Rafale ಗುತ್ತಿಗೆ ಫ್ರಾನ್ಸ್ ಕಂಪೆನಿಯಿಂದ:ಅನಿಲ್ ರಿಲಯನ್ಸ್ ಹೇಳಿಕೆ
Team Udayavani, Aug 13, 2018, 12:06 PM IST
ಹೊಸದಿಲ್ಲಿ : ರಾಫೇಲ್ ಫೈಟರ್ ಜೆಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಈಗ ರಾಜಕೀಯ ಬಿರುಗಾಳಿಗೆ ಸಿಲುಕಿರುವ ಬಿಲಿಯಾಧಿಪತಿ ಉದ್ಯಮಿ, ರಿಲಯನ್ಸ್ ಸಮೂಹದ ಅನಿಲ್ ಅಂಬಾನಿ ಅವರ ರಿಲಯನ್ಸ್ ಡಿಫೆನ್ಸ್ ಕಂಪೆನಿ “ರಾಫೇಲ್ ಗುತ್ತಿಗೆ ತನಗೆ ರಕ್ಷಣಾ ಸಚಿವಾಲಯದಿಂದ ಸಿಕ್ಕಿದ್ದಲ್ಲ; ಫ್ರಾನ್‌ನ ಡಸ್ಸಾಲ್ಟ್ ಕಂಪೆನಿಯಿಂದ’ ಎಂದು ಸ್ಪಷ್ಟಪಡಿಸಿದೆ.
36 ರಾಫೇಲ್ ಫೈಟ್‌ರ್ ಜೆಟ್‌ಗಳನ್ನು ಪೂರೈಸಲಿರುವ ಫ್ರಾನ್ಸ್‌ನ ಡಸಾಲ್ಟ್ ಕಂಪೆನಿಯು ಗುತ್ತಿಗೆಯಲ್ಲಿನ ತನ್ನ ರಫ್ತು ಬಾಧ್ಯತೆಯನ್ನು ನಿರ್ವಹಿಸಲು ರಿಲಯನ್ಸ್ ಡಿಫೆನ್ಸ್ ಕಂಪೆನಿಯನ್ನು ಆಯ್ಕೆ ಮಾಡಿತ್ತು. ಡಸ್ಸಾಲ್ಟ್ ಕಂಪೆನಿಯು ತನ್ನ ಭಾರತೀಯ ಪಾಲುದಾರರನ್ನು ಆಯ್ಕೆ ಮಾಡಿರುವುದರಲ್ಲಿ ರಕ್ಷಣಾ ಸಚಿವಾಲಯದ ಯಾವುದೇ ಪಾತ್ರ ಇಲ್ಲ ಎಂದು ಅನಿಲ್ ಅಂಬಾನಿ ಕಂಪೆನಿ ಹೇಳಿದೆ.
ಮಾಧ್ಯಮದೊಂದಿಗೆ ಮಾತನಾಡಿರುವ ರಿಲಯನ್ಸ್ ಡಿಫೆನ್ಸ್ ಲಿಮಿಟೆಡ್ ಸಿಇಓ ರಾಜೇಶ್ ಧಿಂಗ್ರಾ ಅವರು “ಸರಕಾರ-ಸರಕಾರ ನಡುವಿನ ಈ ವಹಿವಾಟಿನಲ್ಲಿ ಎಲ್ಲ 36 ಫೈಟರ್ ಜೆಟ್‌ಗಳನ್ನು ಹಾರಾಟ ಸನ್ನದ್ಧ ಸ್ಥಿತಿಯಲ್ಲಿ ಪೂರೈಸಬೇಕಾಗಿದೆ; ಎಂದರೆ ಇವುಗಳನ್ನು ಫ್ರಾನ್ಸ್‌ನ ಡಸ್ಸಾಲ್ಟ್ ಕಂಪೆನಿಯು ರಫ್ತು ಮಾಡಬೇಕಿದೆ. ಭಾರತದಲ್ಲಿ ಯಾವುದೇ ಫೈಟರ್ ಜೆಟ್ ನಿರ್ಮಾಣವಾಗದಿರುವ ಸರಳ ಕಾರಣಕ್ಕೆ ಎಚ್‌ಎಎಲ್ ಅಥವಾ ಬೇರೆ ಯಾರೂ ಉತ್ಪಾದನಾ ಏಜನ್ಸಿಯಾಗಲು ಸಾಧ್ಯವಿಲ್ಲ ‘ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.