ಪುಣೆ: ಬಿಜೆಪಿ ಶಾಸಕ ಲಕ್ಷ್ಮಣ್ ಜಗತಾಪ್ ನಿಧನ
Team Udayavani, Jan 3, 2023, 4:32 PM IST
ಪುಣೆ: ಬಿಜೆಪಿಯ ಪುಣೆಯ ಚಿಂಚ್ವಾಡ್ ಶಾಸಕ ಲಕ್ಷ್ಮಣ್ ಜಗತಾಪ್(59) ಅವರು ಮಂಗಳವಾರ ನಿಧನರಾದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ದೀರ್ಘಕಾಲದಿಂದ ಕಾನ್ಸರ್‌ನಿಂದ ಬಳಲುತಿದ್ದ ಅವರು ಚಿಕಿತ್ಸೆಯನ್ನು ಪಡೆಯುತ್ತಿದ್ದರು, ಕಳೆದ ಒಂದು ತಿಂಗಳಿಂದ ಸ್ಥಿತಿ ಗಂಭೀರವಾಗಿ ಮಂಗಳವಾರ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಕಳೆದ ಹದಿನೈದು ದಿನಗಳಲ್ಲಿ ಬಿಜೆಪಿ ರಾಜ್ಯದ ಇಬ್ಬರು ಶಾಸಕರನ್ನು ಕಳೆದುಕೊಂಡಿದೆ. ಇದಕ್ಕೂ ಮೊದಲು ಡಿಸೆಂಬರ್ 22 ರಂದು, ಪುಣೆಯ ಕಸ್ಬಾ ಕ್ಷೇತ್ರದಿಂದ ಪಕ್ಷದ ಶಾಸಕಿ ಮುಕ್ತಾ ತಿಲಕ್ ಅವರು ನಿಧನಹೊಂದಿದ್ದರು.
ಜಗತಾಪ್ ಅವರು ಚಿಂಚ್ವಾಡ್ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದರು. ತಮ್ಮ ಅನಾರೋಗ್ಯದ ಹೊರತಾಗಿಯೂ, ಕಳೆದ ವರ್ಷ ಮೇ ಮತ್ತು ಜೂನ್‌ನಲ್ಲಿ ನಡೆದ ರಾಜ್ಯಸಭೆ ಮತ್ತು ಮಹಾರಾಷ್ಟ್ರ ವಿಧಾನ ಪರಿಷತ್ತಿನ ಚುನಾವಣೆಗಳಲ್ಲಿ ಮತ ಚಲಾಯಿಸಲು ಪುಣೆಯಿಂದ ಮುಂಬಯಿಗೆ ಪ್ರಯಾಣಿಸಿದ್ದರು. ಇದು ಅವರಿಗೆ ರಾಜಕೀಯ ವಲಯಗಳಲ್ಲಿ ಪ್ರಶಂಸೆಗೆ ಕಾರಣವಾಯಿತು.
ಪುಣೆಯ ಉಸ್ತುವಾರಿ ಸಚಿವ ಮತ್ತು ಮಹಾರಾಷ್ಟ್ರ ಸಂಪುಟ ಸಚಿವ ಚಂದ್ರಕಾಂತ್ ಪಾಟೀಲ್ ಅವರು, 15 ದಿನಗಳಲ್ಲಿ ಪಕ್ಷಕ್ಕೆ ಇದು ಎರಡನೇ ದುರದೃಷ್ಟಕರ ಸುದ್ದಿಯಾಗಿದೆ ಎಂದು ಹೇಳಿದರು.
ತಿಲಕ್ ನಿಧನದ ನಂತರ ಬಿಜೆಪಿ ಕಾರ್ಯಕರ್ತರಿಗೆ ಇದು ಎರಡನೇ ಆಘಾತ, ನಾವೆಲ್ಲರೂ ಒಂದು ಕುಟುಂಬದಂತೆ ಬದುಕುತ್ತಿದ್ದೇವೆ. ಜಗತಾಪ್ ಅವರ ನಿಧನವು ಕುಟುಂಬದ ಸದಸ್ಯರನ್ನು ಕಳೆದುಕೊಂಡಂತೆ ಆಗಿದೆ ಎಂದು ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.