ಹೈದರಾಬಾದ್ ಜೈಲಿನಲ್ಲಿ ಕೈದಿಗಳಿಗಾಗಿ FM ರೇಡಿಯೋ ಸೌಕರ್ಯ ಆರಂಭ
Team Udayavani, Mar 12, 2019, 9:51 AM IST
ಹೈದರಾಬಾದ್ : ಹೈದರಾಬಾದಿನ ಚಂಚಲಗುಡ ಬಂಧೀಖಾನೆಯಲ್ಲಿನ ಕೈದಿಗಳು ಈಗ ರೇಡಿಯೋದಲ್ಲಿ ಸಿನಿಮಾ ಸಂಗೀತ ಕೇಳಬಹುದಾಗಿದೆ ಮತ್ತು ತಮ್ಮ ರೇಡಿಯೋ ಕಾರ್ಯಕ್ರಮಗಳನ್ನು ಸಾದರಪಡಿಸಬಹುದಾಗಿದೆ. ಬಂಧೀಖಾನೆಯೊಳಗೆ ಜೈಲು ಅಧಿಕಾರಿಗಳು ಆಂತರಿಕ ಎಫ್ ಎಂ ರೇಡಿಯೋ ಸೌಕರ್ಯ ಆರಂಭಿಸಿರುವುದು ಇದು ಸಾಧ್ಯವಾಗಿದೆ.
ಜೈಲಿನಲ್ಲಿರುವ ಕೈದಿಗಳಲ್ಲಿರುವ ಸೃಷ್ಟಿಶೀಲತೆಯನ್ನು ಅನ್ವೇಷಿಸಲು ಮತ್ತು ಅವರ ಪುನರ್ ವಸತಿ ಪ್ರಕ್ರಿಯೆಯನ್ನು ಅನುಕೂಲಿಸಲು ಎಫ್ ಎಂ ರೇಡಿಯೋ ಸೌಕರ್ಯ ಆರಂಭಿಸಲಾಗಿದೆ ಎಂದು ತೆಲಂಗಾಣ ಬಂಧೀಖಾನೆ ಮಹಾ ನಿರ್ದೇಶಕ ವಿ ಕೆ ಸಿಂಗ್ ತಿಳಿಸಿದ್ದಾರೆ.
ಸಿನಿಮಾ ಸಂಗೀತದ ಜತೆಗೆ ಉತ್ತಮ ನಡವಳಿಕೆ ಕುರಿತ ಬೋಧನೆಗಳನ್ನು ಕೂಡ ಕೈದಿಗಳು ಆಲಿಸಬಹುದಾಗಿದೆ ಎಂದವರು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.