Pune;139 ಕೋ. ರೂ. ಮೌಲ್ಯದ ಚಿನ್ನ ವಶ; ಇಬ್ಬರ ಬಂಧನ
Team Udayavani, Oct 26, 2024, 1:30 AM IST
ಪುಣೆ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆ ಯಲ್ಲಿ ನೀತಿಸಂಹಿತೆ ಜಾರಿಯಲ್ಲಿದ್ದು, ಚುನಾವಣ ಅಕ್ರಮಗಳನ್ನು ತಡೆಗಟ್ಟಲು ರಾಜ್ಯದ ವಿವಿಧೆಡೆ ಪೊಲೀಸರು ನಾಕಾಬಂಧಿ ನಡೆಸಿ ತಪಾಸಣೆಗಳನ್ನು ನಡೆಸುತ್ತಿದ್ದಾರೆ. ಶುಕ್ರವಾರ ಪುಣೆಯ ಸತಾರಾ ರಸ್ತೆಯಲ್ಲಿ ಟೆಂಪೋವನ್ನು ತಪಾಸಣೆ ನಡೆಸಿದಾಗ ಅದರಲ್ಲಿ ಪತ್ತೆಯಾದ 139 ಕೋ. ರೂ. ಮೌಲ್ಯದ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತಪಾಸಣೆ ಸಂದರ್ಭ ಟೆಂಪೋದಲ್ಲಿ ಬಿಳಿ ಗೋಣಿಚೀಲವೊಂದರಲ್ಲಿ ಮುಚ್ಚಿಡಲಾಗಿದ್ದ ಪೆಟ್ಟಿಗೆ ಯಲ್ಲಿ ಈ ಚಿನ್ನ ಪತ್ತೆಯಾಗಿದೆ. ಈ ಟೆಂಪೋ ಖಾಸಗಿ ಲಾಜಿಸ್ಟಿಕ್ ಕಂಪೆನಿಗೆ ಸೇರಿದ್ದೆನ್ನಲಾಗಿದ್ದು ಟೆಂಪೋ ದಲ್ಲಿದ್ದ ಚಾಲಕ ಮತ್ತು ಸಹಾಯಕನನ್ನು ಬಂಧಿಸಲಾ ಗಿದೆ. ಚಿನ್ನದ ವಾರಸುದಾರನ ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.