ಪುಣೆ ಮಹಾನಗರ ಪಾಲಿಕೆ: ಮನೆ ಬಾಗಿಲಿನಿಂದ ಕಸ ಸಂಗ್ರಹ ಅಭಿಯಾನ
Team Udayavani, Jun 1, 2019, 10:20 AM IST
ಪುಣೆ: ಪಿಂಪ್ರಿ-ಚಿಂಚ್ವಾಡ್ ಮುನ್ಸಿಪಾಲ್ ಕಾರ್ಪೊರೇಶನ್ (ಪಿಸಿಎಂಸಿ) ಜುಲೈ 1ರಿಂದ ನಗರದ ನಿವಾಸಿಗಳ ಮನೆ ಬಾಗಿಲಿನಿಂದ ಕಸ ಸಂಗ್ರಹಣೆಯನ್ನು ಪ್ರಾರಂಭಿಸುವ ನೂತನ ಯೋಜನೆಗೆ ಮುಂದಾಗಿದೆ.
ಪಿಸಿಎಂಸಿ ಜೂನ್ 1ಕ್ಕೆ ಗುತ್ತಿಗೆದಾರರಿಗೆ ಈ ಕೆಲಸವನ್ನು ನೀಡಿದ್ದು, ಗುತ್ತಿಗೆದಾರರ ಅಸಮರ್ಪಕ ಸಂಖ್ಯೆಯ ವಾಹನಗಳ ಬಳಕೆಯಿಂದ ಕಸದ ವಿಲೇವಾರಿ ವಿಳಂಬಕ್ಕೆ ಕಾರಣವಾಗುತ್ತಿದೆ ಎಂದು ಆಪಾದಿಸಲಾಗಿದೆ. ಪಿಎಂಸಿಯ ಸಾœಯಿ ಸಮಿತಿಯ ಅಧ್ಯಕ್ಷರಾದ ವಿಲಾಸ್ ಮಾಧಗಿರಿ ಅವರು, ಮೇ 28ರಂದು ಮತ್ತೂಂದು ತಿಂಗಳ ವಿಸ್ತರಣೆಯನ್ನು ಗುತ್ತಿಗೆದಾರರಿಗೆ ನೀಡಲು ಸಭೆ ನಡೆಸಿದರು.
ಫೆ. 28ರಂದು ಕೆಲಸದ ಆದೇಶದಂತೆ, ಗುತ್ತಿಗೆದಾರರು ಜೂನ್ 1ರಿಂದ ಕೆಲಸ ಪ್ರಾರಂಭಿಸಬೇಕು, ಆದರೆ ಹೊಸ ಕಸ-ಸಂಗ್ರಹಣಾ ವಾಹನಗಳು ಲಭ್ಯವಿಲ್ಲದಿರುವುದರಿಂದ ಪಿಎಂ ಸಿಯು ಒಂದು ತಿಂಗಳೊಳಗೆ
ದಿನಾಂಕವನ್ನು ವಿಸ್ತರಿಸಲು ನಿರ್ಧರಿಸಿದೆ ಎಂದು ಮಾಧಗಿರಿ ಹೇಳಿದ್ದು, ಆದ್ದರಿಂದ ಗುತ್ತಿಗೆದಾರರು ಜುಲೈ 1 ರಿಂದ ಕೆಲಸ ಪ್ರಾರಂ ಭಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
2018ರಲ್ಲಿ ಪಿಂಪ್ರಿ-ಚಿಂಚಾÌಡ್ ಮುನ್ಸಿಪಾಲ್ ಕಾರ್ಪೊರೇಷನ್ (ಪಿಸಿಎಂಸಿ) ನಡೆಸಿದ ಕಸ ಸಂಗ್ರಹಣೆ ಮತ್ತು ಸಾಗಣೆಗೆ ಸಂಬಂಧಿಸಿದ ಟೆಂಡರಿಂಗ್ ಪ್ರಕ್ರಿಯೆ ವಿರೋಧದ ರೇಡಾರ್‌ನಲ್ಲಿದ್ದು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವಿನ ಸಂಭವನೀಯ ಸಂಬಂಧವನ್ನು ಗುರುತಿಸಲಾಗಿದೆ. ಪಿಸಿಎಂಸಿ ಅಧಿಕಾರಿಗಳು ಬಿವಿಜಿ ಇಂಡಿಯಾ ಲಿಮಿಟೆಡ್ ಮತ್ತು ಎಜಿ ಎನ್ವಿರೊ ಸೊಲ್ಯೂಷನ್‌ಗೆ ಟೆಂಡರ್ ನೀಡುವ ಮೂಲಕ ತೆರಿಗೆದಾರರ ಹಣವನ್ನು ವ್ಯರ್ಥ ಮಾಡುತ್ತಿ¨ªಾರೆ. ಇದು ಅಂದಾಜು ವೆಚ್ಚಕ್ಕಿಂತ ಹೆಚ್ಚಿನದಾಗಿರು ತ್ತದೆ. ಇದು ಪಿಸಿಎಂಸಿಗೆ 252 ಕೋ.ರೂ. ನಷ್ಟವಾಗಲಿದೆ ಎಂದು ಅಧಿಕಾರಿ ಯೊಬ್ಬರು ಆರೋಪಿಸಿ¨ªಾರೆ.
