ರಾಹುಲ್ “ಮಾನಸ’ ವಿವಾದ
Team Udayavani, Sep 8, 2018, 6:00 AM IST
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಕಾಂಗ್ರೆಸ್, ಯಾತ್ರೆಯ ಕೆಲ ಫೋಟೋಗಳನ್ನು ಟ್ವಿಟರ್‌ನಲ್ಲಿ ಪ್ರಕಟಿಸಿರುವುದು ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಈ ಫೋಟೋಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಮಾನಸ ಯಾತ್ರೆಯ ಸತ್ಯಾಸತ್ಯತೆಯ ವಿಶ್ಲೇಷಣೆಗಳು ನಡೆಯುತ್ತಿವೆ.
ಕಾಂಗ್ರೆಸ್ ಹೇಳ್ಳೋದೇನು? ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿದ ಫೋಟೋವೊಂದರಲ್ಲಿ ಕೈಲಾಸ ಪರ್ವತದ ತಪ್ಪಲಲ್ಲಿ ಸಹ ಯಾತ್ರಾರ್ಥಿಗಳ ಜತೆಗೆ ರಾಹುಲ್ ಕುಳಿತಿದ್ದಾರೆ. ಅವರ ಹಿಂದೆ ಹಿಮಚ್ಛಾದಿತ ಬೆಟ್ಟದ ತಪ್ಪಲು ಕಾಣಿಸುತ್ತದೆ. ಇದೇ ವೇಳೆ, ರಾಹುಲ್ ಅವರ ಫಿಟೆ°ಸ್ ಬಗ್ಗೆ ಟಿಪ್ಪಣಿಯನ್ನೂ ನೀಡಿರುವ ಕಾಂಗ್ರೆಸ್, ಕೈಲಾಸ ಪರ್ವತಾರೋಹಣದ ವೇಳೆ ರಾಹುಲ್, 463 ನಿಮಿಷಗಳಲ್ಲಿ 446 44,433 ಮೆಟ್ಟಿಲುಗಳನ್ನು ಏರಿ 4,466 ಕ್ಯಾಲೊರಿ ಕಳೆದುಕೊಂಡಿದ್ದಾರೆ ಎಂದಿದೆ.
ವಾಕಿಂಗ್ ಸ್ಟಿಕ್ ಮೇಲೆ ಅನುಮಾನ: ಇಷ್ಟೆಲ್ಲಾ ಆದರೂ, ರಾಹುಲ್ ಅವರ ಒಂದು ಫೋಟೋದಲ್ಲಿ ವಾಕಿಂಗ್ ಸ್ಟಿಕ್ ಹಿಡಿದು ಯಾತ್ರಾರ್ಥಿ ಜತೆ ತೆಗೆಸಿಕೊಂಡಿರುವ ಫೋಟೋ ಅನುಮಾನಗಳಿಗೆ ಮೂಲ ಕಾರಣ. ಹಿಮಾಲಯದಲ್ಲಿ ಟ್ರೆಕ್ಕಿಂಗ್ ಮಾಡುವಾಗ ಇಂಥ ಸಾಮಾನ್ಯ ವಾಕಿಂಗ್ ಸ್ಟಿಕ್ ಬಳಸಲಾಗುತ್ತದೆಯೇ ಎಂದು ಹಲವರು ಪ್ರಶ್ನಿಸಿದ್ದಾರೆ. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹಾಗೂ ಇತರ ಬಿಜೆಪಿ ನಾಯಕರದ್ದೂ ಇದೇ ಪ್ರಶ್ನೆಯಾಗಿದ್ದು, ಇದು ನಕಲಿ ಫೋಟೋ ಎಂದು ಸಿಂಗ್ ಹೇಳಿದ್ದಾರೆ. ಇದು ರಾಹುಲ್ ಶಿವಭಕ್ತ ಎಂಬುದನ್ನು ಸಾಬೀತುಪಡಿಸಲು ಕಾಂಗ್ರೆಸ್ ಈ “ಹರ’ ಸಾಹಸ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.