ನಂಜನಗೂಡು-ವಯನಾಡ್ ರೈಲು ಯೋಜನೆಗೆ ನೆರವು ನೀಡಿ
Team Udayavani, Dec 5, 2019, 12:55 AM IST
ಹೊಸದಿಲ್ಲಿ: ಕರ್ನಾಟಕದ ನಂಜನಗೂಡು – ವಯನಾಡು-ನಿಲಂಬೂರ್ ರೈಲ್ವೇ ಯೋಜನೆ ಕಾಮಗಾರಿ ಹಲವಾರು ವರ್ಷಗಳಿಂದ ಕುಂಟುತ್ತಾ ಸಾಗಿದೆ. ಈ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸಲು ಕೇಂದ್ರ ಸರಕಾರ ಕೇರಳಕ್ಕೆ ಸಹಾಯ ಮಾಡಬೇಕು ಎಂದು ವಯನಾಡು ಸಂಸದ ರಾಹುಲ್ ಗಾಂಧಿ ಬುಧವಾರ ಲೋಕಸಭೆಯಲ್ಲಿ ಆಗ್ರಹಿಸಿದರು.
ಆ ಭಾಗದಲ್ಲಿ ರೈಲ್ವೇ ಸಂಪರ್ಕ ಏನೇನೂ ಪ್ರಗತಿಯಾಗಿಲ್ಲ. ಬಂಡೀಪುರ ರಾಷ್ಟ್ರೀಯ ಹೆದ್ದಾರಿಯನ್ನು ರಾತ್ರಿ ವೇಳೆ ಮುಚ್ಚಿದ್ದನ್ನು ಪ್ರಸ್ತಾವಿಸಿ, ಜನರಿಗೆ ಸಂಚಾರಕ್ಕೆ ಅನನುಕೂಲವಾಗಿದೆ. ಹೀಗಾಗಿ ಆ ಭಾಗದ ಜನರು ತೀರಾ ಅಗತ್ಯದ ಸಮಯದಲ್ಲೂ ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಹೋಗಲು ಪರದಾಡಬೇಕಾಗುತ್ತದೆ. ಆದರೂ ಈ ಕಾಮಗಾರಿ ಹಲವಾರು ವರ್ಷಗಳಿಂದ ಪ್ರಗತಿ ಕಾಣುತ್ತಿಲ್ಲ ಎಂದರು.
ಈ ರೈಲ್ವೇ ಮಾರ್ಗ ಕಾರ್ಯಾರಂಭ ಮಾಡಿದರೆ ವಯನಾಡಿನಿಂದ ಬೆಂಗಳೂರು ಮತ್ತು ತಿರುವನಂತಪುರಂ ನಡುವಿನ ಪ್ರಯಾಣದ ಅವಧಿ ತಗ್ಗುತ್ತದೆ. ಜತೆಗೆ ವಯನಾಡು ಭಾಗದ ಜನರಿಗೆ ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ. ಈ ರೈಲ್ವೇ ಮಾರ್ಗ ಆ ಭಾಗದ ಜನರ ಬಹುದಿನಗಳ ಕನಸು. ಆದರೆ ಅದು ಈಡೇರುತ್ತಿಲ್ಲ. ಸಾಮಾಜಿಕ ಮತ್ತು ಆರ್ಥಿಕ ಪ್ರಾಮುಖ್ಯ ಕಾರಣದಿಂದಾಗಿ ಈ ರೈಲ್ವೇ ಮಾರ್ಗ ಅತ್ಯಗತ್ಯ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್ ರಗಳೆ
German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್ ಶೆಫರ್ಡ್ ನಾಯಿ ಕೊಂದ!
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.