ಪಂಜಾಬ್ : ಜುಲೈ 26 ರಿಂದ SSLC, ಪದವಿ ಪೂರ್ವ ಕಾಲೇಜುಗಳ ತರಗತಿಗಳು ಆರಂಭ
Team Udayavani, Jul 20, 2021, 5:03 PM IST
ಪಂಜಾಬ್ : ಕೋವಿಡ್ ಸೋಂಕಿನ ಎರಡನೇ ಅಲೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಬರುವ ಸೋಮವಾರ (ಜುಲೈ 26) ರಿಂದ ಎಸ್ ಎಸ್ ಎಲ್ ಸಿ ಹಾಗೂ ಪದವಿ ಪೂರ್ವ ಕಾಲೇಜುಗಳ ಭೌತಿಕ ತರಗತಿಗಳನ್ನು ಪುನರಾರಂಭಿಸುವಂತೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಇಂದು( ಮಂಗಳವಾರ, ಜುಲೈ 20) ಆದೇಶ ಹೊರಡಿಸಿದ್ದಾರೆ.
ಕೋವಿಡ್ ಸೋಂಕಿನ ಪ್ರಕರಣಗಳು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಕೆಲವು ಕ್ಷೇತ್ರಗಳಿಗೆ ನಿರ್ಬಂಧಗಳನ್ನು ತೆರವುಗೊಳಿಸಿದ್ದಾರೆ.
ಒಳಾಂಗಣ ಸಭೆಯಲ್ಲಿ 150 ಮಂದಿ ಹಾಗೂ ಹೊರಾಂಗಣ ಸಭೆ ಸಮಾರಂಭಗಳಲ್ಲಿ 300 ಮಂದಿ ಕೋವಿಡ್ ರಾಜ್ಯ ಮಾರ್ಗಸೂಚಿಗಳನ್ವಯ ಭಾಗವಹಿಸುವುದಕ್ಕೆ ಅನುಮತಿ ನೀಡಲಾಗಿದೆ.
ಇದನ್ನೂ ಓದಿ : ಇನ್ನು ಮುಂದೆ ಬೆಳೆ ವಿಮೆಗೂ ನಾಮಿನಿ ಮಾಡಿಸಿಕೊಳ್ಳಬೇಕು: ಬಿ.ಸಿ.ಪಾಟೀಲ್
ರಾಜ್ಯದಲ್ಲಿ ಕೋವಿಡ್ ಸೋಂಕಿನ ಪಾಸಿಟಿವಿಟಿ ದರ ಇಳಿಕೆಯಾಗಿದ್ದು, ಎಸ್ ಎಸ್ ಎಲ್ ಸಿ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳ ಭೌತಿಕ ತರಗತಿಗಳನ್ನು ಪುನರಾರಂಭಿಸಬಹುದೆಂದು ಆದೇಶಿಸಿದ್ದಾರೆ. ಆದರೇ, ಶಾಲಾ ಕಾಲೇಜುಗಳ ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಎರಡೂ ಡೋಸ್ ಲಸಿಕೆಗಳನ್ನು ಪಡೆದಿರಬೇಕು ಎಂದು ಸೂಚಿಸಲಾಗಿದೆ.
ಪರಿಸ್ಥಿತಿ ಇದೇ ರೀತಿ ಮುಂದುವರಿದರೇ, ಉಳಿದ ತರಗತಿಗಳನ್ನೂ ಕೂಡ ಆಗಸ್ಟ್ 2 ರಿಂದ ಪುನರಾಂಭಿಸಬಹುದು ಎಂದು ಅವರು ಹೇಳಿದ್ದಾರೆ.
ಇನ್ನು, ರಾಜ್ಯ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಸಂಗೀತ ರಸ ಸಂಜೆ ಹಾಗೂ ಲಲಿತ ಕಲೆಗಳ ಪ್ರದರ್ಶನ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡವುದಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದಿದ್ದಾರೆ.
ರಾಜ್ಯದ ಕೋವಿಡ್ ನಿಯಮಾವಳಿಗಳನ್ನು ಅನುಸರಿಸಿಕೊಂಡು ಶೇಕಡಾ 50 ರಷ್ಟು ಬಾರ್ ಗಳು, ಸಿನೆಮಾ ಹಾಲ್ ಗಳು, ರೆಸ್ಟೋರೆಂಟ್ ಗಳು, ಸ್ಪಾಗಳು, ಈಜುಕೊಳಗಳು, ತರಬೇತಿ ಕೇಂದ್ರಗಳು, ಕ್ರೀಡಾ ಸಂಕೀರ್ಣಗಳು, ಜಿಮ್ ಗಳು, ಮಾಲ್ ಗಳು, ವಸ್ತುಸಂಗ್ರಹಾಲಯಗಳು, ಮೃಗಾಲಯಗಳು ಇತ್ಯಾದಿಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದೆ.
ಕಾಲೇಜುಗಳು, ಕೋಚಿಂಗ್ ಕೇಂದ್ರಗಳು ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಇದೇ ರೀತಿಯ ಅನುಸರಣೆಯೊಂದಿಗೆ ತೆರೆಯಲು ಅವರು ಈ ಹಿಂದೆಯೇ ಅನುಮತಿ ನೀಡಿದ್ದರು.
ಇದನ್ನೂ ಓದಿ : ಮಂಗಳೂರು: ಆಂಬುಲೆನ್ಸ್ ಗೆ ದಾರಿ ಬಿಡದ ಕಾರು; ಚಾಲಕನ ಬಂಧನ, ಕಾರು ಪೊಲೀಸರ ವಶಕ್ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.