ಕ್ವಿಟ್ ಇಂಡಿಯಾ ಕಿಚ್ಚಿನಲ್ಲೇ ಕೋಮುವಾದ ತೊಲಗಿಸಿ
Team Udayavani, Jul 31, 2017, 8:40 AM IST
ಹೊಸದಿಲ್ಲಿ:”ನವ ಭಾರತ’ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸ ಬೇಕಿದೆ. ಕೋಮುವಾದ, ಜಾತಿವಾದ, ಭ್ರಷ್ಟಾಚಾರ, ಭಯೋತ್ಪಾದನೆ, ಬಡತನ ಹಾಗೂ ಕೆಟ್ಟದರ ವಿರುದ್ಧ ಒಗ್ಗಟ್ಟಿನಿಂದ ಧ್ವನಿಯೆತ್ತಿ, 2022ರ ಹೊತ್ತಿಗೆ ದೇಶ ಇವೆಲ್ಲದರಿಂದ ಮುಕ್ತಿ ಹೊಂದಬೇಕಿದೆ.
ಹೀಗೆಂದು ಹೇಳಿದ್ದು ಪ್ರಧಾನಿ ನರೇಂದ್ರ ಮೋದಿ. ಜುಲೈ ತಿಂಗಳ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ರವಿವಾರ ಮಾತನಾಡಿದ ಅವರು, “1941, ಆಗಸ್ಟ್ 9ರಂದು ಮಹಾತ್ಮಾ ಗಾಂಧಿ ಅವರಿಂದ ಚಾಲನೆ ಕಂಡ “ಭಾರತ ಬಿಟ್ಟು ತೊಲಗಿ’ (ಕ್ವಿಟ್ ಇಂಡಿಯಾ)ಚಳವಳಿ ಬಗ್ಗೆ ಪ್ರಸ್ತಾವಿಸಿ, ಅದೇ ಕೆಚ್ಚೆದೆಯಿಂದ ನವ ಭಾರತ ಕಟ್ಟಲು ಹೋರಾಟ ನಡೆಯಬೇಕಿದೆ. ಕ್ವಿಟ್ ಇಂಡಿಯಾ ಚಳವಳಿಯ ಪರಿಣಾಮ ಬ್ರಿಟಿಷರು ದೇಶಬಿಟ್ಟು ಹೋಗುವಂತಾಯಿತು. 1947, ಆ.15ರಂದು ದೇಶಕ್ಕೂ ಸ್ವಾತಂತ್ರ್ಯ ಸಿಕ್ಕಿತು’ ಎಂದು ಹೇಳಿದರು.
ಅಲ್ಲದೆ, 1942ರಿಂದ 1947ರ ಅವಧಿ ನಿರ್ಣಾಯಕವಾದುದಾಗಿತ್ತು. 2017ರಿಂದ 2022ರ ಅವಧಿಯೂ ನಿರ್ಣಾಯಕ ಅವಧಿಯಾಗಬೇಕೆಂದು ಎದುರುನೋಡುತ್ತಿದ್ದೇನೆ. ದೇಶದ ಸಮಸ್ಯೆಗಳಿಗೆ ಅಂತ್ಯ ಹಾಡಬೇಕಿದೆ. ಇದಕ್ಕೆ, ಪ್ರತಿಯೊಬ್ಬ ಭಾರತೀಯ ಮುಂದಿನ 5 ವರ್ಷಗಳಲ್ಲಿ ದೇಶಕ್ಕಾಗಿ ಏನನ್ನಾದರೂ ತ್ಯಾಗ ಮಾಡಬೇಕೆನ್ನುವುದರ ಬಗ್ಗೆ ಸಂಕಲ್ಪ ಮಾಡಬೇಕಿದೆ ಎಂದಿದ್ದಾರೆ ಪ್ರಧಾನಿ ಮೋದಿ.
