Puri ಜಗದ್ವಿಖ್ಯಾತ ಜಗನ್ನಾಥ ರಥಯಾತ್ರೆ ಆರಂಭ; ಸಾಕ್ಷಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು
ಐದು ದಶಕಗಳ ಬಳಿಕ ಎರಡು ದಿನಗಳ ಉತ್ಸವ
Team Udayavani, Jul 7, 2024, 7:17 PM IST
ಪುರಿ(ಒಡಿಶಾ) : ವಾರ್ಷಿಕ ಭಗವಾನ್ ಜಗನ್ನಾಥ ರಥಯಾತ್ರೆಯು ಒಡಿಶಾದ ಕಡಲತೀರದ ಯಾತ್ರಿಕ ಪಟ್ಟಣವಾದ ಪುರಿಯಲ್ಲಿ ಭಾನುವಾರ ಪ್ರಾರಂಭವಾಗಿದೆ. 1971ರ ನಂತರ ಮೊದಲ ಬಾರಿಗೆ ಈ ವರ್ಷ ಎರಡು ದಿನಗಳ ಉತ್ಸವ ನಡೆಯುತ್ತಿದೆ. ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ರಥಗಳಿಗೆ ಪೂಜೆ ಸಲ್ಲಿಸಿದ ಬಳಿಕ ಸಂಜೆ 5.30ಕ್ಕೆ ರಥಗಳ ಮೆರವಣಿಗೆ ಆರಂಭವಾಯಿತು.
ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ರಘುಬರ್ ದಾಸ್, ಒಡಿಶಾ ಸಿಎಂ ಮೋಹನ್ ಮಾಝೀ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಥವನ್ನೆಳೆದು ಯಾತ್ರೋತ್ಸವಕ್ಕೆ ಚಾಲನೆ ನೀಡಿದ್ದಾರೆ.
ರಥಗಳಿಗೆ ರಾಷ್ಟ್ರಪತಿ ಮುರ್ಮು ಅವ ರು ಪ್ರದಕ್ಷಿಣೆ ಹಾಕಿ, ಪೂಜೆ ಸಲ್ಲಿಸಿದರು.
ಮುಖ್ಯಮಂತ್ರಿ ಮೋಹನ್ ಮಾಝಿ ನೇತೃತ್ವದ ಒಡಿಶಾ ಸರಕಾರ ದ್ರೌಪದಿ ಮುರ್ಮು ಅವರ ಭೇಟಿಗೆ ವಿಶೇಷ ವ್ಯವಸ್ಥೆ ಮಾಡಿತ್ತು.
ಸಾಮಾನ್ಯವಾಗಿ ಒಂದೇ ದಿನ ಆಯೋಜಿಸಲಾಗುವ ರಥಯಾತ್ರೆ ಈ ವರ್ಷ ಈ ಬಾರಿ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಲೆಕ್ಕಾಚಾರದ ಅನ್ವಯ 2 ದಿನದ ಯಾತ್ರೆ ನಡೆಯುತ್ತಿದೆ. ಇದಕ್ಕೂ ಮುನ್ನ 53 ವರ್ಷಗಳ ಹಿಂದೆ ಅಂದರೆ 1971ರಲ್ಲಿ ಇದೇ ರೀತಿ 2 ದಿನಗಳ ಕಾಲ ರಥಯಾತ್ರೆ ನಡೆದಿತ್ತು.ಸಂಪ್ರದಾಯಕ್ಕೆ ಹೊರತಾಗಿ, ಹಬ್ಬಕ್ಕೆ ಸಂಬಂಧಿಸಿದ ಕೆಲವು ಆಚರಣೆಗಳು ಒಂದೇ ದಿನದಲ್ಲಿ ನಡೆಯಲಿವೆ.
ರಥಯಾತ್ರೆಯ ಆಕರ್ಷಣೆ ಭಗವಾನ್ ವಿಷ್ಣುವಿನ ಅವತಾರ ಜಗನ್ನಾಥನಿಗೆ(ಕೃಷ್ಣ) ಸಮರ್ಪಿತವಾದ ಮಹತ್ವದ ಹಿಂದೂ ಹಬ್ಬವಾಗಿದೆ. ಉತ್ಸವದ ವೇಳೆ ಜಗನ್ನಾಥನ ವಿಗ್ರಹಗಳನ್ನು ಅವನ ಒಡಹುಟ್ಟಿದ ಭಗವಾನ್ ಬಲಭದ್ರ ಮತ್ತು ಸುಭದ್ರ ದೇವಿಯ ಜತೆಗೆ ಭವ್ಯವಾದ ರಥಗಳ ಮೇಲೆ ಇರಿಸಲಾಗುತ್ತದೆ. ಲಕ್ಷಾಂತರ ಭಕ್ತರು ಬೀದಿಗಳಲ್ಲಿ ರಥಗಳನ್ನುಎಳೆಯುತ್ತಾರೆ. ಈ ಮೆರವಣಿಗೆಯು ಜಗನ್ನಾಥ ದೇವಾಲಯದಿಂದ ಪ್ರಾರಂಭವಾಗಿ ಸುಮಾರು 3 ಕಿಲೋಮೀಟರ್ ದೂರದ ಗುಂಡಿಚಾ ದೇವಾಲಯದಲ್ಲಿ ಕೊನೆಗೊಳ್ಳುತ್ತದೆ.