ಪರಿಸರ ಜಾಗೃತಿ ಅಭಿಯಾನ
ಪುಣೆ ಪಿಂಪ್ರಿ ಚಿಂಚಾÌಡ್ ಮುನ್ಸಿಪಲ್ ಕಾರ್ಪೊರೇಶನ್ ಜೂನ್ 5ರಿಂದ ಜೂ. 24ರ ವರೆಗೆ ಪರಿಸರ ಜಾಗೃತಿ ಅಭಿಯಾನವನ್ನು ಕೈಗೊಂಡಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕವಾಗಿ ಕಸವನ್ನು ಹಾಕುವವರಿಗೆ ಐದು ಸಾವಿರ ರೂ. ದಂಡ ವಿಧಿಸಲು ನಿರ್ಧರಿಸಿದೆ. ಈ ಕ್ರಮವು 2016ರ ಘನ ವೇಸ್ಟ್ ಮ್ಯಾನೇಜ್‌ಮೆಂಟ್ ರೂಲ್ಸ್‌ನಲ್ಲಿ ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ (ಎನಿjಟಿ) ಹೊರಡಿಸಿದ ಮಾರ್ಗದರ್ಶಿ ಸೂತ್ರಗಳ ಅಡಿಯಲ್ಲಿ ಬರುತ್ತದೆ.
ಮಂಗಳವಾರ ಪಿಸಿಎಂಸಿ ಕಮಿಷನರ್ ಶ್ರಾವನ್ ಹಾರ್ಡಿಕರ್ ಅವರು, ಪಿಸಿಎಂಸಿ ಹೆಚ್ಚುವರಿ ಕಮಿಷನರ್ ದಿಲೀಪ್ ಗವಾಡೆ ಮತ್ತು ನಾಗರಿಕ ಆರೋಗ್ಯ ಅಧಿಕಾರಿ ಡಾ| ಅನಿಲ್ ರಾಯ್ ಅವರೊಂದಿಗೆ ಸಭೆ ನಡೆಸಿದರು. ಪಿಎಂಸಿ ಅಧಿಕಾರಿಗಳು ಜಿಪಿಎಸ್ ಸಿಸ್ಟಮ್ ಮುಖಾಂತರ ವಾಹನವೊಂದನ್ನು ಪ್ರತಿ ಮನೆಯಿಂದ ಕಸವನ್ನು ಸಂಗ್ರಹಿಸಲು ನೇಮಕ ಮಾಡುತ್ತಾರೆ. ಪ್ರತಿ ಮುಖ್ಯ ರಸ್ತೆಯ ಪ್ರತಿ 100 ಮೀಟರ್‌ಗಳಷ್ಟು ದೂರದಲ್ಲಿ ಕಸದ ತೊಟ್ಟಿಯನ್ನು ಅಳವಡಿಸಬೇಕಾಗಿದೆ. ಇದಲ್ಲದೆ ಅಕ್ರಮವಾಗಿ ಕಸದ ಸುಡುವಿಕೆಗೆ ಹೊಸ ದಂಡ ವಿಧಿಸಲಾಗುತ್ತದೆ ಎಂದು ಹಾರ್ಡಿಕರ್ ತಿಳಿಸಿದ್ದಾರೆ. ಹೆಚ್ಚುವರಿ ಕಮಿಷನರ್ ದಿಲೀಪ್ ಗವಾಡೆ ಅವರು, ಕಸವನ್ನು ದೊಡ್ಡ ಪ್ರಮಾಣದಲ್ಲಿ ಸುಡುವ ಮತ್ತು ಪರಿಸರಕ್ಕೆ ಹಾನಿಯನ್ನುಂಟು ಮಾಡುವವರು ನಮ್ಮ ಗಮನಕ್ಕೆ ಬಂದಲ್ಲಿ ದಂಡ ವಿಧಿಸಲಾಗುವುದು. ಅಂತಹ ವ್ಯಕ್ತಿಗಳನ್ನು ನಗರ ಪಾಲಿಕೆಯ ನೌಕರರು ನಮ್ಮ ವೀಕ್ಷಣೆ ಪಟ್ಟಿಯಲ್ಲಿ¨ªಾರೆ ಎಂದು ಹೇಳಿದ್ದಾರೆ.
ನಿವಾಸಿಗಳ ಬಾಗಿಲಿನಿಂದ ಕಸ ಸಂಗ್ರಹ
ನಿವಾಸಿಗಳ ಮನೆ ಬಾಗಿಲಿನಿಂದ ಕಸ ಸಂಗ್ರಹಣೆಗಾಗಿ, ಪ್ರತಿ ಮನೆಯು ಪಿಸಿಎಂಸಿಯು ಹೊರಡಿಸಿದ ನಿರ್ದಿಷ್ಟ ತೊಟ್ಟಿಗಳಲ್ಲಿ ಕಸವನ್ನು ಸಂಗ್ರಹಿಸಬೇಕಾಗುತ್ತದೆ. ಮಹಾನಗರ ಪಾಲಿಕೆಯ ವಾಹನಗಳು ದೈನಂದಿನ ಕಸವನ್ನು ಸಂಗ್ರಹಿಸುತ್ತವೆ. ಪಿಸಿಎಂಸಿ ದಿನಕ್ಕೆ 850 ಟನ್‌ಗಳಷ್ಟು ಕಸವನ್ನು ಸಂಗ್ರಹಿಸುತ್ತದೆ. ಅದಕ್ಕಾಗಿ ನಾಲ್ಕು ಚಕ್ರದ ವಾಹನಗಳು 302, ಮೂರು ಚಕ್ರದ 60 ವಾಹನಗಳು, 17 ಡಂಪರ್‌ಗಳು, 4 ಕಾಂಪಾಕ್ಟರ್‌ಗಳು ಸೇರಿದಂತೆ ಒಟ್ಟು 1,153 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
MUST WATCH
ಹೊಸ ಸೇರ್ಪಡೆ
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.