ಪಿಡಿ ಜತೆ ರಾಹುಲ್ ಕಾರ್ ರೈಡ್!
Rahul Car Ride with PD!
Team Udayavani, May 30, 2019, 6:00 AM IST
ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ನೊಂದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮನಸ್ಸಿಗೆ ಸಮಾಧಾನ ತಂದುಕೊಳ್ಳಲು ಮಾಡಿದ್ದೇನು ಗೊತ್ತಾ? ತಮ್ಮ ಪ್ರೀತಿಯ ಸಾಕು ನಾಯಿ ‘ಪಿಡಿ’ ಜತೆ ಕಾರ್ ರೈಡ್ ಹೋಗಿದ್ದು!
ಹೌದು ರಾಹುಲ್ ಅವರು ಹೊಸದಿಲ್ಲಿಯ ತುಘಲಕ್ ಲೇನ್‌ನ ತಮ್ಮ ಮನೆಯಿಂದ ಕಾರಿನಲ್ಲಿ ಹೊರಟು, ನಗರದಲ್ಲಿ ಸುತ್ತು ಹಾಕಿದ್ದರು. ಈ ವೇಳೆ, ತಮ್ಮ ಸಾಕು ನಾಯಿ ಪಿಡಿಯನ್ನು ಹಿಂಬದಿ ಸೀಟಿನಲ್ಲಿ ಕೂರಿಸಿದ್ದ ರಾಹುಲ್, ಸ್ವತಃ ಕಾರು ಚಲಾಯಿಸುತ್ತಾ ಸಿಟಿ ರೌಂಡ್ಸ್ ಹಾಕುತ್ತಿದ್ದರು.
ರಾಹುಲ್ ಅವರು ಕಾರಲ್ಲಿ ಸಂಚರಿಸುತ್ತಿದ್ದ ಈ ಫೋಟೋವನ್ನು ಅನಿಲ್ ಶರ್ಮಾ ಎಂಬವರು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಇದು ಕೆಲವೇ ಗಂಟೆಗಳಲ್ಲಿ 1600 ಲೈಕ್ ಹಾಗೂ 312 ರೀಟ್ವೀಟ್ ಕಂಡಿವೆ.
ರಾಜೀನಾಮೆ ನೀಡದಂತೆ ಮನೆ ಹೊರಗೆ ನಿರಶನ: ಹೀನಾಯ ಸೋಲಿನಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವ ರಾಹುಲ್ ಗಾಂಧಿ ಈಗ ಗೊಂದಲದಲ್ಲಿ ಬೀಳುವಂತಾಗಿದೆ. ರಾಜೀನಾಮೆ ನೀಡದಂತೆ ಒತ್ತಾಯಿಸಿ ಕಾಂಗ್ರೆಸ್‌ನ ನೂರಾರು ಕಾರ್ಯಕರ್ತರು ಬುಧವಾರ ಅವರ ನಿವಾಸದ ಹೊರಗೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ಪಕ್ಷಕ್ಕೆ ನಿಮ್ಮ ನಾಯಕತ್ವ ಬೇಕು. ರಾಜೀನಾಮೆ ಕೂಡಲೇ ಹಿಂಪಡೆಯಿರಿ ಎಂದು ಅವರು ಒತ್ತಾಯಿಸಿದ್ದಾರೆ. ಕೊನೆಗೆ ದಿಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ಬಿಡುಗಡೆ ಮಾಡಿದ್ದಾರೆ. ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರೂ ರಾಹುಲ್ ಮನವೊಲಿಸಲು ಯತ್ನಿಸಿ ವಿಫಲರಾಗಿದ್ದಾರೆ. ಹೀಗಾಗಿ ಅವರೂ ಬೆಂಬಲಿಗರ ಜತೆ ರಾಹುಲ್ ಮನೆ ಹೊರಗೆ ಧರಣಿ ಕೂರಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…
Kerala: ತಂಜಾವೂರು ಪ್ರವಾಸ ಮುಗಿಸಿ ವಾಪಸ್ಸಾಗುತ್ತಿದ್ದ ಬಸ್ ಅಪಘಾತ: ನಾಲ್ವರು ಮೃತ್ಯು
Chhattisgarh: ಪತ್ರಕರ್ತ ಮುಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನಲ್ಲಿ ಬಂಧನ
ಅಪ್ಪನನ್ನೇ ಬದಲಿಸಿದ ಅತಿಶಿ: ಪ್ರಿಯಾಂಕಾ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ಬಿಧುರಿ
Prashant Kishor: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್ ಕಿಶೋರ್ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Daskath ಮೆಚ್ಚಿದ ಪ್ರೇಕ್ಷಕರಿಗೆ ಬಿಗ್ ನ್ಯೂಸ್ ಕೊಟ್ಟ ಚಿತ್ರತಂಡ
BBK11: ಮಂಜು ನೋಡಿ ʼಥೂ..ʼ ಎಂದ ತ್ರಿವಿಕ್ರಮ್; ದೊಡ್ಮನೆಯಲ್ಲಿ ಮತ್ತೆ ಹೋಗೋ ಬಾರೋ ಗಲಾಟೆ
Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.