“ಅನಪೇಕ್ಷಿತ ಉದ್ಯಮಿಗಳೊಂದಿಗೆ’ Rahul Gandhi ಭೇಟಿ ವಿವಾದ
ಗುಲಾಂ ನಬಿ ಹೇಳಿಕೆ: ಕಾಂಗ್ರೆಸ್‌ನಿಂದ ಸ್ಪಷ್ಟನೆ ಕೇಳಿದ ಬಿಜೆಪಿ
Team Udayavani, Apr 11, 2023, 7:25 AM IST
ಹೊಸದಿಲ್ಲಿ: “ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶಕ್ಕೆ ಪ್ರವಾಸ ಹೋದಾಗಲೆಲ್ಲ “ಅನಪೇಕ್ಷಿತ ಉದ್ಯಮಿಗಳನ್ನು’ ಭೇಟಿ ಮಾಡುತ್ತಾರೆ,’ ಎಂದು ಕಾಂಗ್ರೆಸ್‌ನ ಮಾಜಿ ನಾಯಕ, ಡೆಮಾಕ್ರಟಿಕ್ ಪ್ರೊಗ್ರೆಸಿವ್ ಅಜಾ ದ್ ಪಕ್ಷದ ಮುಖ್ಯಸ್ಥ ಗುಲಾಂ ನಬಿ ಆಜಾದ್ ಆರೋಪಿಸಿದ್ದಾರೆ.
“ಅದಾನಿ ಕಂಪನಿಯಲ್ಲಿ 20,000 ಕೋಟಿ ರೂ. ಬೇನಾಮಿ ಹೂಡಿಕೆ ಯಾರದು?’ ಎಂದು ರಾಹುಲ್ ಗಾಂಧಿ ಮಾಡಿದ್ದ ಟ್ವೀ ಟ್‌ನಲ್ಲಿ ಆಜಾದ್, ಸಿಂಧಿಯಾ, ಕಿ ರಣ್ ರೆಡ್ಡಿ, ಬಿಸ್ವಾ ಮತ್ತು ಅನಿಲ್ ಆ್ಯಂಟನಿ ಹೆಸರನ್ನು ಬಳಸಿದ್ದರು.
ಈ ಕುರಿತು ಏಷ್ಯಾನೆಟ್‌ಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿ ಯಿಸಿರುವ ಆಜಾದ್, “ನನಗೆ ಗಾಂಧಿ ಕುಟುಂಬದ ಬಗ್ಗೆ ಗೌರವ ಇದೆ. ಇಡೀ ಗಾಂಧಿ ಕುಟುಂಬವೇ ಉದ್ಯಮಿ ಯೊಂದಿಗೆ ಸಂಪರ್ಕದಲ್ಲಿದ್ದಾರೆ. ವಿದೇ ಶಕ್ಕೆ ಹೋದಾಗ ರಾಹುಲ್ ಗಾಂಧಿ ಎಲ್ಲಿ ಎಲ್ಲಿಗೆ ಹೋಗುತ್ತಾರೆ ಹಾಗೂ ಯಾವ ಅನಪೇಕ್ಷಿತ ಉದ್ಯ ಮಿಗಳನ್ನು ಭೇಟಿಯಾಗುತ್ತಾರೆ ಎಂಬುದನ್ನು ಹೇಳಬೇಕಾಗುತ್ತದೆ,’ ಎಂದಿದ್ದಾರೆ
ಮುಗಿಬಿದ್ದ ಬಿಜೆಪಿ: ಗುಲಾಂ ನಬಿ ಅವರ ಈ ಸಂದರ್ಶನವನ್ನು ಹಿಡಿದುಕೊಂಡು ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಮುಗಿ ಬಿದ್ದಿದೆ. “ವಿದೇಶ ಪ್ರವಾಸಗಳಲ್ಲಿ ಯಾವ ಯಾವ ಉದ್ಯಮಿಗಳನ್ನು ಭೇಟಿ ಮಾಡಿದ್ದರು ಮತ್ತು ಯಾ ವ ಕಾರಣಕ್ಕೆ ಭೇಟಿಯಾಗಿದ್ದರು ಎಂಬುದನ್ನು ರಾಹುಲ್ ಬಹಿರಂ ಗಪ ಡಿಸಬೇಕು,’ ಎಂದು ಆಗ್ರಹಿಸಿದೆ.
“ಯಾರನ್ನು ರಾಹುಲ್ ಭೇಟಿಯಾಗುತ್ತಿದ್ದರು? ಅವರ ಅಜೆಂಡಾ ಏನು? ದೇಶವನ್ನು ದುರ್ಬಲ ಗೊಳಿಸಲು ಭಾರತ- ವಿರೋಧಿ ಉದ್ಯಮಿಗಳ ಜತೆ ರಾಹುಲ್ ಕೈಜೋಡಿಸಿದ್ದಾ ರೆಯೇ ?. ದೇಶಕ್ಕೆ ಇದರ ಮಾಹಿತಿ ಬೇಕಿದೆ,’ ಎಂದು ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಇನ್ನೊಂದೆಡೆ, ಆಜಾದ್ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್, “ಆಜಾದ್ ಅವರು ಪ್ರಧಾನಿ ಮೋದಿಯವರಿಗೆ ತಮ್ಮ ವಿಧೇಯತೆಯನ್ನು ಪ್ರದರ್ಶಿಸಲು ದಿನದಿಂದ ದಿನಕ್ಕೆ ಎಷ್ಟು ಕೆಳಮಟ್ಟಕ್ಕೆ ಇಳಿಯುತ್ತಿದ್ದಾರೆ ಎಂಬುದನ್ನು ಇದು ತೋರಿಸುತ್ತಿದೆ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
MUST WATCH
ಹೊಸ ಸೇರ್ಪಡೆ
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.