ಭಾರತೀಯ ವಾಯುಪಡೆಗೆ ರಫೇಲ್ ಅಧಿಕೃತ ಸೇರ್ಪಡೆ, ಬಾನಂಗಳದಲ್ಲಿ ಶಕ್ತಿಪ್ರದರ್ಶನ
ಕಾರ್ಯ ಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲೆ ಭಾಗವಹಿಸಿದ್ದರು.
Team Udayavani, Sep 10, 2020, 11:43 AM IST
ನವದೆಹಲಿ: ಫ್ರಾನ್ಸ್‌ನಿಂದ ಈಗಾಗಲೇ ಭಾರತಕ್ಕೆ ತರಲಾಗಿರುವ ಐದು ರಫೇಲ್ ಯುದ್ಧ ಮಾನಗಳು ಗುರುವಾರ(ಸೆಪ್ಟೆಂಬರ್ 10, 2020) ಅಧಿಕೃತವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಭಾರತೀಯ ವಾಯುಸೇನೆಗೆ ಸೇರ್ಪಡೆಗೊಂಡಿದೆ.
ಹರ್ಯಾಣದ ಅಂಬಾಲಾದಲ್ಲಿ ನಡೆದ ಈ ಕಾರ್ಯ ಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲೆ, ರಕ್ಷಣಾ ಪಡೆಗಳ ಮುಖ್ಯಸ್ಥ ಜ.ಬಿಪಿನ್ ರಾವತ್, ಐಎಎಫ್ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ಆರ್.ಕೆ.ಎಸ್.ಬಧೌರಿಯಾ ಸೇರಿ ಪ್ರಮುಖರು ಭಾಗವಹಿಸಿದ್ದರು.
ಬಳಿಕ ಎರಡೂ ದೇಶಗಳ ರಕ್ಷಣಾ ಸಚಿವರು ದ್ವಿಪಕ್ಷೀಯ ಬಾಂಧವ್ಯ ವೃದ್ಧಿ, ರಕ್ಷಣಾ ಕ್ಷೇತ್ರದಲ್ಲಿ ಸಹಕಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಕಡಲು ಸಂಬಂಧಿ ಭದ್ರತೆ, ಉಗ್ರ ನಿಗ್ರಹ ಕ್ಷೇತ್ರದಲ್ಲಿ ಸಹಕಾರಗಳ ಬಗ್ಗೆಯೂ ಮಾತುಕತೆ ನಡೆದಿರುವುದಾಗಿ ವರದಿ ತಿಳಿಸಿದೆ.
#WATCH Rafale fighter aircraft flying at low-speed during an air display at Indian Air Force base in Ambala pic.twitter.com/8UhgbROzRN
— ANI (@ANI) September 10, 2020
ಸೇನೆಗೆ ರಫೇಲ್ ಸೇರ್ಪಡೆ ವೇಳೆ ಸರ್ವ ಧರ್ಮ ಪೂಜೆ, ಸಾರಂಗ್, ತೇಜಸ್ ಪಡೆಗಳಿಂದ ವೈಮಾನಿಕ ಪ್ರದರ್ಶನ ನಡೆಯಿತು. ಭಾರತ ಫ್ರಾನ್ಸ್ ಜತೆ 36 ಯುದ್ಧ ವಿಮಾನಗಳ ಖರೀದಿಗಾಗಿ 59 ಸಾವಿರ ಕೋಟಿ ರೂಪಾಯಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದರಲ್ಲಿ ಐದು ಯುದ್ಧ ವಿಮಾನಗಳು ಭಾರತೀಯ ವಾಯುಪಡೆಯ ಪೈಲಟ್ ಗಳ ತರಬೇತಿಗಾಗಿ ಫ್ರಾನ್ಸ್ ನಲ್ಲೇ ಇದ್ದು, ಉಳಿದ 5 ರಫೇಲ್ ವಿಮಾನಗಳು ಜುಲೈ 29ರಂದು ಭಾರತಕ್ಕೆ ಬಂದಿದ್ದವು.
*5 ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆ
*3 ಯುದ್ಧ ವಿಮಾನಗಳಲ್ಲಿ ಸಿಂಗಲ್ ಸೀಟ್ ಹಾಗೂ ಎರಡು ವಿಮಾನಗಳಲ್ಲಿ ಡಬ್ಬಲ್ ಸೀಟ್ ಹೊಂದಿದ್ದು, ಅಂಬಾಲಾ ವಾಯುನೆಲೆಯಲ್ಲಿ ಇವೆ.
*ರಫೇಲ್ ಅವಳಿ ಎಂಜಿನ್ ಹೊಂದಿದ್ದು, ಇದೊಂದು ಅತ್ಯಾಧುನಿಕ ಮಲ್ಟಿ ರೋಲ್ ನ ಯುದ್ಧ ವಿಮಾನವಾಗಿದೆ.
*ಫ್ರೆಂಚ್ ಏರ್ ಕ್ರಾಫ್ಟ್ ಡಸಾಲ್ಟ್ ರಫೇಲ್ ಯುದ್ಧ ವಿಮಾನವನ್ನು ನಿರ್ಮಿಸಿದೆ.
*ಒಂದು ಗಂಟೆಗೆ 2,223 ಕಿಲೋ ಮೀಟರ್ ವೇಗದಲ್ಲಿ ಚಲಿಸಲಿದೆ.
*ರಫೇಲ್ ಯುದ್ಧ ವಿಮಾನದ ತೂಕ 24,500 ಕೆಜಿ
*3,700 ಕಿಲೋ ಮೀಟರ್ ದೂರದವರೆಗೆ ದಾಳಿ ನಡೆಸಬಲ್ಲ ಸಾಮರ್ಥ್ಯ ಹೊಂದಿದೆ.
*9,500 ಕೆಜಿ ಭಾರವನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.