ನೇರ ತೆರಿಗೆಯಲ್ಲಿ ಶೀಘ್ರ ಆಮೂಲಾಗ್ರ ಬದಲಾವಣೆ
Team Udayavani, Jun 3, 2019, 6:00 AM IST
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೊದಲ ಅವಧಿಯಲ್ಲಿ ಸರಕು ಮತ್ತು ಸೇವಾ ತೆರಿಗೆಯಂಥ ಮಹತ್ವದ ಬದಲಾವಣೆ ಮಾಡಲಾಗಿದ್ದು, ಎರಡನೇ ಅವಧಿಯಲ್ಲಿ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಪೂರ್ವ ತಯಾರಿಯನ್ನು ತ್ವರಿತಗೊಳಿಸುವಂತೆ ಹಣಕಾಸು ಸಚಿವಾಲಯವು ಈಗಾಗಲೇ ಸೂಚಿಸಿದೆ. 2017ರಲ್ಲಿ ರಚಿಸಲಾಗಿದ್ದ ರಾಜಸ್ವ ಜ್ಞಾನ ಸಂಗಮ ಎಂಬ ಸಮಿತಿ ಜುಲೈ ಅಂತ್ಯದಲ್ಲಿ ವರದಿ ನೀಡಲಿದ್ದು, ಇದನ್ನು ಆಧರಿಸಿ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಸಮಿತಿ 2018 ಮಾರ್ಚ್‌ನಲ್ಲೇ ವರದಿ ಸಲ್ಲಿಸಬೇಕಿತ್ತು. ಆದರೆ ವಿವಿಧ ಕಾರಣಗಳಿಂದ ವರದಿ ಸಲ್ಲಿಕೆಯಲ್ಲಿ ವಿಳಂಬವಾಗಿದೆ.
ಸದ್ಯ ನೇರ ತೆರಿಗೆ ಶೇ. 30ರವರೆಗೂ ಇದ್ದು, ಇದನ್ನು ಇಳಿಕೆ ಮಾಡುವುದು ಹಾಗೂ ಹೆಚ್ಚು ಜನರು ಆದಾಯ ತೆರಿಗೆಯನ್ನು ಪಾವತಿ ಮಾಡುವಂತೆ ಪ್ರೋತ್ಸಾಹಿಸುವುದು ಸರ್ಕಾರದ ಗುರಿಯಾಗಿದೆ. ಇನ್ನೊಂದೆಡೆ ತೆರಿಗೆ ಪಾವತಿ ಮಾಡದವರು ಮತ್ತು ಹಣಕಾಸು ಅಕ್ರಮ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದೂ ಈ ಕ್ರಮಗಳಲ್ಲಿ ಒಳಗೊಂಡಿರಲಿದೆ.
ಮಾರ್ಚ್ 31ಕ್ಕೆ ಕೊನೆಗೊಂಡ ವಿತ್ತ ವರ್ಷದಲ್ಲಿ ಒಟ್ಟು 11.18 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹವಾಗಿದೆ. ಸರ್ಕಾರ 12 ಲಕ್ಷ ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿತ್ತು. ದೇಶದ 130 ಕೋಟಿ ಜನರ ಪೈಕಿ 7.41 ಕೋಟಿ ಜನರು ನೇರ ತೆರಿಗೆ ಪಾವತಿ ಮಾಡುತ್ತಾರೆ. ಸದ್ಯ 10 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವವರಿಗೆ ಶೇ. 30ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಆರ್ಥಿಕ ಪ್ರಗತಿಯ ಉದ್ದೇಶ: ತೆರಿಗೆ ಇಳಿಕೆ ಮಾಡುವುದರಿಂದ ಹೆಚ್ಚಿನ ಜನರಿಗೆ ತೆರಿಗೆ ಪಾವತಿ ಮಾಡಲು ಪ್ರೋತ್ಸಾಹಿಸಿದಂತಾಗುತ್ತದೆ. ಇದರಿಂದ ಜನರಿಗೆ ವೆಚ್ಚ ಮಾಡಲು ಹೆಚ್ಚು ಹಣಸಿಗುತ್ತದೆ. ಇದರಿಂದ ಆರ್ಥಿಕ ಪ್ರಗತಿ ಸಾಧಿಸಬಹುದು ಎಂದು ಯೋಜಿÓಲಾಗಿದೆ. ಇತ್ತೀಚಿನ ವಿತ್ತ ವರದಿಯ ಪ್ರಕಾರ ಜನವರಿ-ಮಾರ್ಚ್ ತ್ತೈಮಾಸಿಕದಲ್ಲಿ ಜಿಡಿಪಿ ಶೇ. 5.8 ಕ್ಕೆ ಕುಸಿದಿದೆ. ಇದು 5 ವರ್ಷದಲ್ಲೇ ಕಡಿಮೆ ಎಂದೇ ಹೇಳಲಾಗಿದೆ.
ಸಮಿತಿ ವರದಿ ಆಧರಿಸಿ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತಂದು ಅನುಷ್ಠಾನಗೊಳಿಸುವ ಸಾಧ್ಯತೆಯಿದ್ದು, ಇದು ತೆರಿಗೆ ವ್ಯವಸ್ಥೆಯಲ್ಲಿ ಮತ್ತೂಂದು ಬದಲಾವಣೆಗೆ ಕಾರಣವಾಗಲಿದೆ. ಪರಿಣಿತರ ಪ್ರಕಾರ ತೆರಿಗೆಯನ್ನು ಗರಿಷ್ಠ ಶೇ. 25 ಕ್ಕೆ ನಿಗದಿಸುವ ಸಾಧ್ಯತೆಯಿದೆ. ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುವ ವರಿಗೆ ರಿಯಾಯಿತಿ ನೀಡುವ ಪ್ರಸ್ತಾವನೆ ಮಾಡುವ ಸಾಧ್ಯತೆಯಿದೆ. ಜಿಎಸ್‌ಟಿಯನ್ನು ಪ್ರಾಮಾಣಿಕವಾಗಿ ಪಾವತಿ ಮಾಡುವವರಿಗೆ ರಿಯಾಯಿತಿ ನೀಡುವ ಕುರಿತು ಚರ್ಚೆ ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.