ಫೇಸ್ ಬುಕ್ಕಲ್ಲಿ ದಾಂಪತ್ಯ ಬಟಾಬಯಲು:ಪತ್ನಿ ಕೊಂದ ಟೆಕ್ಕಿ ಆತ್ಮಹತ್ಯೆ
Team Udayavani, Jan 20, 2017, 3:29 PM IST
ಪುಣೆ : ತಮ್ಮ ದಾಂಪತ್ಯ ಬದುಕಿನ ಖಾಸಗಿ ವಿಷಯಗಳನ್ನು ಸಾಮಾಜಿಕ ಜಾಲ ತಾಣಕ್ಕೆ ಹಾಕುವ ಖಯಾಲಿ ಹೊಂದಿದ್ದ ಪತ್ನಿಯ ಮೇಲೆ ವಿಪರೀತ ಗರಂ ಆದ ಪತಿರಾಯ, ಪುಣೆಯ ಟೆಕ್ಕಿ, ಪತ್ನಿಯನ್ನು ಕುತ್ತಿಗೆ ಬಿಗಿದು ಕೊಂದು ಬಳಿಕ ತಾನೂ ನೇಣಿಗೆ ಶರಣಾದ ಘಟನೆ ನಡೆದಿದೆ.
ಪತ್ನಿ ಸೋನಾಲಿಗೆ ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ಖಾಸಗಿ ಬದುಕಿನ ಹಲವಾರು ವಿಚಾರಗಳನ್ನು ಪೋಸ್ಟ್ ಮಾಡಿ ಎಲ್ಲವನ್ನೂ ಬಟಾಬಯಲು ಮಾಡುವ ಹುಚ್ಚು ವಿಪರೀತವಾಗಿತ್ತು. ಇದರಿಂದ ವೃತ್ತಿಯಲ್ಲಿ ಟೆಕ್ಕಿಯಾಗಿರುವ ಪತಿ, 34ರ ಹರೆಯದ ರಾಕೇಶ್ ಗಣಗುರ್ಡೆಗೆ ವಿಪರೀತ ಕೋಪ ಬಂದಿತ್ತು. ಈ ಕೋಪವೇ ಪತ್ನಿಯ ಕೊಲೆ ಮತ್ತು ಸ್ವಂತದ ಆತ್ಮಹತ್ಯೆಗೆ ಹೇತುವಾಯಿತು.
28ರ ಹರೆಯದ ಸೋನಾಲಿಯನ್ನು ನಾಲ್ಕು ವರ್ಷಗಳ ಹಿಂದೆ ರಾಕೇಶ್ ಮದುವೆಯಾಗಿದ್ದ. ಈ ದಂಪತಿಗೆ ಮಕ್ಕಳಾಗಿಲ್ಲ. ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ದಾಂಪತ್ಯ ಬದುಕಿನ ಎಲ್ಲ ಖಾಸಗಿ ವಿಚಾರಗಳನ್ನು ಪೋಸ್ಟ್ ಮಾಡುವ ಸೋನಾಲಿಯ ಖಯಾಲಿಯಿಂದ ರಾಕೇಶ್ ಕ್ರುದ್ಧಗೊಂಡಿದ್ದ. ಈ ಬಗ್ಗೆ ದಿನನಿತ್ಯವೂ ದಂಪತಿಯಲ್ಲಿ ಜಗಳ ಉಂಟಾಗುತ್ತಿತ್ತು.
ರಾಕೇಶ್ ಬರೆದಿಟ್ಟಿದ್ದ ಡೆತ್ ನೋಟ್‌ನಲ್ಲಿ ಪತ್ನಿ ಸೊನಾಲಿಯ ಬಗ್ಗೆ ಆತ ತುಂಬಾ ಅಸಂತೃಪ್ತನಾಗಿದ್ದುದು ವ್ಯಕ್ತವಾಗಿದೆ. ದಾಂಪತ್ಯದ ಬಗೆಗಿನ ಖಾಸಗಿ ವಿಚಾರಗಳನ್ನು ತನ್ನ ಸ್ನೇಹಿತೆಯರಲ್ಲಿ ಹಾಗೂ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಳ್ಳುವ ಖಯಾಲಿ ಆಕೆಗೆ ವಿಪರೀತವಿತ್ತು. ಇದರಿಂದ ರಾಕೇಶ್ ಸಿಟ್ಟಿಗೆದಿದ್ದ.
ಸೊನಾಲಿಯ ಸಹೋದರ ಬುಧವಾರ ರಾತ್ರಿ ರಾಕೇಶ್‌ನ ಮನೆಗೆ ಭೇಟಿಕೊಟ್ಟಾಗಲೇ ಅವರಿಬ್ಬರ ಶವಗಳನ್ನು ಮನೆಯಲ್ಲಿ ಕಂಡು ಹೈರಾಣಾಗಿದ್ದ. ನಾಶಿಕ್‌ನಿಂದ ಸೊನಾಲಿಯ ತಾಯಿ ಹಲವಾರು ಬಾರಿ ಮಗಳಿಗೆ ಫೋನ್ ಮಾಡಿದ್ದಳು. ಆದರೆ ಈ ಕಡೆಯಿಂದ ಮಗಳ ಉತ್ತರವಿಲ್ಲದೆ ಕಂಗಾಲಾಗಿದ್ದಳು. ಆದ್ದರಿಂದ ಆಕೆ ತನ್ನ ಪುತ್ರರಿಗೆ ಫೋನ್ ಮಾಡಿ, ಅವರ ಸಹೋದರಿಯ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಕೋರಿದ್ದಳು.
ರಾಕೇಶ್ – ಸೋನಾಲಿ ವಾಸ್ತವ್ಯದ ಅಪಾರ್ಟ್‌ಮೆಂಟ್ ಒಳಗಡೆಯಿಂದ ಲಾಕ್ ಆಗಿತ್ತು. ಒಡನೆಯೇ ಸೋನಾಲಿಯ ಸಹೋದರ ಪೊಲೀಸರನ್ನು ಕರೆಸಿಕೊಂಡಿದ್ದ. ಬಾಗಿ ಲು ಒಡೆದು ಒಳಗೆ ಹೋದಾಗ ಅಲ್ಲಿ ರಾಕೇಶ್ – ಸೋನಾಲಿಯ ಶವಗಳು ಕಂಡುಬಂದವು.
ವಿಜ್ಞಾನ ಹಾಗೂ ಎಂಬಿಎ ಪದವೀಧರನಾಗಿರುವ ರಾಕೇಶ್ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ. ಪತ್ನಿ ಸೋನಾಲಿ ಕಂಪ್ಯೂಟರ್ ಇಂಜಿನಿಯರ್ ಆಗಿದ್ದು ಕೆಲವು ತಿಂಗಳ ಹಿಂದೆಯೇ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.