ಈ ಆಚರಣೆಗಳಲ್ಲಿ ‘ನಬಜೌಬನ್ ದರ್ಶನ’ ಮತ್ತು ‘ನೇತ್ರ ಉತ್ಸವ’ ಸೇರಿವೆ, ಇವುಗಳನ್ನು ಸಾಮಾನ್ಯವಾಗಿ ರಥಯಾತ್ರೆಯ ಮುಂಚೆ ನಡೆಸಲಾಗುತ್ತದೆ.
ಭದ್ರತಾ ವ್ಯವಸ್ಥೆಗಳು
ಉತ್ಸವವನ್ನು ಸುಗಮವಾಗಿ ಮತ್ತು ಸಮಯೋಚಿತವಾಗಿ ನಡೆಸಲು ಒಡಿಶಾ ಸರಕಾರ ಭಾರೀ ಭದ್ರತಾ ವ್ಯವಸ್ಥೆಗಳನ್ನು ಮಾಡಿದೆ.
“ಎಲ್ಲಾ ಧಾರ್ಮಿಕ ಕ್ರಿಯೆಗಳು ಸುಗಮವಾಗಿ ನಡೆಯುತ್ತಿವೆ, ಭಗವಾನ್ ಜಗನ್ನಾಥನ ಆಶೀರ್ವಾದದೊಂದಿಗೆ, ಎಲ್ಲಾ ಇತರ ಧಾರ್ಮಿಕ ಕ್ರಿಯೆಗಳನ್ನು ಸಹ ಕ್ರಮ ಪ್ರಕಾರ ಪ್ರಕಾರ ನಡೆಸಲಾಗುತ್ತಿದೆ ” ಎಂದು ಪುರಿ ಜಿಲ್ಲಾಧಿಕಾರಿ ಸಿದ್ಧಾರ್ಥ್ ಶಂಕರ್ ಸ್ವೈನ್ ಸುದ್ದಿ ಸಂಸ್ಥೆ PTI ಗೆ ತಿಳಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಜನಸಂದಣಿಯನ್ನು ನಿರ್ವಹಿಸಲು ರಾಜ್ಯ ಮತ್ತು ಕೇಂದ್ರ ಸರಕಾರಗಳ ಭದ್ರತಾ ಸಿಬಂದಿಗಳನ್ನೊಳಗೊಂಡ 180 ಪ್ಲಟೂನ್‌ಗಳನ್ನು (5400 ಮಂದಿ) ನಿಯೋಜಿಸಲಾಗಿದೆ ಎಂದು ಪುರಿ ಪೊಲೀಸ್ ವರಿಷ್ಠಾಧಿಕಾರಿ ಪಿನಾಕ್ ಮಿಶ್ರಾ ಹೇಳಿದ್ದಾರೆ.
ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು ವಿಐಪಿ ವಲಯ ನಿರ್ಮಾಣ ಮಾಡಿ ಒಡಿಶಾ ರಾಜ್ಯಪಾಲರು, ಮುಖ್ಯಮಂತ್ರಿ, ಕೇಂದ್ರ ಸಚಿವರು ಮತ್ತು ಇತರ ಗಣ್ಯರಿಗೆ ಬಫರ್ ವಲಯವನ್ನು ಯೋಜಿಸಲಾಗಿದೆ.
10ರಿಂದ 15 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷಿಸಲಾಗಿದ್ದು, ಅಗ್ನಿಶಾಮಕ ದಳದಿಂದಲೂ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದ ವಿವಿಧೆಡೆ ಹಾಗೂ ಸಮುದ್ರ ತೀರದಲ್ಲಿ ಒಟ್ಟು 46 ಆಧುನಿಕ ಅಗ್ನಿಶಾಮಕ ಟೆಂಡರ್‌ಗಳನ್ನು ನಿಯೋಜಿಸಲಾಗಿದೆ.
ಕಾಲ್ತುಳಿತ ಸ್ಥಿತಿಯಿಂದ ವ್ಯಕ್ತಿ ಗಂಭೀರ
ಯಾತ್ರೆ ಶುರುವಾದ ಕೆಲವೇ ಕ್ಷಣಗಳಲ್ಲಿ ಪುರಿಯಲ್ಲಿ ಕಾಲ್ತುಳಿತದ ಪರಿಸ್ಥಿತಿ ಎದುರಾಗಿದೆ. ರಥವನ್ನೆಳೆಯಲು ಭಕ್ತರು ಧಾವಿಸಿದ್ದರಿಂದ ನೂಕು ನುಗ್ಗಲು ಉಂಟಾಗಿ, ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಮೂಲ ಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.