ರಾಹುಲ್ ಆಪ್ತರಿಗೆ ರಕ್ಷಣಾ ಒಪ್ಪಂದ?
Team Udayavani, May 5, 2019, 7:46 AM IST
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಆಪ್ತರೊಬ್ಬರಿಗೆ ರಕ್ಷಣಾ ಒಪ್ಪಂದ ನೀಡಲಾಗಿದೆ ಎಂದು ಮಾಧ್ಯಮಗಳ ವರದಿಯನ್ನು ಉಲ್ಲೇಖೀಸಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಆರೋಪಿಸಿದ್ದಾರೆ. ಯುಪಿಎ ಅಧಿಕಾರದಲ್ಲಿದ್ದಾಗ ಈ ಒಪ್ಪಂದವನ್ನು ನೀಡಲಾಗಿದ್ದು, ಈ ಗಂಭೀರ ಆರೋಪಕ್ಕೆ ರಾಹುಲ್ ಪ್ರತಿಕ್ರಿಯಿಸಬೇಕು ಎಂದಿದ್ದಾರೆ. ಆದರೆ ಜೇಟ್ಲಿ ಆರೋಪವನ್ನು ನಿರಾಕರಿಸಿದ ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್, ಈ ಆರೋಪ ನಿರಾಧಾರ ಎಂದಿದ್ದಾರೆ.
ರಾಹುಲ್ ಹಾಗೂ ಅವರ ಸೋದರಿ ಪ್ರಿಯಾಂಕಾ ವಾದ್ರಾ ಲಂಡನ್‌ನಲ್ಲಿ ಸ್ಥಾಪಿಸಿದ ಬ್ಯಾಕಾಪ್ಸ್ ಸರ್ವೀಸಸ್ ಕಂಪನಿಗೆ ಉಲ್ರಿಕ್ ಮೆಕ್‌ನೈಟ್ ಕೂಡ ನಿರ್ದೇಶಕರಾಗಿದ್ದರು. ಕಾಂಗ್ರೆಸ್ ನಾಯಕರ ಪುತ್ರಿಯನ್ನು ಈ ಮೆಕ್‌ನೈಟ್ ವಿವಾಹವಾಗಿದ್ದಾರೆ. ಇವರು ರಾಹುಲ್ ಗಾಂಧಿಯ ಆಪ್ತ ಬಳಗದಲ್ಲೊಬ್ಬರು. ಸಬ್‌ಮರೀನ್ ನಿರ್ಮಾಣಕ್ಕೆ ಫ್ರೆಂಚ್ ಕಂಪನಿಯೊಂದಕ್ಕೆ ಭಾರತೀಯ ಸೇನೆ ನೀಡಿದ ಒಪ್ಪಂದದಲ್ಲಿ ಮೆಕ್‌ನೈಟ್‌ಗೆ ಆಫ್ಸೆಟ್ ಒಪ್ಪಂದ ಸಿಕ್ಕಿದೆ. ಈ ಆಫ್ಸೆಟ್ ಒಪ್ಪಂದದಲ್ಲಿ ರಾಹುಲ್ ಪಾತ್ರವೇನು? ರಕ್ಷಣಾ ಒಪ್ಪಂದಗಳ ಡೀಲರ್ ಆಗಬೇಕೆಂದಿದ್ದರೇ? ಎಂದು ಜೇಟ್ಲಿ ಪ್ರಶ್ನಿಸಿದ್ದಾರೆ. ರಾಹುಲ್, ಮೆಕ್‌ನೈಟ್ ಹಾಗೂ ಬಾಲಿವುಡ್ ನಟ ಅಮಿತಾಭ್ ಬಚ್ಚನ್‌ರ ಸೋದರ ಅಜಿತಾಭ್ ಬಚ್ಚನ್ ಒಂದೇ ವಿಳಾಸವನ್ನು ಈ ಕಂಪನಿಗೆ ನೀಡಿದ್ದಾರೆ ಎಂದೂ ಜೇಟ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.