ಸಿಎಂ ರೂಪಾಣಿ ನಿರಾಕರಣೆ ಬಳಿಕ ದಲಿತರಿಂದ ರಾಹುಲ್ ಧ್ವಜ ಸ್ವೀಕಾರ
Team Udayavani, Nov 24, 2017, 11:26 AM IST
ಅಹ್ಮದಾಬಾದ್ : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಶುಕ್ರವಾರದಿಂದ ಎರಡು ದಿನಗಳ ಗುಜರಾತ್ ಚುನಾವಣಾ ಪ್ರವಾಸ ಕೈಗೊಳ್ಳಲಿದ್ದು ಈ ಸಂದರ್ಭದಲ್ಲಿ ಅವರು ದಲಿತ ಸಮುದಾಯದವರು ತಯಾರಿಸಿರುವ ಬೃಹತ್ ರಾಷ್ಟ್ರ ಧ್ವಜವನ್ನು ಸ್ವೀಕರಿಸಲಿದ್ದಾರೆ.
ಈ ಬೃಹತ್ ಗಾತ್ರದ ರಾಷ್ಟ್ರ ಧ್ವಜವನ್ನು ಸುರಕ್ಷಿತವಾಗಿ ಇಡುವ ಸ್ಥಳಾವಕಾಶದ ಕೊರತೆಯ ಕಾರಣಕ್ಕೆ ಅದನ್ನು ಸ್ವೀಕರಿಸಲು ಈ ಮೊದಲು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ನಿರಾಕರಿಸಿದ್ದರು ಎಂದು ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.
ಸುಮಾರು 125 ಅಡಿ ಅಗಲ ಮತ್ತು 83.3 ಅಡಿ ಎತ್ತರದ ಈ ಬೃಹತ್ ಧ್ವಜವನ್ನು ರಾಹುಲ್ ಗಾಂಧಿ ಇಂದು ಶುಕ್ರವಾರ ಸನಾದ್ ನ ದಲ್ತಿ ಶಕ್ತಿ ಕೇಂದ್ರದಲ್ಲಿ ಸ್ವೀಕರಿಸುವರು.
ರಾಹುಲ್ ಗಾಂಧಿ ಅವರ ಎರಡು ದಿನಗಳ ಗುಜರಾತ್ ಪ್ರವಾಸದ ಮುಖ್ಯ ಕಾರ್ಯಕ್ರಮಗಳಲ್ಲಿ ಸನಾದ್ ಪಟ್ಟಣಕ್ಕೆ ಸಮೀಪದಲ್ಲಿ ದಲಿತ ಸಮುದಾಯದ ಕಾರ್ಯಕರ್ತರು ನಡೆಸುತ್ತಿರುವ ವೃತ್ತಿಪರ ತರಬೇತಿ ಕೇಂದ್ರ “ದಲಿತ ಶಕ್ತಿ ಕೇಂದ್ರ’ (ಡಿಎಸ್‌ಕೆ)ಕ್ಕೆ ಭೇಟಿ ಕೊಡುವುದು ಕೂಡ ಒಂದಾಗಿದೆ.
ಡಿಎಸ್‌ಕೆ ಸಂಸ್ಥಾಪಕ ಮಾರ್ಟಿನ್ ಮ್ಯಾಕ್‌ವನ್ ಹೇಳುವ ಪ್ರಕಾರ ಈ ಬೃಹತ್ ಗಾತ್ರದ ರಾಷ್ಟ್ರ ಧ್ವಜ ದೇಶದಲ್ಲಿ ಅಸ್ಪೃಶ್ಯತೆಯನ್ನು ಕೊನೆಗೊಳಿಸುವ ಆಂದೋಲನದ ಭಾಗವಾಗಿದೆ.
ದೇಶದ ಹತ್ತು ರಾಜ್ಯಗಳ ದಲಿತರು ಒಗ್ಗೂಡಿ ರಚಿಸಿರುವ ಈ ಬೃಹತ್ ರಾಷ್ಟ್ರ ಧ್ವಜವನ್ನು ಸ್ಥಳಾವಕಾಶದ ಕೊರತೆಯ ನೆಪವೊಡ್ಡಿ ಮುಖ್ಯಮಂತ್ರಿಗಳ ಅಧಿಕಾರಿಗಳು ಸ್ವೀಕರಿಸಲು ನಿರಾಕರಿಸಿರುವುದು ರಾಷ್ಟ್ರ ಧ್ವಜಕ್ಕೆ ಹಾಗೂ ದಲಿತರಿಗೆ ಎಸಗಲಾಗಿರುವ ಅಪಮಾನವೇ ಸರಿ ಎಂದವರು ವಿಷಾದಿಸಿದರು.
ಈ ಬೃಹತ್ ಗಾತ್ರದ ರಾಷ್ಟ್ರ ಧ್ವಜವನ್ನು ಖಾದಿ ಬಟ್ಟೆಯಿಂದ ತಯಾರಿಸಲಾಗಿದೆ; ಸುಮಾರು 100 ದಲಿತ ಶಕ್ತಿ ಕೇಂದ್ರಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸುಮಾರು 25 ದಿನಗಳ ಕಾಲ ಶ್ರಮಿಸಿ ವಿನ್ಯಾಸಗೊಳಿಸಿ ಬಣ್ಣ ಹಚ್ಚಿರುವ ಈ ಧ್ವಜವು 125 ಅಡಿ ಉದ್ದವಿದೆ; ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಇದನ್ನು ದಲಿತರು ಸಿದ್ಧಪಡಿಸಿದ್ದಾರೆ ಎಂದು ಮಾರ್ಟಿನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.