿಸಿದೆ.
ಕಾನೂನು ಕ್ರಮ: ಸುಳ್ಳು ಆರೋಪ ಮಾಡಿದ ಅರವಿಂದ ಕೇಜ್ರಿವಾಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹರ್ಯಾಣ ಸಿಎಂ ನಯಾಬ್ ಸಿಂಗ್ ಸೈನಿ ಎಚ್ಚರಿಕೆ ನೀಡಿದ್ದಾರೆ. ಇದೊಂದು ಅಪ್ಪಳ ಸುಳ್ಳು ಮತ್ತು ನಾಚಿಕೆಗೇಡಿನ ಹೇಳಿಕೆ ಎಂದು ಅವರು ಆರೋಪಿಸಿದ್ದಾರೆ.
ಆರೋಪ ಸುಳ್ಳು: ಯಮುನೆ ನೀರಿನಲ್ಲಿ ಹರ್ಯಾಣ ವಿಷ ಬೆರೆಸುತ್ತಿದೆ ಎಂಬ ಕೇಜ್ರಿವಾಲ್ ಆರೋಪವನ್ನು ದೆಹಲಿ ಜಲ ಮಂಡಳಿ ಅಧಿಕಾರಿಗಳು ತಿರಸ್ಕರಿಸಿದ್ದಾರೆ. ಮಾಜಿ ಸಿಎಂ ಹೇಳಿದ ವಿಚಾರಗಳು ಸತ್ಯಕ್ಕೆ ದೂರವಾದದ್ದು ಎಂದು ದೆಹಲಿ ಜಲ ಮಂಡಳಿ ಅಧ್ಯಕ್ಷರು ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಕೇಜ್ರಿವಾಲ್ ಹೇಳಿದ್ದೇನು?
ಹರ್ಯಾಣದಲ್ಲಿ ಬಿಜೆಪಿ ಜತೆಗೆ ಗುರುತಿಸಿಕೊಂಡಿರುವವರು ದೆಹಲಿಗೆ ಹರಿದು ಬರುತ್ತಿರುವ ಯಮುನಾ ನೀರಿಗೆ ವಿಷ ಬೆರೆಸಿದ್ದಾರೆ. ದೆಹಲಿಯಲ್ಲಿರುವ ಹಲವರು ಅದನ್ನು ಕುಡಿದರೆ ಸತ್ತು ಹೋಗಲಿದ್ದಾರೆ. ಅದನ್ನು ದೆಹಲಿಯ ಶುದ್ಧೀಕರಣ ಘಟಕದಲ್ಲಿಯೂ ತೆಗೆಯಲು ಸಾಧ್ಯವಿಲ್ಲ. ದೆಹಲಿ ಜಲ ಮಂಡಳಿ ಕೆಲವೆಡೆ ನೀರು ಪೂರೈಕೆ ಸ್ಥಗಿತಗೊಳಿಸಿದೆ ಎಂದು ಟ್ವೀಟ್ ಮಾಡಿದ್ದರು.
Maha Kumbh Rush: ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಿಂದ 16 ಮಂದಿ ದುರ್ಮರಣ!
Ranveer Allahbadia: ನಾನು ಎಲ್ಲೂ ಓಡಿ ಹೋಗಿಲ್ಲ: ಅಲಹಬಾದಿಯಾ
‘Y’ security: ತಮಿಳು ನಟ ವಿಜಯ್‌ಗೆ ಭದ್ರತೆ ಕೊಟ್ಟ ಕೇಂದ್ರ ಸರ್ಕಾರ
Justice Abhay Oka: ಕೋರ್ಟ್ ಗೆ “ಮಹಾ’ಗಿಂತ ಕರ್ನಾಟಕದಲ್ಲಿ ಹೆಚ್ಚು ಮೂಲಸೌಕರ್ಯ: ಜಡ್ಜ್
Setback: ಕೇಜ್ರಿವಾಲ್‌ಗೆ ಮತ್ತೊಂದು ಶಾಕ್..ಆಪ್‌ನ 3 ಕೌನ್ಸಿಲರ್‌ಗಳು ಬಿಜೆಪಿ ಸೇರ್ಪಡೆ
Maha Kumbh Rush: ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಿಂದ 16 ಮಂದಿ ದುರ್ಮರಣ!
Kottigehara: 35 ವರ್ಷಗಳ ಹಿಂದೆ ಸೇವಿಸಿದ್ದ ಊಟದ ಬಿಲ್ ಪಾವತಿ!
Ranveer Allahbadia: ನಾನು ಎಲ್ಲೂ ಓಡಿ ಹೋಗಿಲ್ಲ: ಅಲಹಬಾದಿಯಾ
‘Y’ security: ತಮಿಳು ನಟ ವಿಜಯ್‌ಗೆ ಭದ್ರತೆ ಕೊಟ್ಟ ಕೇಂದ್ರ ಸರ್ಕಾರ
Justice Abhay Oka: ಕೋರ್ಟ್ ಗೆ “ಮಹಾ’ಗಿಂತ ಕರ್ನಾಟಕದಲ್ಲಿ ಹೆಚ್ಚು ಮೂಲಸೌಕರ್ಯ: ಜಡ್ಜ್
You seem to have an Ad Blocker on.
To continue reading, please turn it off or whitelist Udayavani.