Video; ಮಗುವನ್ನು ರಕ್ಷಿಸಲು ಮೆಟ್ರೋ ಹಳಿಗಳ ಮೇಲೆ ಹಾರಿದ ಮಹಿಳೆ
Team Udayavani, Jan 20, 2024, 11:20 AM IST
ಪುಣೆ: ಮಹಿಳೆಯೊಬ್ಬರು ಮಗುವನ್ನು ರಕ್ಷಿಸಲು ಮೆಟ್ರೋ ಹಳಿಗಳ ಮೇಲೆ ಹಾರಿದ ಘಟನೆ ಪುಣೆಯಲ್ಲಿ ನಡೆದಿದೆ.
ಪುಣೆಯ ಸಿವಿಲ್ ಕೋರ್ಟ್ ಮೆಟ್ರೋ ಸ್ಟೇಷನ್‌ನಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಗುವನ್ನು ರಕ್ಷಿಸಲು ಹಳಿಗಳ ಮೇಲೆ ಹಾರಿದ್ದನ್ನು ಕಾಣಬಹುದು.
ಪ್ಲಾಟ್‌ಫಾರ್ಮ್‌ನಲ್ಲಿ ಓಡುತ್ತಿದ್ದ ಮಗು ಅಂಚಿನಲ್ಲಿ ಜಾರಿ ಹಳಿಗಳ ಮೇಲೆ ಬಿದ್ದಿತು.
ಮಹಿಳೆಗೆ ಸಹಾಯ ಮಾಡಲು ಜನರ ಗುಂಪು ಧಾವಿಸುತ್ತಿದ್ದಂತೆ, ನಿಲ್ದಾಣದ ಭದ್ರತಾ ಸಿಬ್ಬಂದಿ ವಿಕಾಸ್ ಬಂಗಾರ್ ತುರ್ತು ಗುಂಡಿಯನ್ನು ಒತ್ತಿ, ಬರುತ್ತಿದ್ದ ರೈಲನ್ನು ನಿಲ್ಲಿಸಿದರು. ಮೆಟ್ರೋ ನಿಲ್ದಾಣದಿಂದ ಕೇವಲ 30 ಮೀಟರ್ ದೂರದಲ್ಲಿ ರೈಲು ನಿಂತಿತ್ತು
*Bravery of guard saved child’s life*
Pune 19th January 2024,
At 2:22pm , A young child of 3 years old fall on metro track on platform no.2 however the brave guard of metro station*VIKAS BANGAR* swiftly operated to emergency train stop button and saved life. #Metro #PuneMetro pic.twitter.com/wVkqCIcbWH
— Shoaib (N.D.F) (@Shoaib46426808) January 20, 2024
ಘಟನೆಯಲ್ಲಿ ಯಾವುದೇ ಗಾಯಗಳು ವರದಿಯಾಗಿಲ್ಲ.
ನಂತರ, ಜನರು ಚಿಕ್ಕ ಮಕ್ಕಳೊಂದಿಗೆ ಪ್ರಯಾಣಿಸುವಾಗ ಜಾಗರೂಕರಾಗಿರಬೇಕು ಎಂದು ಪುಣೆ ಮೆಟ್ರೋ ಮನವಿ ಮಾಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.