ಏನಿದು PUBG ಗೇಮ್?ದುಬಾರಿ ಮೊಬೈಲ್ ಕೊಡಿಸಲಿಲ್ಲ ಎಂದು ಮಗ ನೇಣಿಗೆ ಶರಣು
Team Udayavani, Feb 4, 2019, 10:57 AM IST
ಮಹಾರಾಷ್ಟ್ರ: ಇತ್ತೀಚೆಗೆ ಜಗತ್ತಿನಾದ್ಯಂತ ಹೆಚ್ಚು ಜನಪ್ರಿಯತೆ ಗಳಿಸುತ್ತಿರುವ ಪಿಯುಬಿಜಿ(ಪ್ಲೇಯರ್ ಅನ್ ನೋನ್ಸ್ ಬ್ಯಾಟಲ್ ಗ್ರೌಂಡ್) ಮೊಬೈಲ್ ಗೇಮ್ ಗೆ ಆಕರ್ಷಿತನಾಗಿದ್ದ ಮುಂಬೈನ 18 ವರ್ಷದ ಯುವಕ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ವಾಣಿಜ್ಯ ನಗರಿ ಮುಂಬೈಯ ಕುರ್ಲಾ ನೆಹರು ನಗರದ ಯುವಕ ತನಗೆ ಪಿಯುಬಿಜಿ ಗೇಮ್ ಆಡಲು ದುಬಾರಿ ಬೆಲೆಯ(37 ಸಾವಿರ ರೂಪಾಯಿ) ಸ್ಮಾರ್ಟ್ ಫೋನ್ ಬೇಕೆಂದು ಪೋಷಕರಲ್ಲಿ ಹಠ ಹಿಡಿದಿದ್ದ. ಆದರೆ ಮನೆಯವರು ದುಬಾರಿ ಬೆಲೆಯ ಫೋನ್ ತೆಗೆದುಕೊಡಲು ನಿರಾಕರಿಸಿ, 20 ಸಾವಿರ ರೂಪಾಯಿಯೊಳಗಿನ ಫೋನ್ ಖರೀದಿಸು ಅಂತ ಹೇಳಿರುವುದಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಡಿಮೆ ಬೆಲೆಯ ಮೊಬೈಲ್ ಬೇಡ ಎಂದು ಅಸಮಾಧಾನಗೊಂಡ ಯುವಕ ಮನೆಯೊಳಗಿನ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದೊಂದು ಆಕಸ್ಮಿಕ ಘಟನೆಯಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪಿಯುಬಿಜಿ ಗೇಮ್?
ಈ ಗೇಮ್ ನಲ್ಲಿ ಪ್ಲೇಯರ್ ಅನ್ ನೋನ್ ಘೋಸ್ಟ್ ಹೋಟೆಲ್ ಬ್ಯಾಟಲ್ ರಾಯಲ್ ಗೇಮ್ ಅನ್ನು ಆಧರಿಸಿರುತ್ತದೆ. ಇದರಲ್ಲಿ ಹಲವಾರು ರೀತಿಯ ನಿಯಂತ್ರಣಗಳಿವೆ. ಪ್ಯಾರಾಚೂಟ್ ಬಳಸಿ ಲ್ಯಾಂಡ್ ಆಗುವುದು, ವೆಪನ್ ಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ಕೊಲ್ಲುವುದು ಮತ್ತು ಶತ್ರುಗಳಿಂದ ರಕ್ಷಿಸಿಕೊಳ್ಳುವುದು ಇತ್ಯಾದಿ. ಅವೆಲ್ಲವನ್ನೂ ಮ್ಯಾನೇಜ್ ಮಾಡುವುದೇ ಈ ಆಟದ ಮುಖ್ಯಾಂಶ. ಅದನ್ನು ಸ್ಮಾರ್ಟ್ ಫೋನ್ ಸ್ಕ್ರೀನ್ ಅಥವಾ ಟಚ್ ಸ್ಕ್ರೀನ್ ನಲ್ಲಿ ಸಾಧಿಸುವುದು ಸ್ವಲ್ಪ ಕಷ್ಟಕರ. ಈ ಗೇಮ್ ಪ್ಲೇಯನ್ನು ಪಿಸಿಯಲ್ಲಿ ಆಟಗಾರರಿಗೆ ಕೀಬೋರ್ಡ್ ಮತ್ತು ಮೌಸ್ ಮೂಲಕ ಸಿಗುವುದರಿಂದ ಆಟದಲ್ಲಿ ಹೆಚ್ಚು ಕ್ರಿಯಾಶೀಲರಾಗುತ್ತಾರೆ. ಈ ಗೇಮ್ ಅನ್ನು ಪ್ಲೇ ಸ್ಟೇಷನ್, ಸ್ಮಾರ್ಟ್ ಫೋನ್ ಮತ್ತು ಡೆಸ್ಕ್ ಟಾಪ್ ಗಳಲ್ಲಿ ಆಡಬಹುದಾಗಿದೆ.
ಗೇಮ್ ಆರಂಭವಾಗುತ್ತಿದ್ದಂತೆ, ದ್ವೀಪವೊಂದರಲ್ಲಿ ವಿಮಾನದಿಂದ ನೂರು ಜನರು ಧುಮಕುತ್ತಾರೆ. ಬಳಿಕ ಅವರು ದ್ವೀಪದ ಬೇರೆ ಬೇರೆ ಜಾಗದಲ್ಲಿರುವ ಮನೆಗಳಿಗೆ ಹೋಗಿ ಅಲ್ಲಿ ದೊರೆಯುವ ಶಸ್ತ್ರಾಸ್ತ್ರಗಳು, ಮೆಡಿಸಿನ್ ಕಿಟ್ ಹಾಗೂ ಮತ್ತಿತರ ಐಟಮ್ ಸೇರಿದಂತೆ ಯುದ್ಧಕ್ಕೆ ಬೇಕಾಗುವ ವಸ್ತುಗಳನ್ನು ತೆಗೆದುಕೊಳ್ಳಬೇಕು. ಪ್ಲೇಯರ್‌ಗಳು ಅಂದರೆ ಅಟಗಾರರು ಬೈಕ್, ಕಾರ್ ಮತ್ತು ಬೋಟ್‌ಗಳ ಮೂಲಕ ದ್ವೀಪದ ಇತರ ಪ್ರದೇಶಗಳನ್ನು ತಲುಪಬಹುದು ಮತ್ತು ಮನೆಗಳನ್ನು ಲೂಟಿ ಮಾಡಬಹುದು ಅಥವಾ ಅಡುಗುತಾಣಗಳಲ್ಲಿ ಅಡಗಿಕೊಂಡು ತಮ್ಮ ಶತ್ರುವನ್ನು ಕೊಲ್ಲಬೇಕು. ಹೀಗೆ ಕೊಲ್ಲುವ ಆಟದಲ್ಲಿ ಯಾರು ಕೊನೆಯವವರೆಗೂ ಸಾಯದೇ ಉಳಿಯುತ್ತಾರೋ ಅವರೇ ವಿನ್ನರ್!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.