ಸ್ಪೀಕರ್ ಸ್ಥಾನಕ್ಕೆ ಪುರಂದೇಶ್ವರಿ? ಟಿಡಿಪಿ, ಜೆಡಿಯುನಿಂದಲೂ ಈ ಹುದ್ದೆ ಮೇಲೆ ಕಣ್ಣು
Team Udayavani, Jun 11, 2024, 7:10 AM IST
ಹೊಸದಿಲ್ಲಿ: ಕೇಂದ್ರ ಸಂಪುಟ ಸಚಿವರ ಪ್ರಮಾಣವಚನ ಸ್ವೀಕಾರದ ಬೆನ್ನಲ್ಲೇ 18ನೇ ಲೋಕಸಭೆಯ ಸ್ಪೀಕರ್ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಎನ್‌ಡಿಎಯ ಪ್ರಮುಖ ಪಕ್ಷಗಳಾದ ಟಿಡಿಪಿ ಮತ್ತು ಜೆಡಿಯು ಕೂಡ ಈ ಹುದ್ದೆಯ ಮೇಲೆ ಕಣ್ಣಿರಿಸಿವೆ. ಆದರೆ ಆಂಧ್ರಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷೆ ಡಿ. ಪುರಂದೇಶ್ವರಿ ಈ ಸ್ಥಾನವನ್ನು ಅಲಂಕರಿಸುವ ಸಾಧ್ಯತೆಗಳು ದಟ್ಟವಾಗಿವೆ.
ಆಂಧ್ರದ ಮಾಜಿ ಸಿಎಂ ಎನ್‌ಟಿಆರ್ ಅವರ ಪುತ್ರಿಯೂ ಆಗಿರುವ ಪುರಂದೇಶ್ವರಿ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರ ಸಂಬಂಧಿಯೂ ಹೌದು. ಆಂಧ್ರದಲ್ಲಿ ಟಿಡಿಪಿ-ಜನಸೇನಾ-ಬಿಜೆಪಿ ಮೈತ್ರಿ ಸಾಧಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ರಾಜಮಂಡ್ರಿ ಕ್ಷೇತ್ರದಿಂದ ಆಯ್ಕೆಯಾಗಿರುವ ಅವರು ಈ ಹಿಂದೆ 2004ರಿಂದ 2014ರ ವರೆಗೆ ಕಾಂಗ್ರೆಸ್‌ನಲ್ಲಿದ್ದರು. ಬಳಿಕ ಬಿಜೆಪಿ ಸೇರಿದ್ದರು.
ಪುರಂದೇಶ್ವರಿ ಆಯ್ಕೆಯ ಮೂಲಕ ಟಿಡಿಪಿಯನ್ನು ಸುಮ್ಮನಾಗಿಸುವ ತಂತ್ರವನ್ನು ಬಿಜೆಪಿ ಹೆಣೆದಿದೆ ಎಂದು ವಿಶ್ಲೇಷಿಸ ಲಾಗುತ್ತಿದೆ. ಪುರಂದೇಶ್ವರಿ ಲೋಕಸಭಾ ಸ್ಪೀಕರ್ ಆದರೆ ಈ ಹುದ್ದೆಯನ್ನು ಪಡೆದ ಆಂಧ್ರ ಪ್ರದೇಶದ ಎರಡನೇ ಸಂಸದೆ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ. ಆದರೆ ಇದ್ಯಾವುದೂ ಖಚಿತ ವಾಗಿಲ್ಲ.
ಹಾಗಾಗಿ ಸ್ಪೀಕರ್ ಯಾರು ಎಂಬ ಕುತೂಹಲ ಮುಂದುವರಿದಿದೆ. ಟಿಡಿಪಿ ಮತ್ತು ಜೆಡಿಯು ಎರಡೂ ಈ ಹುದ್ದೆಯ ಮೇಲೆ ಕಣ್ಣಿಟ್ಟಿರುವುದರಿಂದ ಹೆಚ್ಚಿನ ಮಹತ್ವ ಬಂದಿದೆ.
ಟಿಡಿಪಿಯ ರಾಮಮೋಹನ್ ನಾಯ್ಡು, ಜಿಎಂಸಿ ಬಾಲಯೋಗಿ ಅವರ ಪುತ್ರ ಜಿ.ಎಂ. ಹರೀಶ್ ಮಧುರ್ ಹೆಸರುಗಳೂ ಸ್ಪೀಕರ್ ಸ್ಥಾನಕ್ಕೆ ಕೇಳಿಬರುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾ*ಚಾರ!
Jammu Kashmir: ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರ ಹತ್ಯೆ
Drone; ಸ್ತ್ರೀ ಸಶಕ್ತೀಕರಣಕ್ಕೆ ನಮೋ ಡ್ರೋನ್ ದೀದಿಗೆ ಕೇಂದ್ರ ಸರಕಾರ ಚಾಲನೆ
MUST WATCH
ಹೊಸ ಸೇರ್ಪಡೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Abhimanyu Kashinath; ಸೂರಿ ಲವ್ ಗೆ ಉಪ್ಪಿ ಮೆಚ್ಚುಗೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.