ಪಿತ್ರೋಡ ಜೀ, ನಿಮಗೆ ನಾಚಿಕೆಯಾಗಬೇಕು, ನೀವು ದೇಶದ ಕ್ಷಮೆಯಾಚಿಸಬೇಕು: ರಾಹುಲ್
Team Udayavani, May 13, 2019, 7:15 PM IST
ಖನ್ನಾ , ಪಂಜಾಬ್ : 1984ರ ಸಿಕ್ಖ್ ವಿರೋಧಿ ನರಮೇಧಕ್ಕೆ ಸಂಬಂಧಿಸಿ ‘ಹುವಾ ತೋ ಹುವಾ – ಆದದ್ದು ಆಗಿ ಹೋಯಿತು, ಏನೀಗ ?’ ಎಂದು ಕಾಂಗ್ರೆಸ್ ನ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್ ಪಿತ್ರೋಡ ನೀಡಿದ್ದ ವಿವಾದಾತ್ಮಕ ಹೇಳಿಕೆ ಈಗ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಅವರಿಗೆ ಪಂಜಾಬ್ ನಲ್ಲಿ ತಿರುಗುಬಾಣವಾಗಿದೆ.
ಪಂಜಾಬ್ ನ ಮೊದಲ ಚುನಾವಣಾ ರಾಲಿಯಲ್ಲಿಂದು ಮಾತನಾಡಿದ ರಾಹುಲ್ ಗಾಂಧಿ, “ಹುವಾ ತೋ ಹೇಳಿಕೆ ನೀಡಿದ್ದ ಪಿತ್ರೋಡ ಗೆ ನಾಚಿಕೆಯಾಗಬೇಕು; ಅವರು ಈ ಹೇಳಿಕೆಗಾಗಿ ದೇಶದ ಕ್ಷಮೆಯಾಚಿಸಬೇಕು’ ಎಂದು ಬಹಿರಂಗವಾಗಿ ಹೇಳುವ ಮೂಲಕ ಪಕ್ಷಕ್ಕೆ ಈಗಾಗಲೇ ಆಗಿರುವ ಭಾರೀ ಹಾನಿಯನ್ನು ಕಡಿಮೆಗೊಳಿಸುವ ಪ್ರಯತ್ನ ಮಾಡಿದರು.
ರಾಹುಲ್ ಗಾಂಧಿ ಅವರು ಈ ಮೊದಲೇ ಪಿತ್ರೋಡ ಅವರ ಹುವಾ ತೋ ಹುವಾ ಹೇಳಿಕೆಗೆ ತನ್ನ ಸಹಮತ ಇಲ್ಲ ಎಂದಿದ್ದರಲ್ಲದೆ ಅವರ ಹೇಳಿಕೆಯಿಂದ ದೂರ ಸರಿದಿದ್ದರು.
‘1984ರ ಸಿಕ್ಖ್ ವಿರೋಧಿ ಹಿಂಸೆ ಬಗ್ಗೆ ಸ್ಯಾಮ್ ಪಿತ್ರೋಡ ನೀಡಿದ್ದ ಹೇಳಿಕೆ ಸಂಪೂರ್ಣವಾಗಿ ತಪ್ಪು; ಅದಕ್ಕಾಗಿ ಅವರು (ಪಿತ್ರೋಡ) ದೇಶದ ಕ್ಷಮೆಯಾಚಿಸಬೇಕು; ನಾನಿದನ್ನು ಸಾರ್ವಜನಿಕವಾಗಿ ಹೇಳುತ್ತಿದ್ದೇನೆ; ಅವರಿಗೆ ಫೋನ್ ಮೂಲಕ ಈಗಾಗಲೇ ನಾನಿದನ್ನು ಹೇಳಿದ್ದೇನೆ. ಪಿತ್ರೋಡ ಜೀ, ನೀವು ಹೇಳಿರುವುದು ಸಂಪೂರ್ಣ ತಪ್ಪು; ಆ ಬಗ್ಗೆ ನಿಮಗೆ ನಾಚಿಕೆಯಾಗಬೇಕು; ಅದಕ್ಕಾಗಿ ನೀವು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು’ ಎಂದು ರಾಹುಲ್ ಗಾಂಧಿ ಇಂದಿಲ್ಲಿ ಮಾಡಿದ ಚುನಾವಣಾ ಪ್ರಚಾರ ಭಾಷಣದ ಕೊನೆಯಲ್ಲಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.