ಪಂಜಾಬ್ ಶೇ.70, ಗೋವಾ ಶೇ.83 ಮತದಾನ
Team Udayavani, Feb 5, 2017, 3:45 AM IST
ಚಂಡೀಗಢ/ ಪಣಜಿ: ಪಂಚರಾಜ್ಯ ಚುನಾವಣೆಯ ಮೊದಲ ಹಂತವಾಗಿ ಪಂಜಾಬ್ ಮತ್ತು ಗೋವಾದಲ್ಲಿ ಯಶಸ್ವಿ ಮತದಾನವಾಗಿದೆ. ಪಂಜಾಬ್ನ 115, ಗೋವಾ 40 ವಿಧಾನಸಭಾ ಕ್ಷೇತ್ರದಲ್ಲಿ ಕ್ರಮವಾಗಿ ಶೇ.83 ಹಾಗೂ ಶೇ.70ರಷ್ಟು ಮತದಾನ ನಡೆದಿದೆ.
ಆಪ್- ಕಾಂಗ್ರೆಸ್ ಮಾರಾಮಾರಿ: ಪಂಜಾಬ್ನ ಸಂಗ್ರೂರ್ ಜಿಲ್ಲೆಯ ಸುಲ್ತಾನ್ಪುರದಲ್ಲಿ ಆಪ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಭೆ ನಡೆದಿದ್ದು, ಇಬ್ಬರು ವ್ಯಕ್ತಿಗಳಿಗೆ ಗಾಯವಾಗಿದ್ದು, ಒಂದು ಕಾರು ಜಖಂ ಆಗಿದೆ. ಇನ್ನೊಂದೆಡೆ ಟಾರ್ನ್ ಟರನ್ ಜಿಲ್ಲೆಯ ಲಾಲು ಗುಲಾಮ್ ಹಳ್ಳಿಯಲ್ಲಿ ಅಕಾಲಿ ದಳ ಕಾರ್ಯಕರ್ತ ಬೂತ್ನ ಹೊರಗಡೆ ಗುಂಡು ಹಾರಿಸಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತನಿಗೆ ಸಣ್ಣಪುಟ್ಟ ಗಾಯವಾಗಿದೆ.
ಕೈಕೊಟ್ಟ ವಿವಿಪ್ಯಾಟ್: ಪಂಜಾಬ್ ಚುನಾವಣೆಧಿಯಲ್ಲಿ ಇದೇ ಮೊದಲ ಬಾರಿಗೆ ಪ್ರಮಾಣಿಸಿದ ಕಾಗದದ ಆಡಿಟ್ ಟ್ರಯಲ್ (ವಿವಿಪ್ಯಾಟ್) ಮತಯಂತ್ರಗಳನ್ನು ನಿಯೋಜಿಸಲಾಗಿತ್ತು. ಅವು ಕೈಕೊಟ್ಟ ಹಿನ್ನೆಲೆಯಲ್ಲಿ ಮಜಿತಾ ಮತ್ತು ಸಂಗ್ರೂರ್ನಲ್ಲಿ ಮತದಾರರು ಕೆಲ ಕಾಲ ತೊಂದರೆ ಅನುಭವಿಸಿದರು.
ಗೋವಾದಲ್ಲಿ ಶಾಂತಿಯುತ: ಗೋವಾದಲ್ಲಿ ಮತದಾನ ಸಂಪೂರ್ಣ ಶಾಂತಿಯುತವಾಗಿದ್ದು, 11.10 ಲಕ್ಷ ಮಂದಿ 250 ಅಭ್ಯರ್ಥಿಗಳ ಭವಿಷ್ಯ ಬರೆದಿದ್ದಾರೆ. ಪಣಜಿಯಲ್ಲಿ ಬೂತ್ ಹೊರಗಡೆ ಕ್ಯೂನಲ್ಲಿ ನಿಂತಿದ್ದ 78 ವರ್ಷದ ವೃದ್ಧ ಕುಸಿದುಬಿದ್ದು, ಹೃದಯಾಘಾತದಿಂದ ಅಸುನೀಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್ಶೂಟರ್ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.