ಗರ್ಭಕೋಶ ಕಸಿಗೆ ಪುಣೆ ಸಜ್ಜು
Team Udayavani, Apr 23, 2017, 3:45 AM IST
ಮುಂಬೈ: ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನು ಮೂರೇ ವಾರಗಳಲ್ಲಿ ಗರ್ಭಕೋಶ ಕಸಿಯನ್ನು ಯಶಸ್ವಿಯಾಗಿ ಪೂರೈಸುವ ಭಾರತದ ಕನಸು ನನಸಾಗಲಿದೆ.
ಅಷ್ಟೇ ಅಲ್ಲ, ತಮ್ಮದೇ ತಾಯಂದಿರ ಗರ್ಭಗಳನ್ನು ತಮ್ಮ ಶರೀರದೊಳಗೆ ಅಳವಡಿ ಸಲು ಅವಕಾಶ ಕೊಟ್ಟ ಮೂವರು ಮಹಿಳೆ ಯರ ಕರುಳ ಕುಡಿಗಳನ್ನು ಪಡೆವ ಆಸೆಯೂ ನೆರವೇರಲಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಗರ್ಭಕೋಶ ಕಸಿ ಶಸ್ತ್ರಚಿಕಿತ್ಸೆಯನ್ನು ನಡೆಸಲು ಪುಣೆ ಆಸ್ಪತ್ರೆ ಸಜ್ಜಾಗಿದೆ. ವಿವಿಧ ಆರೋಗ್ಯ ಸಮಸ್ಯೆಯಿಂದ ಗರ್ಭಾಶಯವನ್ನು ಕಳೆದುಕೊಂಡ ಮೂವರು ಮಹಿಳೆಯರಿಗೆ ವೈದ್ಯರು ಗರ್ಭಕೋಶದ ಕಸಿ ಮಾಡಲಿದ್ದಾರೆ. ಮೂವರಿಗೂ ತಮ್ಮ ತಮ್ಮ ಅಮ್ಮಂದಿರ ಗರ್ಭಗಳನ್ನು ಜೋಡಿಸಲಾಗುತ್ತದೆ.
ಈವರೆಗೆ ಜಗತ್ತಿನಾದ್ಯಂತ ಇಂಥ 25 ಶಸ್ತ್ರ ಚಿಕಿತ್ಸೆಗಳು ನಡೆದಿದ್ದು, ಈ ಪೈಕಿ 10ಕ್ಕೂ ಕಡಿಮೆ ಸಂಖ್ಯೆಯವು ಯಶಸ್ವಿಯಾಗಿ, ಮಹಿಳೆ ಗರ್ಭ ಧರಿಸಲು ಸಾಧ್ಯವಾಗಿದೆ. ಮೇ 13, 14ರಂದು ಪುಣೆಯಲ್ಲೂ ಇಂಥ ಪ್ರಯತ್ನ ನಡೆಯಲಿದೆ. “2014ರಲ್ಲಿ ಸ್ವೀಡನ್ನಲ್ಲಾದ ಕಸಿಯ ಯಶಸ್ಸು ನಮಗೆ ಸ್ಫೂರ್ತಿ ನೀಡಿದೆ. ಹಾಗಾಗಿ, ಈ ಸವಾಲನ್ನು ಸ್ವೀಕರಿಸಿ ದ್ದೇವೆ. ಸ್ವೀಡನ್ಗೆ ಹೋಗಿ ಅಲ್ಲಿನ ವೈದ್ಯರ ತಂಡದ ಜತೆ ಸಮಾಲೋಚನೆಯನ್ನೂ ನಡೆಸಿ ದ್ದೇವೆ,’ ಎಂದಿದ್ದಾರೆ ಜಿಸಿಎಲ್ಐ ವೈದ್ಯಕೀಯ ನಿರ್ದೇಶಕ ಶೈಲೇಶ್ ಪುಂಟಂಬೇಕರ್.
ಇತ್ತೀಚೆಗೆ ಬೆಂಗಳೂರಿನ ಮಿಲನ್ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟ್ರೈನಿಂಗ್ ಆ್ಯಂಡ್ ರಿಸರ್ಚ್ ಇನ್ ರಿಪ್ರೊಡಕ್ಟಿವ್ ಹೆಲ್ತ್ ಸಂಸ್ಥೆಗೂ ಗರ್ಭಕೋಶ ಕಸಿಗೆ ಅನುಮತಿ ದೊರೆತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.