100 ಮಾರ್ಗಗಳಲ್ಲಿ ಶೀಘ್ರ ವಿಶ್ವದರ್ಜೆ ರೈಲುಗಳ ಓಡಾಟ
Team Udayavani, Dec 13, 2019, 7:19 PM IST
ಸಾಂದರ್ಭಿಕ ಚಿತ್ರ.
ಹೊಸದಿಲ್ಲಿ: ಭಾರತದಲ್ಲೂ ವಿಶ್ವದರ್ಜೆಯ ರೈಲುಗಳು ಓಡಾಡಬೇಕೆನ್ನುವ ಕನಸು ಶೀಘ್ರ ನನಸಾಗಲಿದೆ. 100 ಮಾರ್ಗಗಳಲ್ಲಿ 150 ವಿಶ್ವದರ್ಜೆಯ ಪ್ರಯಾಣಿಕ ರೈಲುಗಳನ್ನು ಒಡಿಸಲು ಮಾರ್ಗಗಳನ್ನು ಗುತ್ತಿಗೆ ನೀಡಲು ರೈಲ್ವೇ ಇಲಾಖೆ ಮುಂದಾಗಿದೆ.
ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ರೈಲುಗಳು ಓಡಾಡಲಿದ್ದು, ರೈಲ್ವೇಯಲ್ಲಿ 22500 ಕೋಟಿ ರೂ. ಹೂಡಿಕೆ ಆಹ್ವಾನಿಸುವ ಆಶಾವಾದವನ್ನು ಹೊಂದಲಾಗಿದೆ.
ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರ ನೇತೃತ್ವದಲ್ಲಿ ಸಭೆ ನಡೆದ ಬಳಿಕ ರೈಲ್ವೇ ಮಂಡಳಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ರೈಲುಗಳನ್ನು ಓಡಿಸಲು ಖಾಸಗಿ ಹೂಡಿಕೆ ಆಹ್ವಾನಿಸಲು ನಿರ್ಧರಿಸಿದೆ. ಸದ್ಯ ಈ ಕುರಿತು ಪ್ರಸ್ತಾವನೆಯೊಂದನ್ನು ಅಂತಿಮಗೊಳಿಸಲಾಗಿದೆ.
ಹೂಡಿಕೆಗಾಗಿ ಟ್ರಾವೆಲ್ಸ್ ಕಂಪೆನಿಗಳು, ಇತರ ಕಂಪೆನಿಗಳು, ಟೂರ್ ಆಪರೇಟರ್‌ಗಳನ್ನು ಆಹ್ವಾನಿಸಲಾಗುತ್ತದೆ. ಕನಿಷ್ಠ 12 ರೈಲುಗಳಿಗೆ ಬಿಡ್‌ಗಳನ್ನು ಸಲ್ಲಿಸಬಹುದಾಗಿದ್ದು, ಗರಿಷ್ಠ 30 ರೈಲುಗಳಿಗೆ ಸಲ್ಲಿಸಬಹುದು. ಸದ್ಯ ದಿಲ್ಲಿ-ಲಕ್ನೋ ಮಧ್ಯೆ ಓಡಾಡುತ್ತಿರುವ ತೇಜಸ್ ಎಕ್ಸ್‌ಪ್ರೆಸ್ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಉತ್ತೇಜಿತವಾದ ರೈಲ್ವೇ ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ರೈಲುಗಳನ್ನು ಓಡಿಸಲು ಗುತ್ತಿಗೆ ನೀಡಲು ಮುಂದಾಗಿದೆ. ರೈಲು ಓಡಿಸಿ ಬಂದ ಒಟ್ಟು ಆದಾಯದಲ್ಲಿ ಕಂಪೆನಿಗಳು ರೈಲ್ವೇಗೆ ಪಾಲು ಕೊಡಬೇಕಾಗುತ್ತದೆ. ಪ್ರಸ್ತಾವ ಪ್ರಕಾರ, ರೈಲ್ವೇ ಮೂಲಸೌಕರ್ಯಗಳನ್ನು ಉಪಯೋಗಿಸಿದ್ದಕ್ಕಾಗಿ ರೈಲ್ವೇ ಶುಲ್ಕಗಳನ್ನು ವಿಧಿಸಲಿದೆ. 35 ವರ್ಷಗಳ ಗುತ್ತಿಗೆ ನೀಡಲೂ ನಿರ್ಧರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್ ಹೇಳಿಕೆ
MUST WATCH
ಹೊಸ ಸೇರ್ಪಡೆ
Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು
Karkala: ಪಶು ಗಣತಿಯಲ್ಲಿ ಬೆಕ್ಕುಗಳ ಅವಗಣನೆ !
Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್ ಫಿಕ್ಸ್
IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್ ಸೂರ್ಯವಂಶಿ
Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.