ಮತ್ತೆ ಎದ್ದು ಕೂತ ರಫೇಲ್‌ ಗುಮ್ಮ

ರಫೇಲ್‌ ಡೀಲ್‌ ಬಳಿಕ ರಿಲಯನ್ಸ್‌ನ 1,121 ಕೋಟಿ ರೂ. ತೆರಿಗೆ ಮನ್ನಾ?

Team Udayavani, Apr 14, 2019, 6:00 AM IST

j-31

ಹೊಸದಿಲ್ಲಿ: ಬೂದಿಮುಚ್ಚಿದ ಕೆಂಡದಂತಿರುವ ರಫೇಲ್‌ ಕೂಪದಲ್ಲಿ ಮತ್ತೆ ಬೆಂಕಿ ಭುಗಿಲೆದ್ದಿದೆ. ಫ್ರಾನ್ಸ್‌ನ ಹೆಸರಾಂತ ದೈನಿಕ “ಲೆ ಮೊಂಡೆ’, ಭಾರತ ಸರಕಾರವು ನವೀಕರಣಗೊಂಡ ರಫೇಲ್‌ ಒಪ್ಪಂದವನ್ನು ಪ್ರಕಟಿಸುತ್ತಿದ್ದಂತೆ, ಅತ್ತ, ಫ್ರಾನ್ಸ್ ನಲ್ಲಿ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಕಮ್ಯೂನಿಕೇಶನ್‌ ಸಂಸ್ಥೆಯ ಮೇಲೆ ಅಲ್ಲಿನ ಸರಕಾರ ವಿಧಿಸಿದ್ದ 143.7 ಮಿಲಿಯನ್‌ ಪೌಂಡುಗಳಷ್ಟು (ಅಂದಾಜು 1,121 ಕೋಟಿ ರೂ.) ತೆರಿಗೆಯನ್ನು ಮನ್ನಾ ಮಾಡಲಾಗಿದೆ ಎಂಬ ಸ್ಫೋಟಕ ವಿಚಾರವನ್ನು ಹೊರಹಾಕಿದೆ. ಇದು ಈ ವಿಚಾರದಲ್ಲಿ ಮತ್ತೂಂದು ಸುತ್ತಿನ ಪರ- ವಿರೋಧ ಚರ್ಚೆಗೆ ನಾಂದಿ ಹಾಡಿದೆ.

ರಿಲಯನ್ಸ್‌ ನಿರಾಕರಣೆ: ಪತ್ರಿಕೆಯ ವರದಿಯನ್ನು ನಿರಾಕರಿಸಿರುವ ರಿಲಯನ್ಸ್‌, “ಫ್ರಾನ್ಸ್‌ನಲ್ಲಿ ತನ್ನ ಮೇಲಿದ್ದ ತೆರಿಗೆಯನ್ನು ಕಾನೂನು ಚೌಕಟ್ಟಿನ ವ್ಯಾಪ್ತಿಯಲ್ಲೇ ಕಟ್ಟಲಾಗಿದೆ. ಇದರಲ್ಲಿ ಯಾವುದೇ ಕೃತ್ರಿಮತೆ ಅಡಗಿಲ್ಲ’ ಎಂದಿದೆ. ಇನ್ನೊಂದೆಡೆ, ಹೊಸದಿಲ್ಲಿಯಲ್ಲಿರುವ ಫ್ರಾನ್ಸ್‌ನ ರಾಯಭಾರ ಕಚೇರಿಯಿಂದಲೂ ಸ್ಪಷ್ಟನೆ ಹೊರಬಿದ್ದಿದೆ. ಫ್ರಾನ್ಸ್‌ನಲ್ಲಿರುವ ರಿಲಯನ್ಸ್‌ ಕಮ್ಯೂನಿ ಕೇಶನ್‌ ಕಂಪೆನಿಯ ಮೇಲಿದ್ದ ತೆರಿಗೆ ಮನ್ನಾ ನಿರ್ಧಾರವನ್ನು ಫ್ರಾನ್ಸ್‌ನ ಸರಕಾರ ಮತ್ತು ಅಲ್ಲಿನ ಕಾನೂನಿಗೆ ಅನುಗುಣವಾಗಿಯೇ ಕೈಗೊಳ್ಳಲಾಗಿದೆ. ಇದ ರಲ್ಲಿ ಯಾವುದೇ ರಾಜಕೀಯ ಹಸ್ತ ಕ್ಷೇಪವಿಲ್ಲ ಎಂದು ಹೇಳಿದೆ.

ಕಾಂಗ್ರೆಸ್‌ ಪ್ರತಿಕ್ರಿಯೆ: ಹೊಸ ಬೆಳವಣಿಗೆ ಬಗ್ಗೆ ಕಾಂಗ್ರೆಸ್‌ ಪ್ರತಿಕ್ರಿಯಿಸಿದ್ದು, “ಮೋದಿಯವರ ಕೃಪಾಕಟಾಕ್ಷದಿಂದಲೇ ರಿಲಯನ್ಸ್‌ ಕಂಪೆನಿಯ ಮೇಲಿನ ತೆರಿಗೆ ಮನ್ನಾ ಆಗಿರುವುದು ಇದರಿಂದ ಸ್ಪುಟ ವಾಗಿದೆ’ ಎಂದಿದೆ. “”ರಫೇಲ್‌ ಹೆಸರಿ  ನಲ್ಲಿ ಅಂಬಾನಿ ಹಾಗೂ ಫ್ರಾನ್ಸ್‌ ನಡುವೆ ಮೋದಿಯವರು “ದಲ್ಲಾಳಿ’ಯಂತೆ ಕೆಲಸ ಮಾಡಿರುವುದು ಸ್ಪಷ್ಟವಾಗಿದೆ. ಹೊಸದಾಗಿ ಸೃಷ್ಟಿಯಾದ ರಿಲಯನ್ಸ್‌ ಡಿಫೆನ್ಸ್‌ ಕಂಪೆನಿಗೆ ರಫೇಲ್‌ ಒಪ್ಪಂದ ನೀಡುವ ಮೂಲಕ ತಮ್ಮ ಸ್ನೇಹಿತ ಅನಿಲ್‌ ಅಂಬಾನಿಗೆ ಮೋದಿ ಲಾಭ ಮಾಡಿಕೊಟ್ಟಿದ್ದಾರೆ” ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುಜೇವಾಲ ಹೇಳಿದ್ದಾರೆ.

ಹಿಂದಿನ ರಫೇಲ್‌ ಒಪ್ಪಂದ ನವೀಕರಣಗೊಳಿಸುವ ಮೂಲಕ ಮೋದಿಯವರು ಜನರ ತೆರಿಗೆ ದುಡ್ಡನ್ನು ವ್ಯರ್ಥ ಗೊಳಿಸಿ ದ್ದಾರೆ. ಅಲ್ಲದೆ, ಅನಿಲ್‌ ಅಂಬಾನಿ ಯಂಥ ಬಂಡವಾಳ ಶಾಹಿಗಳ ತೆರಿಗೆ ಮನ್ನಾಕ್ಕೂ ಸಹಕರಿಸಿದ್ದಾರೆ.
ಸೀತಾರಾಂ ಯೆಚೂರಿ, ಸಿಪಿಎಂ ನಾಯಕ

ಟಾಪ್ ನ್ಯೂಸ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

3

Atul Subhash Case: ಮೊಮ್ಮಗನನ್ನು ಟೆಕಿ ಅತುಲ್‌ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

4-dandeli

Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.