ಬಿಹಾರ ಮೇಲ್ಮನೆ ವಿರೋಧ ಪಕ್ಷದ ನಾಯಕಿಯಾಗಿ ರಾಬ್ರಿ ದೇವಿ
Team Udayavani, May 12, 2018, 4:56 PM IST
ಪಟ್ನಾ : ಬಿಹಾರದ ಮಾಜಿ ಮುಖ್ಯಮಂತ್ರಿ, ಹಿರಿಯ ಆರ್ಜೆಡಿ ನಾಯಕಿ, ರಾಬ್ರಿ ದೇವಿ ಅವರಿಗೆ ಬಿಹಾರದ ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕಿಯ ಸ್ಥಾನಮಾನವನ್ನು ಕೊಡಲಾಗಿದೆ. ಬಿಹಾರ ವಿಧಾನ ಪರಿಷತ್ನಲ್ಲಿ ಆರ್ಜೆಡಿಯ ಸಂಖ್ಯಾಬಲ ಹೆಚ್ಚಿರುವ ಕಾರಣ ರಾಬ್ರಿಗೆ ಈ ಹುದ್ದೆ ಪ್ರಾಪ್ತವಾಗಿದೆ.
ಬಿಹಾರ ವಿಧಾನ ಪರಿಷತ್ತಿಗೆ ಈಚೆಗೆ ನಡೆದಿದ್ದ ದ್ವೆ„ವಾರ್ಷಿಕ ಚುನಾವಣೆಯಲ್ಲಿ 75 ಸದಸ್ಯ ಬಲದ ಸದನದಲ್ಲಿ ಆರ್ಜೆಡಿ ಸಂಖ್ಯಾ ಬಲ 7ರಿಂದ 9ಕ್ಕೆ ಏರಿತು. ಹಾಗಾಗಿ ವಿರೋಧ ಪಕ್ಷ ನಾಯಕಿಯ ಸ್ಥಾನ ಪಡೆಯುವ ಅರ್ಹತೆ ರಾಬ್ರಿ ದೇವಿ ಅವರಿಗೆ ಒದಗಿತು.
ರಾಬ್ರಿ ದೇವಿ ಪರವಾಗಿ ಆರ್ಜೆಡಿ ಅಧ್ಯಕ್ಷ ರಾಮಚಂದ್ರ ಪುರ್ವೆ ಅವರು ವಿರೋಧ ಪಕ್ಷ ನಾಯಕಿಯ ಸ್ಥಾನಮಾನ ಕೋರುವ ಅರ್ಜಿಯನ್ನು ಸಲ್ಲಿಸಿದರೆಂದು ವಿಧಾನ ಪರಿಷತ್ ಉಪಾಧ್ಯಕ್ಷ ಹರೂನ್ ರಶೀದ್ ಮಾಧ್ಯಮಕ್ಕೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.