ಹಬ್ಬಗಳಿಗೆ ದೇಶೀ ವಸ್ತುಗಳನ್ನೇ ಬಳಸಿ: 125 ಕೋಟಿ ಜನರು ಆ.15ರ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸಬೇಕು. ಹಾಗೇ, ರಕ್ಷಾಬಂಧನ, ಜನ್ಮಾಷ್ಟಮಿ, ಗಣೇಶ್ ಚತುರ್ಥಿ, ದೀಪಾವಳಿ ಹಬ್ಬಗಳನ್ನು ದೇಶಿ ವಸ್ತುಗಳನ್ನೇ ಬಳಸಿ ಆಚರಿಸಿ. ಇದು ದೇಶದ ಆರ್ಥಿಕ ಅಭಿವೃದ್ಧಿಗೆ ನೆರವಾಗಲಿದೆ. ಬಡ ಜನರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಜತೆ ಜತೆಗೇ ಸಾಮಾಜಿಕ ಸ್ಥಿತಿಯೂ ಉತ್ತಮಗೊಳ್ಳಲಿದೆ ಎಂದು ಹೇಳಿದರು.
ಹವಾಮಾನ ವರದಿ ಫಾಲೋ ಮಾಡಿ
ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ, ಉತ್ತರ ಭಾರತದ ರಾಜ್ಯಗಳಲ್ಲಿ ಪ್ರವಾಹದಿಂದ ಸಾಕಷ್ಟು ನಷ್ಟವಾಗಿರುವು ದನ್ನು ಗಮನಿಸಿದ್ದೇನೆ. ಸೂಕ್ತ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ. ವಿಮಾ ಕಂಪನಿಗಳ ಅಧಿಕಾರಿಗಳು ಸಂಕಷ್ಟದಲ್ಲಿರುವ ರೈತರಿಗೆ ಧೈರ್ಯ ತುಂಬುವ ರೀತಿಯಲ್ಲಿ ಪ್ರಾಮಾಣಿಕ ಸ್ಪಂದನೆಗೆ ಮುಂದಾಗಬೇಕಿದೆ. ಹಾಗೆಯೇ, ಹವಾಮಾನ ಇಲಾಖೆ ನೀಡುವ ನಿಖರ ವರದಿಗಳನ್ನು ಆಧರಿಸಿಯೇ ರೈತರು ಮುಂದಿನ ಹೆಜ್ಜೆ ಇಡಬೇಕು ಎಂದಿದ್ದಾರೆ.
ಜಿಎಸ್‌ಟಿ ಜಾರಿ ಅಧ್ಯಯನ ವಿಷಯ
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಚಾರದ ಬಗ್ಗೆಯೂ ಮಾತನಾಡಿದ ಮೋದಿ ಅವರು, “ಜಿಎಸ್‌ಟಿ ಅನುಷ್ಠಾನವೇ ಒಂದು ಅಧ್ಯಯನ ವಿಷಯ. ವಿಶ್ವದ ಕೆಲವು ಪಂಡಿತರು ಹಾಗೂ ಆರ್ಥಿಕ ತಜ್ಞರು ಇಂದು ಜಿಎಸ್‌ಟಿ ಅನುಷ್ಠಾನ ಹಾಗೂ ಬದಲಾವಣೆಯ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಲಕ್ಷಾಂತರ ಮಂದಿ ಇದನ್ನು ಅಳವಡಿಸಿಕೊಳ್ಳುವಲ್ಲಿ ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ. ದೇಶದ ಸಹಕಾರ ತತ್ವಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ ಕೂಡ. ಈ ನಿರ್ಧಾರ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಕಾರದಿಂದಲೇ ಸಾಧ್ಯವಾಗಿರುವುದು. ತೆರಿಗೆ ಸುಧಾರ ಣೆಯೇ ಜಿಎಸ್‌ಟಿ, ಬಳಕೆಯಿಂದ ಹೊಸ ಸಂಸ್ಕೃತಿ ಸಾಧ್ಯ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.